ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವಿಕೆಟ್ ಕೀಪಿಂಗ್‌ ವಿಚಾರದಲ್ಲಿ ರಿಷಭ್ ಪಂತ್ ಈಗಲೂ ತೊಟ್ಟಿಲಲ್ಲಿದ್ದಾರೆ'

Rishabh Pant is in the cradle of wicketkeeping: says Syed Kirmani

ಬೆಂಗಳೂರು: ಪಾದಾರ್ಪಣೆಯ ಟೆಸ್ಟ್‌ ಪಂದ್ಯದಿಂದಲೂ ಭಾರತದ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಗಮನ ಸೆಳೆದಿದ್ದರಾದರೂ ತವರಿನಲ್ಲಿ ನಡೆದ ಬಹುತೇಕ ಟೆಸ್ಟ್‌ ಸರಣಿಗಳಿಂದ ಪಂತ್ ಹೊರಗುಳಿದಿದ್ದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಒಳ್ಳೆಯ ಬ್ಯಾಟಿಂಗ್ ದಾಖಲೆ ಹೊಂದಿದ್ದರೂ ಬಿಸಿಸಿಐ ಪಂತ್‌ ಅವರನ್ನು ಕಡೆಗಣಿಸಿತ್ತು.

ಐಪಿಎಲ್ 2021 ಹರಾಜು ಪಟ್ಟಿಯಲ್ಲಿರುವ ಅತಿ ಹಿರಿಯ ಕ್ರಿಕೆಟರ್ ಯಾರು?ಐಪಿಎಲ್ 2021 ಹರಾಜು ಪಟ್ಟಿಯಲ್ಲಿರುವ ಅತಿ ಹಿರಿಯ ಕ್ರಿಕೆಟರ್ ಯಾರು?

ಆದರೆ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಷಭ್ ಪಂತ್‌ಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧ ಪಂತ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಪಂತ್ ಈಗಲೂ ಸಾಕಷ್ಟು ಕಲಿಯೋದಿದೆ ಎಂದು ಭಾರತದ ಮಾಜಿ ಬೆಸ್ಟ್ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಕಿರ್ಮಾನಿ, 'ಸ್ಟಂಪ್ಸ್‌ನ ಎತ್ತರಕ್ಕೆ ಹತ್ತಿದಾಗ ಮಾತ್ರ ಒಬ್ಬ ವಿಕೆಟ್ ಕೀಪರ್ ಬಗ್ಗೆ ತೀರ್ಮಾನಿಸಲಾಗುತ್ತದೆ. ಸಾಕಷ್ಟು ಕಾಲಾವಕಾಶ ಇದ್ದರೆ, ಸಾಕಷ್ಟು ದೂರದಲ್ಲಿದ್ದರೆ ನೀವು ವಿಶ್ವದ ಎಂಥಾ ವೇಗಿಗೂ ಕೀಪಿಂಗ್ ಮಾಡಬಹುದು,' ಎಂದಿದ್ದಾರೆ.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 163 ಮಿ. ಜಾಕ್‌ಪಾಟ್ ನೀಡಲಿದೆ!

'ರಿಷಭ್ ಪಂತ್‌ ಅವರಿಗೆ ದೇವರು ಸಾಕಷ್ಟು ಪ್ರತಿಭೆಗಳನ್ನು ನೀಡಿದ್ದಾರೆ. ಅವರಿಗೆ ನೈಸರ್ಗಿಕವಾಗಿ ಶಕ್ತಿಯುತವಾಗಿ ಆಡುವ ಸಾಮರ್ಥ್ಯವಿದೆ. ಆದರೆ ಪಂತ್‌ ಈಗಲೂ ವಿಕೆಟ್‌ ಕೀಪಿಂಗ್‌ ವಿಚಾರದಲ್ಲಿ ತೊಟ್ಟಿಲಲ್ಲಿದ್ದಾರೆ. ಅವರು ಇನ್ನೂ ಸಾಕಷ್ಟು ಕಲಿಯೋದಿದೆ. ಹೊಡೆತಗಳಿಗೆ ಮುಂದಾಗುವಾಗಲೂ ಅವರು ಕಲಿಯೋದು ಬಹಳಷ್ಟಿದೆ,' ಎಂದು ಕಿರ್ಮಾನಿ ಸಲಹೆ ನೀಡಿದ್ದಾರೆ.

Story first published: Thursday, February 11, 2021, 23:12 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X