ಎಂಎಸ್ ಧೋನಿಯ ಹೆಲಿಕಾಪ್ಟರ್ ಶಾಟ್ ಬಾರಿಸಿದ ರಿಷಭ್ ಪಂತ್: ವೀಡಿಯೊ

ನವದೆಹಲಿ, ಜುಲೈ 30: ಕೊರೊನಾವೈರಸ್ ಶುರುವಾದ ಬಳಿಕ ಕ್ರಿಕೆಟ್ ಅಭ್ಯಾಸ ಆರಂಭಿಸಿದ ತೀರಾ ಇತ್ತೀಚಿನ ಟೀಮ್ ಇಂಡಿಯಾ ಆಟಗಾರರಲ್ಲಿ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಇದ್ದಾರೆ. ಕೆಲ ವಾರಗಳ ಹಿಂದಷ್ಟೇ ಪಂತ್ ಅಭ್ಯಾಸ ಶುರು ಮಾಡಿದ್ದರು.

ಮದುವೆಗೂ ಮೊದಲೇ ಗಂಡು ಮಗುವಿಗೆ ಅಪ್ಪನಾದ ಹಾರ್ದಿಕ್ ಪಾಂಡ್ಯ!

ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಲು ಸಜ್ಜಾಗುತ್ತಿರುವ ಪಂತ್, ಕೆಲ ಕಾಲ ಸುರೇಶ್ ರೈನಾ ಜೊತೆ ಕಾಣಿಸಿಕೊಂಡಿದ್ದರು. ಆ ಬಳಿಕ ಗುರುಗ್ರಾಮಕ್ಕೆ ತೆರಳಿರುವ ಪಂತ್ ದಿನನಿತ್ಯ ಜಿಮ್ ಮಾಡ್ತಾ ಫಿಟ್ನೆಸ್ ತಂದುಕೊಳ್ಳಲು ಯತ್ನಿಸುತ್ತಿದ್ದಾರೆ.

ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!

ತಾನು ಅಭ್ಯಾಸ ನಡೆಸುತ್ತಿರುವ ವೀಡಿಯೋವನ್ನು 22ರ ಹರೆಯದ ಪಂತ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಪಂತ್, ಮಾಜಿ ನಾಯಕ ಎಂಎಸ್ ಧೋನಿಯ ಹೆಲಿಕಾಪ್ಟರ್ ಶಾಟ್‌ ಬಾರಿಸುವ ದೃಶ್ಯವಿದೆ. ಎಡಗೈ ಬ್ಯಾಟ್ಸ್‌ಮನ್ ಪಂತ್ ಬಾರಿಸಿದ ಚೆಂಡು ಬೌಂಡರಿ ಗೆರೆಯತ್ತ ಸಾಗಿದ್ದು ಕಾಣಿಸುತ್ತದೆ.

2019ರಲ್ಲೂ ಪಂತ್ ಮುಂಬೈ ಇಂಡಿಯನ್ಸ್ ವೇಗಿ ಜಸ್‌ಪ್ರೀತ್ ಬೂಮ್ರಾ ಎಸೆತಕ್ಕೆ ಧೋನಿ ರೀತೀಲಿ ಸ್ಕ್ವಾರ್ ಬೌಂಡರಿಯತ್ತ ಚೆಂಡನ್ನಟ್ಟಿದ್ದರು. ಇದೀಗ ಮತ್ತೊಮ್ಮೆ ಹೆಲಿಕಾಪ್ಟರ್ ಶಾಟ್ ಮೂಲಕ ಪಂತ್ ಗಮನ ಸೆಳೆದಿದ್ದಾರೆ. ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ಯುಎಇಯಲ್ಲಿ ಐಪಿಎಲ್ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 30, 2020, 16:40 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X