'ಅದು ನನ್ನ ಪಾಲಿನ ಟಾಪ್ ಇನ್ನಿಂಗ್ಸ್‌: ಸ್ಫೋಟಕ ಬ್ಯಾಟಿಂಗ್ ನೆನೆದ ರಿಷಭ್ ಪಂತ್

ನವದೆಹಲಿ: ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದರಲ್ಲಿ ಸಂಶಯವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟಾಪ್ 5ರಲ್ಲಿ ಪಂತ್ ಹೆಸರೂ ಇದೆ. ಯಾವಾಗಲೂ ದಿಟ್ಟ ಬ್ಯಾಟಿಂಗ್‌ಗೆ ಗಮನ ಸೆಳೆಯುವವರು ಪಂತ್. ಇನ್ನಷ್ಟು ಬ್ಯಾಟಿಂಗ್ ಕೌಶಲಗಳನ್ನು ಕಲಿಯಬೇಕಿರುವ ಪಂತ್, ಕೆಲವೊಮ್ಮೆ ಕೆಟ್ಟ ಹೊಡೆತಗಳಿಗೆ ಮುಂದಾಗಿ ನಿರಾಸೆ ಮೂಡಿಸುತ್ತಾರೆ ಅನ್ನೋದು ಬಿಟ್ಟರೆ, ದೆಹಲಿಯ ಈ ಆಟಗಾರನ ಬ್ಯಾಟಿಂಗ್ ಶೈಲಿ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರನ್ನು ನೆನಪಿಸಿದ್ದೂ ಇದೆ.

ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ರಿಷಭ್ ಪಂತ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವೊಂದರಲ್ಲಿ ಅದ್ಭುತ ಇನ್ನಿಂಗ್ಸ್‌ ನೀಡಿದ್ದರು. ಈ ಆಟದ ಕ್ಷಣವನ್ನು ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ನ ಇನ್‌ಸ್ಟಾಗ್ರಾಮ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾಕ್ಕೆ ಭಾರತ: ಕುತೂಹಲಕಾರಿ ಸರಣಿಗಳ ಸಂಪೂರ್ಣ ವೇಳಾಪಟ್ಟಿ

ಆವತ್ತಿನ ಐಪಿಎಲ್ ಇನ್ನಿಂಗ್ಸ್‌ ನನ್ನ ಪಾಲಿನ ಟಾಪ್ ಐದು ಬೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ಪಂತ್ ಹೇಳಿದ್ದಾರೆ.

ರೋಚಕ ಪಂದ್ಯದ ನೆನಪು

ರೋಚಕ ಪಂದ್ಯದ ನೆನಪು

'ಆವತ್ತು ತಂಡವನ್ನು ಸಮಸ್ಯೆಯಿಂದ ಪಾರು ಮಾಡುವ ಜವಾಬ್ದಾರಿ ನನ್ನ ಮೇಲೆ ಇದೆ ಅಂತ ನನಗನ್ನಿಸಿತು. ಹಾಗಾಗಿ ನಾನು ಒಳ್ಳೆಯ ಮೊತ್ತ ಸೇರಿಸಲು ಮುಂದಾದೆ. ನಾವವತ್ತು 150-160 ಒಳ್ಳೆಯ ಗುರಿ ಅಂತ ಭಾವಿಸಿದ್ದೆವು. ಆದರೆ 190ರ ಸುಮಾರಿಗೆ ಇನ್ನಿಂಗ್ಸ್ ಮುಗಿಸಿದೆವು,' ಎಂದು ಡೆಲ್ಲಿ-ಹೈದರಾಬಾದ್ ನಡುವಿನ ರೋಚಕ ಕಾಳಗವನ್ನು ಪಂತ್ ಕಣ್ಣಮುಂದೆ ತಂದುಕೊಂಡರು.

5 ಬೌಂಡರಿಗಳು, 7 ಸಿಕ್ಸರ್‌

5 ಬೌಂಡರಿಗಳು, 7 ಸಿಕ್ಸರ್‌

2018ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 42ನೇ ಪಂದ್ಯದಲ್ಲಿ ಪಂತ್, ಎಸ್‌ಆರ್‌ಎಚ್ ವಿರುದ್ಧ 63 ಎಸೆತಗಳಲ್ಲಿ ಅಜೇಯ 128 ರನ್ ಸಿಡಿಸಿದ್ದರು. ಇದರಲ್ಲಿ 15 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಆವತ್ತು ಪಂತ್ ಮತ್ತು ಹರ್ಷಲ್ ಪಟೇಲ್ 24 ರನ್ ಸೇರ್ಪಡೆಯೊಂದಿಗೆ ಡೆಲ್ಲಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 187 ರನ್ ಕಲೆ ಹಾಕಿತ್ತು.

ಟಾಪ್ 5 ಇನ್ನಿಂಗ್ಸ್‌ಗಳಲ್ಲಿ ಬೆಸ್ಟ್

ಟಾಪ್ 5 ಇನ್ನಿಂಗ್ಸ್‌ಗಳಲ್ಲಿ ಬೆಸ್ಟ್

'ಆವತ್ತು ದ್ವಿತೀಯ ಇನ್ನಿಂಗ್ಸ್‌ನವರಿಗೆ ಹೆಚ್ಚು ಬ್ಯಾಟಿಂಗ್ ಅನುಕೂಲವಿತ್ತು. ಯಾಕೆಂದರೆ ಆವತ್ತು ಇಬ್ಬನಿಯಿತ್ತು. ಆದರೆ ಆ ಆಟ ನನಗೆ ಅದ್ಭುತ ಭಾವನೆ ನೀಡಿದೆ. ನಾನು ಏನೇ ಕ್ರಿಕೆಟ್ ಆಡಿದ್ದರೂ ಈ ಇನ್ನಿಂಗ್ಸ್‌ಗೆ ನನ್ನ ಟಾಪ್ 5 ಇನ್ನಿಂಗ್ಸ್‌ಗಳಲ್ಲಿ ಹೆಚ್ಚು ಅಂಕ ನೀಡುತ್ತೇನೆ. ಆವತ್ತು ಪಂದ್ಯ ಗೆದ್ದಿದ್ದರೆ ಇನ್ನಿಂಗ್ಸ್‌ಗೆ ಇನ್ನೂ ಬೆಲೆ ಇರುತ್ತಿತ್ತು. ತಂಡ ಪಂದ್ಯ ಸೋತರೆ ನಮ್ಮ ಒಳ್ಳೆ ಇನ್ನಿಂಗ್ಸ್‌ ಕೂಡ ಅಂಥ ಪ್ರಮುಖ ಅನ್ನಿಸುವುದಿಲ್ಲ,' ಎಂದು ಪಂತ್ ಹೇಳಿದರು.

ಧವನ್, ಕೇನ್ ಅಬ್ಬರದಾಟ

ಧವನ್, ಕೇನ್ ಅಬ್ಬರದಾಟ

ಅಂದಿನ ಪಂದ್ಯದಲ್ಲಿ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಡೆಲ್ಲಿ ತಂಡದ ಮೊತ್ತ ಹೆಚ್ಚಿಸಿತ್ತಾದರೂ, ಹೈದರಾಬಾದ್ ತಂಡದಿಂದ ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಅಬ್ಬರದಾಟ ಡೆಲ್ಲಿಗೆ ಸೋಲುಣಿಸಿತ್ತು. ಡೆಲ್ಲಿ ನೀಡಿದ್ದ 188 ರನ್ ಗುರಿ ಬೆನ್ನಟ್ಟಿದ್ದ ಹೈದರಾಬಾದ್‌ ತಂಡ, ಶಿಖರ್ 92 (50 ಎಸೆತ), ನಾಯಕ ವಿಲಿಯಮ್ಸನ್ ಅಜೇಯ 83 (53 ಎಸೆತ) ರನ್‌ನೊಂದಿಗೆ 18.5 ಓವರ್‌ಗೆ 1 ವಿಕೆಟ್ ಕಳೆದು 191 ರನ್ ಪೇರಿಸಿ, 9 ವಿಕೆಟ್ ಗೆಲುವನ್ನಾಚರಿಸಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, June 30, 2020, 20:19 [IST]
Other articles published on Jun 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X