ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ

Rishabh Pant is making a Remarkable Recovery and set to be discharged from hospital this week

ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ರಿಷಭ್ ಪಂತ್ ಅಪಘಾತಕ್ಕೆ ಒಳಗಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಆರೋಗ್ಯದ ವಿಚಾರವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡುವ ಸುದ್ದಿ ಹೊರಬಿದ್ದಿದೆ. ರಿಷಭ್ ಪಂತ್ ಆರೋಗ್ಯದಲ್ಲಿ ಗಣನೀಯ ಚೇತರಿಕೆಯುಂಟಾಗಿದ್ದು ಈ ವಾರದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಪಘಾತದ ಬಳಿಕ ಮೊದಲಿಗೆ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಭ್ ಪಂತ್ ಅವರನ್ನು ಬಳಿಕ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಸಲಾಗಿತ್ತು. ಇದೀಗ ಒಂದು ತಿಣಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಭಾರತದ ಯುವ ಆಟಗಾರನ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಂಡಿದೆ. ಈಗ ಪಂತ್ ಮನೆಗೆ ವಾಪಾಸಾಗಲು ಸಿದ್ದವಾಗಿದ್ದಾರೆ. ಬಲ ಮೊಣಕಾಲಿನ ಲಿಗಮೆಂಟ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು ಬಿಸಿಸಿಐ ಮೂಲಗಳ ಪ್ರಕಾರ ಮಹತ್ವದ ಚೇತರಿಕೆ ಕಂಡುಬಂದಿದೆ ಎನ್ನಲಾಗಿದೆ.

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾU-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

ಒಂದು ವಾರದ ಒಳಗೆ ರಿಷಭ್ ಪಂತ್ ಮನೆಗೆ ವಾಪಾಸಾಗುವ ಸಾಧ್ಯತೆಯಿದೆ. ಆದರೆ ಬಳಿಕ ಒಂದು ತಿಂಗಳ ಅಂತರದಲ್ಲಿ ಪಂತ್ ಮತ್ತೆ ಆಸ್ಪತ್ರೆಗೆ ತೆರಳಿ ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಮೊಣಕಾಲಿಗೆ ಸಂಬಂದಿಸಿದಂತೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ. ಡಾ. ದಿನ್ಶಾ ಪರ್ಡಿವಾಲಾ ನೇತೃತ್ವದ ವೈದ್ಯದ ತಂಡ ಮೂರು ಗಂಟೆಗಳ ಮ್ಯಾರಥಾನ್ ಶಸ್ತ್ರಚಿಕಿತ್ಸೆಯಲ್ಲಿ ಪಂತ್ ಅವರ ಹಿಂಭಾಗದ ಕ್ರೂಸಿಯೇಟ್ ಅಸ್ಥಿರಜ್ಜು ಮತ್ತು ಮಧ್ಯದ ಕೊಲ್ಯಾಟರಲ್ ಅಸ್ಥಿರಜ್ಜುಗಳ ಶಸ್ತ್ರಿಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಆದರೆ ಒಂದು ತಿಂಗಳಲ್ಲಿ ಅವರ ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್‌ಗೆ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ.

ಕಳೆದ ಡಿಸೆಂಬರ್ 30ರಂದು ಮುಂಜಾನೆ ಕ್ರಿಕೆಟಿಗ ರಿಷಭ್ ಪಂತ್ ರಸ್ತೆ ಅಪಘಾತಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದರು. ಅದೃಷ್ಟವಶಾತ್ ಪಂತ್ ಪ್ರಾಣಾಪಾಯದಿಂದ ಪಾರಾಗಿದ್ದು ಯಾವುದೇ ಮಾರಣಾಂತಿಕ ಗಾಯಕ್ಕೆ ಒಳಗಾಗಿರಲಿಲ್ಲ. ಆದರೆ ಅಪಘಾದ ತೀವ್ರತೆ ಎಷ್ಟಿತ್ತೆಂದರೆ ಅಪಘಾತವಾದ ಕೆಲವೇ ಕ್ಷಣಗಳಲ್ಲಿ ಪಂತ್ ಕಾರು ಬೆಂಕಿಗೆ ಆಹುತಿಯಾಗಿತ್ತು.

ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ

ಇನ್ನು ರಿಷಭ್ ಪಂತ್ ಕಾರು ಅಪಘಾತವಾದ ತಕ್ಷಣವೇ ಅವರನ್ನು ಮೊದಲಿಗೆ ಹತ್ತಿರದಲ್ಲಿದ್ದ ಸಾಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜನವರಿ 4ರಂದು ರಿಷಭ್ ಪಂತ್ ಅವರನ್ನು ಏರ್‌ಲಿಫ್ಟ್ ಮಾಡಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಡಾ. ದಿನ್ಶಾ ಪರ್ಡಿವಾಲಾ ನೇತೃತ್ವದ ತಂಡ ಪಂತ್ ಆರೋಗ್ಯದ ಮೇಲೆ ನಿಗಾವಹಿಸಿದೆ.

Story first published: Monday, January 30, 2023, 9:48 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X