ಪಂತ್ ಅದ್ಭುತ ಆಟವಾಡಿಲ್ಲ, ಇಂಗ್ಲೆಂಡ್ ಮಾಡಿದ ಈ ತಪ್ಪಿನಿಂದ ಶತಕ ಬಂತಷ್ಟೇ; ನಾಲಿಗೆ ಹರಿಬಿಟ್ಟ ಮಾಜಿ ಕ್ರಿಕೆಟಿಗ

ಪ್ರಸ್ತುತ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಆಕರ್ಷಕ ಶತಕವನ್ನು ದಾಖಲಿಸಿ ಸಂಕಷ್ಟದಲ್ಲಿದ್ದ ತಮ್ಮ ತಂಡಕ್ಕೆ ಆಸರೆಯಾದರು. ಆದರೆ ಈ ಶತಕ ದಾಖಲಿಸಲು ರಿಷಭ್ ಪಂತ್ ಅದ್ಭುತ ಆಟವನ್ನೇನೂ ಆಡಿಲ್ಲ, ಇಂಗ್ಲೆಂಡ್ ತಂಡದ ಬೌಲರ್‌ಗಳ ಕಳಪೆ ಆಟದಿಂದ ರಿಷಭ್ ಪಂತ್ ಶತಕ ದಾಖಲಿಸಿದರು ಅಷ್ಟೇ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗನೊಬ್ಬ ನಾಲಿಗೆ ಹರಿಬಿಟ್ಟಿದ್ದಾನೆ.

ರಿಶಬ್ ಪಂತ್ ಹೊಡೆದ ಈ ಶಾಟ್ ನೋಡಿ ಎಲ್ಲರೂ ಫಿದಾ | Oneindia Kannada

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಪಾಳಯದಿಂದ ಹೊರಬಿತ್ತು ಮತ್ತೊಂದು ಸಿಹಿ ಸುದ್ದಿ!ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಪಾಳಯದಿಂದ ಹೊರಬಿತ್ತು ಮತ್ತೊಂದು ಸಿಹಿ ಸುದ್ದಿ!

ಕಳೆದ ಶುಕ್ರವಾರದಂದು ಆರಂಭವಾದ ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಆರನೇ ವಿಕೆಟ್‍ಗೆ ಜತೆಯಾದ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ 222 ರನ್‌ಗಳ ಅಮೋಘ ಜತೆಯಾಟ ಆಡುವುದರ ಮೂಲಕ ಟೀಮ್ ಇಂಡಿಯಾವನ್ನು ಅಲ್ಪ ಮೊತ್ತಕ್ಕೆ ಕುಸಿದು ಮುಖಭಂಗ ಅನುಭವಿಸುವುದರಿಂದ ಪಾರು ಮಾಡಿದರು.

ಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್; ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದ ಬುಮ್ರಾಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್; ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದ ಬುಮ್ರಾ

ರಿಷಭ್ ಪಂತ್ ಮೊದಲನೇ ದಿನದಾಟದಲ್ಲಿ 89 ಎಸೆತಗಳಲ್ಲಿ ಶತಕ ಪೂರೈಸಿ ಒಟ್ಟು 111 ಎಸೆತಗಳಲ್ಲಿ 146 ರನ್ ಬಾರಿಸಿದರೆ, ರವೀಂದ್ರ ಜಡೇಜಾ ಎರಡನೇ ದಿನದಾಟದಂದು ಶತಕ ಪೂರೈಸಿದರು. ಹೀಗೆ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದ ಟೀಮ್ ಇಂಡಿಯಾಗೆ ಆಸರೆಯಾದ ರಿಷಭ್ ಪಂತ್ ಆಡಿದ ಈ ಆಟ ಕ್ರಿಕೆಟ್ ಜಗತ್ತಿನ ಹೃದಯ ಗೆದ್ದಿತ್ತು. ಕಷ್ಟದ ಸಂದರ್ಭದಲ್ಲಿಯೂ ದೊಡ್ಡ ಮಟ್ಟದ ಒತ್ತಡದ ನಡುವೆಯೂ ರಿಷಭ್ ಪಂತ್ ಭಯರಹಿತವಾಗಿ ಬ್ಯಾಟ್ ಬೀಸಿ ಆಂಗ್ಲರ ಎಸೆತಗಳಿಗೆ ಅವರ ನೆಲದಲ್ಲಿಯೇ ಮನಬಂದಂತೆ ಬಾರಿಸಿದ್ದನ್ನು ಕ್ರಿಕೆಟ್ ಪ್ರೇಮಿಗಳು ಮುಕ್ತಕಂಠದಿಂದ ಹೊಗಳಿದ್ದರು. ಹೀಗೆ ರಿಷಭ್ ಪಂತ್ ಶತಕದ ಆಟವನ್ನು ಎಲ್ಲರೂ ಕೊಂಡಾಡುತ್ತಿದ್ದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಆಸಿಫ್ ಮಾತ್ರ ಈ ಕೆಳಕಂಡಂತೆ ಮಾತನಾಡಿ ಟ್ರೋಲ್ ಮಾಡಿದ್ದಾರೆ..

ಪಂತ್ ಅದ್ಬುತ ಆಟವಾಡಲಿಲ್ಲ

ಪಂತ್ ಅದ್ಬುತ ಆಟವಾಡಲಿಲ್ಲ

ರಿಷಭ್ ಪಂತ್ ಈ ಇನ್ನಿಂಗ್ಸ್‌ನಲ್ಲಿ ಅದ್ಬುತ ಆಟವನ್ನಾಡಿ ಶತಕವನ್ನು ದಾಖಲಿಸಲಿಲ್ಲ, ಬದಲಾಗಿ ಇಂಗ್ಲೆಂಡ್ ತಂಡದ ಬೌಲರ್‌ಗಳ ವೈಫಲ್ಯತೆಯಿಂದ ರಿಷಬ್ ಪಂತ್ ಶತಕವನ್ನು ಬಾರಿಸಿದರು ಅಷ್ಟೇ, ಪಂತ್ ಬ್ಯಾಟಿಂಗ್ ಮಾಡುವ ವೇಳೆ ಎಡಗೈ ಹೆಚ್ಚೇನೂ ಕೆಲಸ ಮಾಡುತ್ತಿರಲಿಲ್ಲ, ಹೀಗಾಗಿ ಇಂಗ್ಲೆಂಡ್ ಬೌಲರ್‌ಗಳ ಕಳಪೆ ಪ್ರದರ್ಶನದಿಂದ ರಿಷಭ್ ಪಂತ್ ಶತಕ ದಾಖಲಿಸಿದರು ಎಂದು ಮೊಹಮ್ಮದ್ ಆಸಿಫ್ ನಾಲಿಗೆ ಹರಿಬಿಟ್ಟಿದ್ದಾರೆ.

ಇಂಗ್ಲೆಂಡ್ ಮಾಡಿದ ತಪ್ಪು ಇದು, ನಾನು ಪಂತ್ ವಿರುದ್ಧವಲ್ಲ

ಇಂಗ್ಲೆಂಡ್ ಮಾಡಿದ ತಪ್ಪು ಇದು, ನಾನು ಪಂತ್ ವಿರುದ್ಧವಲ್ಲ

ಇನ್ನೂ ಮುಂದುವರೆದು ಮಾತನಾಡಿರುವ ಮೊಹಮ್ಮದ್ ಆಸಿಫ್ ತಮ್ಮ ಪ್ರಕಾರ ಇಂಗ್ಲೆಂಡ್ ಮಾಡಿದ ತಪ್ಪು ಯಾವುದು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳು ಕಣದಲ್ಲಿರುವಾಗ ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಆದ ಜಾಕ್ ಲೀಚ್ ಅವರಿಗೆ ಪದೇಪದೇ ಬೌಲಿಂಗ್ ಕೊಟ್ಟದ್ದೇ ಇಂಗ್ಲೆಂಡ್ ಮಾಡಿದ ತಪ್ಪು ಎಂದಿದ್ದಾರೆ. ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳು ಕಣದಲ್ಲಿದ್ದಾಗ ಎಡಗೈ ಸ್ಪಿನ್ನರ್ ಬೌಲಿಂಗ್ ಮಾಡಿದರೆ ದೊಡ್ಡ ರನ್ ಬರುವುದು ಸಾಮಾನ್ಯ, ಹೀಗಾಗಿ ಪಂತ್ ರನ್ ಗಳಿಸಿದರು, ಆದರೆ ನಾನೇನೂ ಪಂತ್ ವಿರೋಧಿಯಲ್ಲ ಎಂದು ಮೊಹಮ್ಮದ್ ಆಸಿಫ್ ಹೇಳಿದ್ದಾರೆ.

ಆಸಿಫ್ ಹೇಳಿಕೆಗೆ ಕಿಡಿಕಾರಿದ ಕ್ರಿಕೆಟ್ ಜಗತ್ತು

ಆಸಿಫ್ ಹೇಳಿಕೆಗೆ ಕಿಡಿಕಾರಿದ ಕ್ರಿಕೆಟ್ ಜಗತ್ತು

ರಿಷಭ್ ಪಂತ್ ಅವರ ಈ ಅಮೋಘ ಇನ್ನಿಂಗ್ಸ್ ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಬಂದಿದೆ ಎಂಬುದನ್ನು ಅರಿತಿರುವ ಕ್ರಿಕೆಟ್ ಪ್ರೇಮಿಗಳು ಮೊಹಮ್ಮದ್ ಆಸಿಫ್ ಅವರ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಂತ್ ಅವರ ಶತಕ ಇಂಗ್ಲೆಂಡ್ ಬೌಲರ್‌ಗಳ ತಪ್ಪಿನಿಂದ ಬಂದಿತು ಎಂದಾದರೆ, ನೀವು ಪಡೆದಿರುವ ಎಲ್ಲಾ ವಿಕೆಟ್‍ಗಳೂ ಸಹ ಎದುರಾಳಿ ಬ್ಯಾಟ್ಸ್‌ಮನ್‌ಗಳು ಮಾಡಿದ ತಪ್ಪಿನಿಂದ ಬಂದ ವಿಕೆಟ್‍ಗಳೇ ಹೊರತು ನಿಮ್ಮ ಪ್ರತಿಭೆಯಿಂದ ಪಡೆದ ವಿಕೆಟ್‍ಗಳಲ್ಲ ಎಂದು ಕಾಲೆಳೆದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, July 3, 2022, 12:57 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X