ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಬ್ಯಾಟಿಂಗ್ ಕುರಿತು ಬಹುಮುಖ್ಯವಾದ ಸಲಹೆ ನೀಡಿದ ಸುನಿಲ್ ಗವಾಸ್ಕರ್‌

Pant and gavaskar

ಟಿ20 ಕ್ರಿಕೆಟ್‌ನಲ್ಲಿ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಎಡವಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್ ಅತ್ಯಮೂಲ್ಯ ಸಲಹೆಯನ್ನು ನೀಡಿದ್ದಾರೆ. ರಿಷಭ್ ಪಂತ್‌ಗೆ ಇನ್ನೆರಡು ದಿನ ಮಾತ್ರ ಬಾಕಿ ಇದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಸರಣಿಯು ಭರದಿಂದ ಸಾಗುತ್ತಿದೆ. 3ನೇ ಟಿ-20 ಪಂದ್ಯದಲ್ಲಿ ಭಾರತ ತಂಡ ಮೊದಲ ಜಯ ಸಾಧಿಸಿದ್ದರೂ ಸಹ ದಕ್ಷಿಣ ಆಫ್ರಿಕಾ ತಂಡವೇ ಸದ್ಯ 2-1ರಲ್ಲಿ ಮುನ್ನಡೆ ಸಾಧಿಸಿದೆ.

ಪಂದ್ಯ ಗೆದ್ದರೂ, ಪಂತ್ ಫಾರ್ಮ್‌ನಿಂದ ಅಭಿಮಾನಿಗಳು ಬೇಸರ

ಪಂದ್ಯ ಗೆದ್ದರೂ, ಪಂತ್ ಫಾರ್ಮ್‌ನಿಂದ ಅಭಿಮಾನಿಗಳು ಬೇಸರ

ಮೊದಲೆರಡು ಟಿ20 ಪಂದ್ಯಗಳನ್ನು ಸೋತ ಬಳಿಕ ಟೀಂ ಇಂಡಿಯಾ ವಿಶಾಖಪಟ್ಟಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ದಾಖಲೆಯ ಗೆಲುವು ಸಹ ಪಡೆಯಿತು. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಬಹುದೊಡ್ಡ ಗೆಲುವು ಸಾಧಿಸಿತು.

ಈ ಪಂದ್ಯವನ್ನು ಭಾರತ ತಂಡ ಗೆದ್ದುಕೊಂಡಿದ್ದರೂ ಅಭಿಮಾನಿಗಳು ಕೂಡ ತೀವ್ರ ಬೇಸರಗೊಂಡಿದ್ದಾರೆ. ಅದಕ್ಕೆ ಕಾರಣ ರಿಷಬ್ ಬಂತ್ ಅವರ ಫಾರ್ಮ್. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಭರವಸೆಯ ಸ್ಟಾರ್ ಆಟಗಾರ ರಿಷಬ್ ಪಂತ್‌ ಐಪಿಎಲ್‌ನಿಂದಲೂ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ 29, 5, 6 ರನ್‌ಗೆ ಔಟಾಗಿದ್ದಾರೆ.

ಅವಕಾಶ ಸಿಕ್ಕರೆ MS ಧೋನಿ ಮೆದುಳನ್ನು ಓದುವ ಆಸೆ: ದಿನೇಶ್ ಕಾರ್ತಿಕ್

ರಿಷಭ್ ಪಂತ್ ಆಟಕ್ಕೆ ತಕ್ಕಂತಹ ಬ್ಯಾಟಿಂಗ್ ಪ್ರದರ್ಶಿಸಬೇಕು

ರಿಷಭ್ ಪಂತ್ ಆಟಕ್ಕೆ ತಕ್ಕಂತಹ ಬ್ಯಾಟಿಂಗ್ ಪ್ರದರ್ಶಿಸಬೇಕು

ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಟಕ್ಕೆ ಅಭಿಮಾನಿಗಳು ಅತೃಪ್ತಗೊಂಡಿದ್ದಾರೆ. ರಿಷಭ್ ಪಂತ್ ಎಲ್ಲಾ ಕಾರ್ಯ ಮುಗಿದಂತೆ ಬ್ಯಾಟಿಂಗ್ ಮಾಡುತ್ತಿದ್ದು, ಕೆಟ್ಟ ಹೊಡೆತಕ್ಕೆ ಕೈ ಹಾಕುತ್ತಿದ್ದಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡುವುದರ ಜೊತೆಗೆ ಶಾಟ್ ಸೆಲೆಕ್ಷನ್ ಕಡೆಗೆ ಗಮನ ಕೊಡಬೇಕಿದೆ ಎಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

ರಿಷಭ್ ಪಂತ್ ಅವರನ್ನು ಟೀಂ ಇಂಡಿಯಾದಿಂದ ತೆಗೆದುಹಾಕಬೇಕು ಎಂದು ಟೀಕೆಗಳು ಎದುರಾಗುತ್ತಿರುವ ಹಿನ್ನಲೆಯಲ್ಲಿ ಈಗಲೇ ಪಂತ್ ಎಚ್ಚೆತ್ತುಕೊಳ್ಳಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದು, ಪಂತ್ ಉತ್ತಮ ಬ್ಯಾಟಿಂಗ್ ಮಾಡಬೇಕಿದ್ದು, ಅಭಿಮಾನಿಗಳಿಗೆ ಆಯ್ಕೆಗಾರರಿಗೆ ನಿರಾಸೆ ಮೂಡಿಸುವುದನ್ನ ತಪ್ಪಿಸಬೇಕು ಎಂದಿದ್ದಾರೆ. ಇದಕ್ಕೆ ನಾಯಕತ್ವವೇ ಕಾರಣವೇ ಇದ್ದರೂ ಸಹ ಆತ ಬ್ಯಾಟಿಂಗ್ ಮೇಲೂ ಗಮನ ಹರಿಸಬೇಕಿದೆ ಎಂದು ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ.

ICC Test Ranking: ಬೌಲಿಂಗ್‌ನಲ್ಲಿ ಅಗ್ರ 3ರೊಳಗೆ ಜಸ್ಪ್ರೀತ್ ಬುಮ್ರಾ, ಬ್ಯಾಟಿಂಗ್‌ನಲ್ಲಿ ಜೋ ರೂಟ್ ಆಗ್ರಸ್ಥಾನ

ಪಂತ್‌ಗೆ ಇನ್ನೆರಡು ದಿನ ಮಾತ್ರ ಬಾಕಿ ಇದೆ!

ಪಂತ್‌ಗೆ ಇನ್ನೆರಡು ದಿನ ಮಾತ್ರ ಬಾಕಿ ಇದೆ!

ರಿಷಬ್ ಪಂತ್‌ ಗೆ 2 ದಿನ ಮಾತ್ರ ಬಾಕಿ ಇದೆ ಎಂದು ಇದೇ ವೇಳೆಯಲ್ಲಿ ಗವಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ಭಾರತ ತಂಡ ಮೊದಲ ಗೆಲುವು ದಾಖಲಿಸಿರುವುದರಿಂದ ಹೆಚ್ಚು ಖುಷಿ ಪಡಬಾರದು. ಪಂತ್ ಬ್ಯಾಟಿಂಗ್‌ನಲ್ಲೂ ಸಮಸ್ಯೆ ಎದುರಾಗಿದ್ದು, ಶಾಟ್ ಆಯ್ಕೆಯಲ್ಲಿ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ತಂಡದಿಂದ ಹೊರಬೀಳಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.

Story first published: Thursday, June 16, 2022, 10:01 [IST]
Other articles published on Jun 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X