ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ನಲ್ಲಿ ಪಂತ್ ಮೊದಲ ಆಯ್ಕೆಯ ಕೀಪರ್ ಆಗಿರಬೇಕು: ಸಾಹ

Rishabh Pant should be Indias first-choice wicketkeeper in WTC final, says Wriddhiman Saha

ನವದೆಹಲಿ: ವಿಶೇಷ ಕೌಶಲವಿರುವ ಆಟಗಾರರು ಅದೇ ಕೌಶಲವಿರುವ ಮತ್ತೊಬ್ಬ ಆಟಗಾರನನ್ನು ಬೆಂಬಲಿಸೋದು ಅಪರೂಪ. ಆದರೆ ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ.

ಒಂದೇ ಓವರ್‌ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿದ ಅರಿಥರನ್ ವಸೀಕರನ್ಒಂದೇ ಓವರ್‌ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿದ ಅರಿಥರನ್ ವಸೀಕರನ್

ಐಸಿಸಿ ವರ್ಲ್ಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡಕ್ಕೆ ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರಬೇಕು ಎಂದು ಸಾಹ ಹೇಳಿದ್ದಾರೆ. 2014ರಲ್ಲಿ ಎಂಎಸ್ ಧೋನಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ ಟೆಸ್ಟ್‌ನಲ್ಲಿ ಸಾಹ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರು.

ಸಾಹ ಮತ್ತು ಪಂತ್ ಇಬ್ಬರೂ ಮುಂಬರಲಿರುವ ಇಂಗ್ಲೆಂಡ್ ಪ್ರವಾಸ ಸರಣಿಗಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವಾಸವು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಒಳಗೊಂಡಿರಲಿದೆ.

ಭವಿಷ್ಯದಲ್ಲಿ ಆರ್‌ಸಿಬಿ ವಿರುದ್ಧ ಆಡಿದರೆ ಈ ಆಟಗಾರನ ವಿಕೆಟ್ ಪಡೆಯಬೇಕು ಎಂದ ಹರ್ಷಲ್ ಪಟೇಲ್ಭವಿಷ್ಯದಲ್ಲಿ ಆರ್‌ಸಿಬಿ ವಿರುದ್ಧ ಆಡಿದರೆ ಈ ಆಟಗಾರನ ವಿಕೆಟ್ ಪಡೆಯಬೇಕು ಎಂದ ಹರ್ಷಲ್ ಪಟೇಲ್

'ಕಳೆದ ಕೆಲವು ಟೆಸ್ಟ್‌ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಪಂತ್ ಆಡಿದ್ದಾರೆ. ಅಲ್ಲಿ ಪಂತ್ ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಅವರೇ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರಬೇಕು. ನಾನು ನನ್ನ ಅವಕಾಶಕ್ಕಾಗಿ ಕಾಯುತ್ತೇನೆ. ಅವಕಾಶ ಸಿಕ್ಕರೆ ನನ್ನ ಬೆಸ್ಟ್ ಪ್ರದರ್ಶನ ನೀಡುತ್ತೇನೆ,' ಎಂದು ಸಾಹ ಸ್ಪೋರ್ಟ್ಸ್‌ಕೀಡಾ ಜೊತೆಗೆ ಹೇಳಿದ್ದಾರೆ.

Story first published: Friday, May 21, 2021, 18:52 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X