ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿ

Rishabh Pant immensely skilled but needs to be groomed says Syed Kirmani

ಬೆಂಗಳೂರು: ಬಹಳ ಹಿಂದಕ್ಕೆ ಹೋದರೆ ಭಾರತೀಯ ಕ್ರಿಕೆಟ್‌ನಲ್ಲಿ ಸಯ್ಯದ್ ಕಿರ್ಮಾನಿ ವಿಕೆಟ್‌ ಕೀಪಿಂಗ್‌ನಲ್ಲಿ ಸರಿಸಾಟಿಯಿಲ್ಲದ ಆಟಗಾರರಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ದಿನಗಳಲ್ಲಿ ಕಿರ್ಮಾನಿ ಹೆಚ್ಚು ರನ್ ಗಳಿಸುತ್ತಿರಲಿಲ್ಲವೇನೋ. ಆದರೆ ಸ್ಟಂಪ್‌ ಹಿಂದೆ ಮಾತ್ರ 100ಕ್ಕೆ 100 ಅಂಕ ಪಡೆದುಕೊಳ್ಳುವಷ್ಟು ಬಲಿಷ್ಠರಿದ್ದರು. ಆಧುನಿಕ ಯುಗದ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಟಗಾರನೊಬ್ಬ ಒಂದೇ ಕೌಶಲದಲ್ಲಿ ಪರಿಣಿತರಾಗಿರುವುದಕ್ಕಿಂತ ಬೇರೆ ಬೇರೆ ಕೌಶಲಗಳನ್ನು ಹೊಂದಿರಬೇಕು ಅಂತ ಈ ದಿನಗಳ ಕ್ರಿಕೆಟ್‌ ಬಯಸುತ್ತದೆ.

'ಭಾರತ-ಇಂಗ್ಲೆಂಡ್ ಮ್ಯಾಚಿನಿಂದ ವಿಶ್ವಕಪ್‌ನಲ್ಲಿ ಪಾಕ್ ಹೊರ ಬಿದ್ದಿದ್ದಲ್ಲ!': ಹಫೀಜ್'ಭಾರತ-ಇಂಗ್ಲೆಂಡ್ ಮ್ಯಾಚಿನಿಂದ ವಿಶ್ವಕಪ್‌ನಲ್ಲಿ ಪಾಕ್ ಹೊರ ಬಿದ್ದಿದ್ದಲ್ಲ!': ಹಫೀಜ್

ವಿಕೆಟ್ ಕೀಪರ್‌ಗೆ ಬರೀ ಕೀಪಿಂಗ್ ಕೌಶಲವಷ್ಟೇ ಸಾಲದು, ಆತ ಬ್ಯಾಟಿಂಗ್ ಇಲ್ಲವೆ ಬೌಲಿಂಗ್‌ನಲ್ಲೂ ಪರಿಣಿತನಿರಬೇಕೆಂದು ಈಗಿನ ಕ್ರಿಕೆಟ್ ಬಯಸುತ್ತದೆ. ಹೀಗಾಗಿಯೇ ಈಗ ವಿಕೆಟ್‌ ಕೀಪಿಂಗ್‌ನಲ್ಲಷ್ಟೇ ವಿಶೇಷ ಪರಿಣಿತರಿತರಿರುವ ಆಟಗಾರರು ಕೊಂಚ ಮೂಲೆಗುಂಪಾಗುತ್ತಿದ್ದಾರೆ ಎಂದು ಸಯ್ಯದ್ ಕಿರ್ಮಾನಿ ಅಭಿಪ್ರಾಯಿಸಿದ್ದಾರೆ.

ಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನ

ವಿಕೆಟ್‌ ಕೀಪಿಂಗ್, ಕೆಎಲ್ ರಾಹುಲ್, ರಿಷಭ್ ಪಂತ್‌ ಬಗ್ಗೆಯೂ ಕಿರ್ಮಾನಿ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಪದೇ ಪದೇ ಬದಲಾಯಿಸಕೂಡದು

ಪದೇ ಪದೇ ಬದಲಾಯಿಸಕೂಡದು

1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕೀಪರ್ ಕಿರ್ಮಾನಿಗೆ, ಈಗ ವಿರಾಟ್ ಕೊಹ್ಲಿ ತಂಡದಲ್ಲಿ ಕಾಣಸಿಗುವ 'ಕೀಪರ್‌ಗಳ ಬದಲಾವಣೆ' ಸರಿಯೆನಿಸಿಲ್ಲ. ಒಮ್ಮೆ ರಿಷಭ್ ಪಂತ್ ಮತ್ತೊಮ್ಮೆ ಕೆಎಲ್ ರಾಹುಲ್ ಹೀಗೆ ಶಿಫ್ಟ್‌ನಂತೆ ಕೀಪರ್‌ಗಳನ್ನು ಬದಲಾಯಿಸಿದರೆ ಬಲಿಷ್ಠ ಕೀಪರ್ ತಯಾರಾಗೋದು ಕಷ್ಟ ಎಂಬರ್ಥದಲ್ಲಿ ಕಿರ್ಮಾನಿ ಮಾತನಾಡಿದ್ದಾರೆ.

ಹುಟ್ಟಿನಿಂದಲೇ ಆ ಕಲೆಯಿರಬೇಕು

ಹುಟ್ಟಿನಿಂದಲೇ ಆ ಕಲೆಯಿರಬೇಕು

ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಕಿರ್ಮಾನಿ, 'ವಿಕೆಟ್‌ ಕೀಪಿಂಗ್ ಕೌಶಲ ಹುಟ್ಟಿನಿಂದಲೇ ಬರಬೇಕಾ? ನನ್ನ ಬಳಿ ಕೇಳಿದರೆ ನಾನು ಹುಟ್ಟಿನಿಂದಲೇ ಬರಬೇಕು ಎನ್ನುತ್ತೇನೆ. ಉತ್ತಮ ದೃಷ್ಟಿ, ಅಥ್ಲೆಟಿಕ್ ಚುರುಕುತನ, ಪ್ರತಿವರ್ತನ, ನಿರೀಕ್ಷೆಯ ಪ್ರಜ್ಞೆಯೊಂದಿಗೆ ಆ ಕಲೆ ಹುಟ್ಟಿನಲ್ಲೇ ಬರಬೇಕು,' ಎಂದರು.

ರಾಹುಲ್ ಕೀಪಿಂಗ್ ಆರಂಭಿಸಿದ್ದೇ ಗೊತ್ತಿಲ್ಲ

ರಾಹುಲ್ ಕೀಪಿಂಗ್ ಆರಂಭಿಸಿದ್ದೇ ಗೊತ್ತಿಲ್ಲ

'ಕೆಎಲ್ ರಾಹುಲ್‌ಗೆ ಕೀಪಿಂಗ್ ಕೌಶಲ ದೇವರ ವರವಾಗಿ ಬಂದಿದೆಯೋ ನನಗೆ ಗೊತ್ತಿಲ್ಲ. ಈ ಹುಡುಗ ಕರ್ನಾಟಕ ಪ್ರತಿನಿಧಿಸುವ ಮೊದಲು ಎನ್‌ಸಿಎಯಲ್ಲಿ ಬೌಲಿಂಗ್ ಯಂತ್ರದಲ್ಲಿ ಸ್ವತಃ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಯಾವಾಗ ಕೀಪಿಂಗ್ ಆರಂಭಿಸಿದನೋ ನನಗೆ ಗೊತ್ತಿಲ್ಲ. ಆತನಿಗೆ ಒಳ್ಳೆಯದಾಗಲಿ,' ಎಂದು ರಾಹುಲ್‌ಗೆ ಕಿರ್ಮಾನಿ ಹಾರೈಸಿದ್ದಾರೆ.

ಪಂತ್‌ನಲ್ಲಿ ಅಪಾರ ಕೌಶಲವಿದೆ

ಪಂತ್‌ನಲ್ಲಿ ಅಪಾರ ಕೌಶಲವಿದೆ

ಬಹು ನಿರೀಕ್ಷೆ ಹುಟ್ಟಿಸಿ ನಿರಾಸೆ ಮೂಡಿಸುತ್ತಿರುವ ರಿಷಭ್ ಪಂತ್‌ ಬಗ್ಗೆಯೂ ಕಿರ್ಮಾನಿ ಅನಿಸಿಕೆ ಹಂಚಿಕೊಂಡಿದ್ದಾರೆ. 'ರಿಷಭ್ ಪಂತ್‌ನಲ್ಲಿ ಅಪಾರ ಕೌಶಲವಿದೆ. ಆ ಕೌಶಲವನ್ನು ಅನುಭವದೊಂದಿಗೆ ಅಭಿವೃದ್ಧಿಗೊಳಿಸಬೇಕು, ಅರಳಿಸಬೇಕು. ಇದು ಒಂದೇ ರಾತ್ರಿಯಲ್ಲಿ ಆಗಿಹೋಗೋಲ್ಲ. ಬೇಗ ಕಲಿಯುವವರಿಗೆ ಇದಕ್ಕೆ ಕನಿಷ್ಟ ಎರಡು ಸೀಸನ್‌ಗಳು ಬೇಕಾಗುತ್ತದೆ,' ಎಂದು ಸಯ್ಯದ್ ಹೇಳಿದ್ದಾರೆ.

Story first published: Wednesday, June 17, 2020, 15:41 [IST]
Other articles published on Jun 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X