India vs West Indies: ಧೋನಿ ದಾಖಲೆ ಸರಿಗಟ್ಟಲಿದ್ದಾರೆ ರಿಷಬ್ ಪಂತ್

ಹೈದರಾಬಾದ್, ಡಿಸೆಂಬರ್ 5: ಮಾಜಿ ನಾಯಕ ಎಂಎಸ್ ಧೋನಿ ಜಾಗವನ್ನಾವರಿಸಿರುವ ಯುವ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭಾರತ ತಂಡಕ್ಕೆ ಬಲವಾಗಿ ನಿಲ್ಲಬಲ್ಲರು ಅನ್ನೋ ನಿರೀಕ್ಷೆ ಕ್ರಿಕೆಟ್ ಪ್ರಿಯರದ್ದು. ಆದರೆ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪಂತ್ ನಿರೀಕ್ಷೆಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿಲ್ಲ ಅನ್ನೋದು ನಿಜವೆ.

ಬೂಮ್ರಾ ಬೇಬಿ ಬೌಲರ್ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್ ಪಾಡು ಯಾರಿಗೂ ಬೇಡ!

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡದಲ್ಲಿ ಮತ್ತೊಬ್ಬ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಜವಾಗೇ ಪಂತ್‌ ಮೇಲೆ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡವಿದೆ.

ಟಿ20ಐ ದಾಖಲೆ ಬರೆಯಲು ಕೆಎಲ್ ರಾಹುಲ್‌ಗೆ ಬರೀ 26 ರನ್‌ಗಳು ಬೇಕು!

ವೆಸ್ಟ್ ಇಂಡೀಸ್ ವಿರುದ್ಧ ರಿಷಬ್ ಪಂತ್ ಉತ್ತಮ ಪ್ರದರ್ಶನ ನೀಡಿದರೆ, ಎಂಎಸ್ ಧೋನಿ ಹೆಸರಿನಲ್ಲಿರುವ ದಾಖಲೆ ಮೀರಿಸಲು ಪಂತ್‌ಗೆ ಅವಕಾಶವಿದೆ.

ಕೀಪಿಂಗ್ ದಾಖಲೆಗೆ ಅವಕಾಶ

ಕೀಪಿಂಗ್ ದಾಖಲೆಗೆ ಅವಕಾಶ

ಶುಕ್ರವಾರ (ಡಿಸೆಂಬರ್ 6) ನಡೆಯಲಿರುವ ವೆಸ್ಟ್ ಇಂಡೀಸ್ vs ಭಾರತ ಮೊದಲನೇ ಟಿ20 ಪಂದ್ಯದಲ್ಲಿ ವಿಕೆಟ್‌ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿರುವ ಪಂತ್‌ಗೆ ಧೋನಿ ದಾಖಲೆ ಮೀರಿಸಲು ಇಲ್ಲವೆ ಸರಿದೂಗಿಸಲು ಅವಕಾಶವಿದೆ. ಕೀಪರ್‌ ಆಗಿ ಎದುರಾಳಿ ಆಟಗಾರರ ಔಟ್‌ಗೆ ಪಂತ್‌ ಕಾರಣರಾದರೆ ದಾಖಲೆ ನಿರ್ಮಾಣವಾಗಲಿದೆ.

ಕೂಲ್ ಕ್ಯಾಪ್ಟನ್ ಟಾಪರ್

ಕೂಲ್ ಕ್ಯಾಪ್ಟನ್ ಟಾಪರ್

ಕೀಪರ್ ಆಗಿದ್ದುಕೊಂಡು ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿದೆ. ಧೋನಿ ಒಟ್ಟು 7 ಪಂದ್ಯಗಳಲ್ಲಿ 5 ಬಾರಿ ಎದುರಾಳಿ ಆಟಗಾರನನ್ನು ಔಟ್ ಮಾಡಿದ್ದರು. ಇದರಲ್ಲಿ 3 ಕ್ಯಾಚ್, 2 ಸ್ಟಂಪಿಂಗ್ ಸೇರಿತ್ತು.

ದ್ವಿತೀಯ ಸ್ಥಾನದಲ್ಲಿ ದಿನೇಶ್

ದ್ವಿತೀಯ ಸ್ಥಾನದಲ್ಲಿ ದಿನೇಶ್

ಭಾರತ-ವೆಸ್ಟ್ ಇಂಡೀಸ್ ಟಿ20 ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಕೆಡವಿದ ಕೀಪರ್‌ಗಳಲ್ಲಿ ವಿಂಡೀಸ್‌ನ ದಿನೇಶ್ ರಾಮ್‌ದಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ರಾಮ್‌ದಿನ ಕೂಡ 7 ಪಂದ್ಯಗಳಲ್ಲಿ ಐದು ಕ್ಯಾಚ್ ಪಡೆದಿದ್ದಾರೆ. ಆದರೆ ರಾಮ್‌ದಿನ್ ಒಂದೂ ಸ್ಟಂಪ್‌ ಔಟ್ ಮಾಡಿಲ್ಲ.

ಪಟ್ಟಿಯಲ್ಲಿ ಭಾರತದ ಡಿಕೆ

ಪಟ್ಟಿಯಲ್ಲಿ ಭಾರತದ ಡಿಕೆ

ವೆಸ್ಟ್ ಇಂಡೀಸ್ vs ಭಾರತ ಟಿ20 ಪಂದ್ಯಗಳಲ್ಲಿ ಹೆಚ್ಚು ವಿಕೆಟ್‌ ಪಡೆದ ವಿಕೆಟ್ ಕೀಪರ್‌ಗಳಲ್ಲಿ 3ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್‌ನ ಆಂಡ್ರೆ ಫ್ಲೆಚರ್ 4 ಪಂದ್ಯಗಳಲ್ಲಿ 3 (ಕ್ಯಾಚ್), ಭಾರತದ ದಿನೇಶ್ ಕಾರ್ತಿಕ್ 4ರಲ್ಲಿ 3 (ಕ್ಯಾಚ್), ಭಾರತ ರಿಷಬ್ ಪಂತ್ 7 ಪಂದ್ಯಗಳಲ್ಲಿ 3 (ಕ್ಯಾಚ್‌) ವಿಕೆಟ್ ಕೆಡವಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, December 5, 2019, 16:30 [IST]
Other articles published on Dec 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X