ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದಲ್ಲಿ ಎಂ.ಎಸ್ ಧೋನಿ ಸ್ಥಾನಕ್ಕೆ ಈತನೇ ಸೂಕ್ತ: ಆಶಿಶ್ ನೆಹ್ರಾ

Rishabh Pant Perfect Replacement For MS Dhoni In Team India

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಬಳಿಕ ಅವರ ಜಾಗಕ್ಕೆ ಯಾರು ಎಂಬ ಪ್ರಶ್ನೆಗೆ ಈಗಾಗಲೇ ಅನೇಕ ಚರ್ಚೆಗಳು ನಡೆದಿದ್ದು, ಸ್ಫೋಟಕ ಬ್ಯಾಟ್ಸ್‌ಮನ್ ವಿರೇಂದ್ರ ಸೆಹ್ವಾಗ್ ಬಳಿಕ , ಮಾಜಿ ವೇಗಿ ಆಶಿಶ್ ನೆಹ್ರಾ ಕೂಡ ಧೋನಿ ಸ್ಥಾನಕ್ಕೆ ರಿಷಬ್ ಪಂತ್ ಸೂಕ್ತ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ಎಂ.ಎಸ್.ಧೋನಿಗೆ ರಿಷಭ್ ಪಂತ್ ಸರಿಯಾದ ಬದಲಿ ಆಟಗಾರ ಎಂದು ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ವಿಷಯಕ್ಕೆ ಬಂದಾಗ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ಪಂತ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಕೆ.ಎಲ್ ರಾಹುಲ್ ಪ್ರಬಲ ಪ್ರದರ್ಶನ ನೀಡಿದ್ದರಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೈಟ್ ಬಾಲ್ ತಂಡದಲ್ಲಿ ಸ್ಥಾನ ಕಳೆದುಕೊಂಡರು.

ಯುಜವೇಂದ್ರ ಚಹಾಲ್‌ ಪ್ರದರ್ಶನಕ್ಕೆ 'ಭೇಷ್' ಎಂದ ಗೌತಮ್ ಗಂಭೀರ್ಯುಜವೇಂದ್ರ ಚಹಾಲ್‌ ಪ್ರದರ್ಶನಕ್ಕೆ 'ಭೇಷ್' ಎಂದ ಗೌತಮ್ ಗಂಭೀರ್

ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮ 'ಕ್ರಿಕೆಟ್ ಕನೆಕ್ಟೆಡ್' ನಲ್ಲಿ ಮಾತನಾಡಿದ ನೆಹ್ರಾ "ನಾವು ಯಾವ ಸ್ವರೂಪದ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದರ ಮೇಲೆ ಇದು ಸಂಪೂರ್ಣವಾಗಿ ಅವಲಂಬಿತವಾಗಿದೆ. ನಾವು ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದರೆ ಮತ್ತು ನೀವು ಉತ್ತಮ ವಿಕೆಟ್ ಕೀಪರ್ ಜೊತೆ ಹೋಗಲು ಬಯಸಿದರೆ ರಿಷಭ್ ಪಂತ್ ಅವರೊಂದಿಗೆ ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ಪಂತ್ ಅವರನ್ನು ಬೆಂಬಲಿಸಬೇಕು! ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಬಂದಾಗ ಪ್ರತಿಯೊಬ್ಬ ಆಟಗಾರನ ಬೆಂಬಲ ಬೇಕು'' ಎಂದಿದ್ದಾರೆ.

ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕೂಡ ನೆಹ್ರಾ ಅವರ ಮಾತನ್ನು ಪ್ರತಿಧ್ವನಿಸಿದರು ಮತ್ತು ಕೀಪಿಂಗ್ ವಿಷಯದಲ್ಲಿ ಧೋನಿ ಅವರ ಸ್ಥಾನಕ್ಕೆ ಪಂತ್ ಸೂಕ್ತ ಎಂದಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಪಂತ್ ಇದುವರೆಗೆ ಐದು ಪಂದ್ಯಗಳನ್ನು ಆಡಿದ್ದು, 42.75 ಸರಾಸರಿಯಲ್ಲಿ 171 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 23 ರ ಹರೆಯದ ಪಂತ್ಈವರೆಗೆ ಭಾರತಕ್ಕಾಗಿ 13 ಟೆಸ್ಟ್, 16 ಏಕದಿನ ಮತ್ತು 28 ಟಿ20 ಪಂದ್ಯಗಳನ್ನು ಆಡಿದ್ದಾರೆ, ಆಟದ ಎಲ್ಲಾ ಫಾರ್ಮೆಟ್‌ಗಳಿಂದ 1,198 ರನ್ ಗಳಿಸಿದ್ದಾರೆ.

Story first published: Tuesday, October 6, 2020, 17:14 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X