ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್‌ಗೆ ಅವಕಾಶ ಸಿಗುತ್ತಾ? ರಾಹುಲ್ ದ್ರಾವಿಡ್ ಉತ್ತರ

Rishabh pant

2022ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ರಿಷಬ್ ಪಂತ್‌ಗೆ ಅವಕಾಶ ಸಿಗುತ್ತದೆಯೇ ಎಂಬುದು ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ತವರಿನಲ್ಲಿ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ರಿಷಬ್ ಪಂತ್ ಟೀಕೆಗೆ ಗುರಿಯಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡಕ್ಕೆ ಅವರನ್ನು ಆಯ್ಕೆ ಮಾಡುವುದು ಕಷ್ಟ ಎಂದು ಇದು ಸೂಚಿಸುತ್ತದೆ.

ಇನ್ನು ಹಿರಿಯ ಆಟಗಾರರಾದ ಕೆಎಲ್ ರಾಹುಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡದಲ್ಲಿದ್ದು, ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ಉಳಿಸಿಕೊಂಡು ಪಂತ್ ಔಟ್ ಆಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಪಂತ್ ಅವರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶವಿದೆಯೇ ಎಂಬುದರ ಕುರಿತು ಪ್ರಮುಖ ಹೇಳಿಕೆ ನೀಡಿದ್ದಾರೆ.

ಪಂತ್ ಇಡೀ ಟೂರ್ನಿಯಿಂದ ಗಳಿಸಿದ್ದು 58 ರನ್

ಪಂತ್ ಇಡೀ ಟೂರ್ನಿಯಿಂದ ಗಳಿಸಿದ್ದು 58 ರನ್

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಬೇಕಿದ್ದ ಸರಣಿಯ ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ 2-2ರಲ್ಲಿ ಡ್ರಾದಲ್ಲಿ ಅಂತ್ಯಗೊಂಡಿದೆ. ಪಂತ್ ಈ ಸರಣಿಯಲ್ಲಿ ಕೇವಲ 58 ರನ್ ಗಳಿಸಿದ್ದರು. ಅವರ ಸ್ಟ್ರೈಕ್ ರೇಟ್ ಕೇವಲ 105 ಆಗಿದೆ.

ರನ್ ಗಿಂತ ಹೆಚ್ಚಾಗಿ ಪಂತ್ ಔಟಾಗಿರುವ ರೀತಿ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರನ್ನು ಬೆರಗಾಗಿಸಿದೆ. ಪದೇ ಪದೇ ಆಫ್‌ಸೈಡ್ ವೈಡ್ ಬಾಲ್‌ಗಳನ್ನು ಹೊಡೆಯಲು ಹೋಗುತ್ತಿದ್ದ ಪಂತ್ ಕ್ಯಾಚ್ ನೀಡಿ ಔಟಾಗಿದ್ದಾರೆ.

ಅವರು ಅಜಾಗರೂಕ ಬ್ಯಾಟಿಂಗ್ ಮತ್ತು ತಪ್ಪುಗಳಿಂದ ಪಾಠ ಕಲಿಯಲು ಸಾಧ್ಯವಾಗದ ಆಟಗಾರ ಎಂದು ವಿಶ್ಲೇಷಕರು ಹೇಳುತ್ತಾರೆ. ಹೀಗಾಗಿ ಅವರಿಗಿಂತ ಉತ್ತಮ ಬ್ಯಾಟ್ಸ್ ಮನ್ ಆಗಿರುವ ದಿನೇಶ್ ಕಾರ್ತಿಕ್ ಅಂತಿಮ ತಂಡದಲ್ಲಿದ್ದರೆ, ಉತ್ತಮ ಎಂದು ಚರ್ಚೆಯಲ್ಲಿದೆ. ಇದರೊಂದಿಗೆ ಟೀಂ ಇಂಡಿಯಾ ಟಿ20 ಸೆಟಪ್‌ನಲ್ಲಿ ಪಂತ್ ಸ್ಥಾನದ ಬಗ್ಗೆ ಸಂದಿಗ್ಧತೆ ಮುಂದುವರಿದಿದೆ.

ಟಿ20 ವಿಶ್ವಕಪ್‌ಗೆ ಪಂತ್ ಸಮರ್ಥ ಆಟಗಾರ

ಟಿ20 ವಿಶ್ವಕಪ್‌ಗೆ ಪಂತ್ ಸಮರ್ಥ ಆಟಗಾರ

ಆದರೆ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡದಲ್ಲಿ ಪಂತ್ ಪ್ರಮುಖ ಆಟಗಾರನಾಗಲಿದ್ದಾರೆ ಎಂದು ದ್ರಾವಿಡ್ ಭಾನುವಾರ ಸ್ಪಷ್ಟಪಡಿಸಿದ್ದಾರೆ. ''ವೈಯಕ್ತಿಕವಾಗಿ ಅವರು ಇನ್ನೂ ಕೆಲವು ರನ್‌ಗಳನ್ನು ಮಾಡಬೇಕಿತ್ತು. ಆದರೆ ಅದು ಅವರ ಆಟವನ್ನು ನಿರ್ಧರಿಸುವ ವಿಷಯವಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ಅವರು ಖಂಡಿತವಾಗಿಯೂ ನಮ್ಮ ಯೋಜನೆಗಳ ದೊಡ್ಡ ಭಾಗವಾಗುತ್ತಾರೆ''ಎಂದು ದ್ರಾವಿಡ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸರಣಿಯ ಆಧಾರದ ಮೇಲೆ ಪಂತ್ ಅವರ ಪ್ರದರ್ಶನವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪಂತ್ ಮಧ್ಯಮ ಕ್ರಮಾಂಕದಲ್ಲಿ ಕ್ಯಾಲಿಬರ್ ಆಟಗಾರನಾಗಿ ತನ್ನ ಪ್ರಾಮುಖ್ಯತೆಯನ್ನು ತಂಡದಲ್ಲಿ ತೋರಿಸಿದ್ದಾನೆ ಎಂದಿದ್ದಾರೆ.

IND vs SA: ನಾಯಕನಾಗಿ ಗೆದ್ದ ಪಂತ್; ದ.ಆಫ್ರಿಕಾ ವಿರುದ್ಧದ ಈ ಸಾಧನೆ ಕೊಹ್ಲಿ, ಧೋನಿಯೂ ಮಾಡಿಲ್ಲ!

ಶೀಘ್ರದಲ್ಲೇ ಐಪಿಎಲ್ ಮಾದರಿಯ ಆಟ ನಡೆಯಲಿದೆ

ಶೀಘ್ರದಲ್ಲೇ ಐಪಿಎಲ್ ಮಾದರಿಯ ಆಟ ನಡೆಯಲಿದೆ

ಆಟವನ್ನು ನಿರ್ಣಾಯಕ ವಿಧಾನಕ್ಕೆ ಹೋಲಿಸಲು ನಾನು ಇಷ್ಟಪಡುವುದಿಲ್ಲ. ಮಧ್ಯಮ ಓವರ್‌ಗಳಲ್ಲಿ ಆಕ್ರಮಣಕಾರಿ ಬ್ರ್ಯಾಂಡ್ ಕ್ರಿಕೆಟ್‌ನಲ್ಲಿ ಸ್ವಲ್ಪಮಟ್ಟಿಗೆ ಆಡುವ ಆಟಗಾರ ನಮಗೆ ಬೇಕು. ಸ್ವಲ್ಪ ಆ ವೇಗದೊಂದಿಗೆ ಆಟವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಎರಡು ಅಥವಾ ಮೂರು ಪಂದ್ಯಗಳನ್ನು ಆಧರಿಸಿ, ಅವರು ಕಳಪೆ ಆಟಗಾರರಾಗುತ್ತಾರೆಯೇ ಎಂದು ಊಹಿಸುವುದು ಕಷ್ಟ. ಐಪಿಎಲ್‌ನಲ್ಲಿ ಪಂತ್‌ ಸ್ಟ್ರೈಕ್ ರೇಟ್ 158 ಪ್ಲಸ್ ಆಗಿದೆ.

ಅವರು ಈ ಸ್ಟ್ರೈಕ್ ರೇಟ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಐಪಿಎಲ್ 2022ರ ಸೀಸನ್‌ನಲ್ಲಿ 340 ರನ್ ಗಳಿಸಿದರು. ಸ್ಟ್ರೈಕ್ ರೇಟ್‌ಗೆ ಸಂಬಂಧಿಸಿದಂತೆ ಅವರು ಉತ್ತಮ ಐಪಿಎಲ್‌ ಪ್ರದರ್ಶನವನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅಂತರಾಷ್ಟ್ರೀಯ ಪಂದ್ಯಗಳಲ್ಲಿಯೂ ಅವರಿಂದ ಅದೇ ಮಟ್ಟದ ಅಂಕಿ ಅಂಶಗಳನ್ನು ಪಡೆಯುವ ಭರವಸೆ ಇದೆ ಎಂದು ದ್ರಾವಿಡ್ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಹಲವು ಬಾರಿ 5 ವಿಕೆಟ್ ಗೊಂಚಲು ಪಡೆದ ಬ್ಯಾಟ್ಸ್‌ಮನ್‌ಗಳಿವರು

ಇಂದು ಮಾಡು ಇಲ್ಲವೇ ಮಡಿ ಪಂದ್ಯ! | *Cricket | Oneindia Kannada
ಕೆಲವೊಮ್ಮೆ ತಪ್ಪಾಗುತ್ತದೆ, ಆದ್ರೆ ಆತನ ಬಗ್ಗೆ ತಿಳಿದಿದೆ

ಕೆಲವೊಮ್ಮೆ ತಪ್ಪಾಗುತ್ತದೆ, ಆದ್ರೆ ಆತನ ಬಗ್ಗೆ ತಿಳಿದಿದೆ

''ತಂಡವು ಬ್ಯಾಟಿಂಗ್‌ನಲ್ಲಿರುವ ಸ್ಥಾನವನ್ನು ಅವಲಂಬಿಸಿ ಕೆಲವೊಮ್ಮೆ ಆಡುವ ಉದ್ದೇಶವನ್ನು ನೋಡಬೇಕಾಗುತ್ತದೆ. ಆಕ್ರಮಣಕಾರಿ ಸಮಯದಲ್ಲಿ ಅವರು ಕೆಲವು ಪಂದ್ಯಗಳಲ್ಲಿ ತಪ್ಪುಗಳನ್ನು ಮಾಡಬಹುದು, ಆದರೆ ಅವರು ನಮ್ಮ ಬ್ಯಾಟಿಂಗ್ ಲೈನ್‌ಅಪ್‌ನ ಅವಿಭಾಜ್ಯ ಅಂಗವಾಗಿ ಉಳಿದಿದ್ದಾರೆ. ಆತನ ಪವರ್ ಹಿಟ್ಟಿಂಗ್ ಬಗ್ಗೆ ನಮಗೆ ಉತ್ತಮ ತಿಳುವಳಿಕೆ ಇದೆ. ಅದರಲ್ಲೂ ಭಾರತದ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಅವರು ಪರಿಪೂರ್ಣ ಎಡಗೈ ಬ್ಯಾಟ್ಸ್ ಮನ್. ನಾವು ಈ ವಿಷಯವನ್ನು ಹೆಚ್ಚು ಮಹತ್ವಪೂರ್ಣಗೊಳಿಸಬೇಕಾಗಿದೆ. ಅವರು ಮಧ್ಯಮ ಓವರ್‌ಗಳಲ್ಲಿ ಸಾಕಷ್ಟು ಬಾರಿ ಉತ್ತಮ ಇನ್ನಿಂಗ್ಸ್‌ ಆಡಿದ್ದಾರೆ'' ಎಂದು ರಾಹುಲ್ ದ್ರಾವಿಡ್ ಹೇಳಿದರು.

Story first published: Monday, June 20, 2022, 15:19 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X