ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವೈಟ್‌ಬಾಲ್ ತಂಡಗಳಲ್ಲಿ ಅಯ್ಯರ್, ಸ್ಯಾಮ್ಸನ್ ಬದಲು ಪಂತ್ ಆಡಿಸಬೇಕು'

Rishabh Pant should replace Iyer or Samson in white-ball squads says Brad Hogg

ನವದೆಹಲಿ: ಏಕದಿನ ಕ್ರಿಕೆಟ್ ಮತ್ತು ಟಿ20ಐ ಕ್ರಿಕೆಟ್ ಮಾದರಿಗಳಲ್ಲಿ ಶ್ರೇಯಸ್ ಐಯ್ಯರ್ ಅಥವಾ ಸಂಜು ಸ್ಯಾಮ್ಸನ್‌ ಬದಲಿಗೆ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಅವಕಾಶ ನೀಡಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಬ್ರಾಡ್‌ ಹಾಗ್‌ ಹೇಳಿದ್ದಾರೆ.

ಟೀಮ್ ಇಂಡಿಯಾದ 6 ಆಟಗಾರರಿಗೆ ಆನಂದ್ ಮಹೀಂದ್ರರಿಂದ ಭರ್ಜರಿ ಗಿಫ್ಟ್!ಟೀಮ್ ಇಂಡಿಯಾದ 6 ಆಟಗಾರರಿಗೆ ಆನಂದ್ ಮಹೀಂದ್ರರಿಂದ ಭರ್ಜರಿ ಗಿಫ್ಟ್!

ರಿಷಭ್ ಪಂತ್ ಅವರ ಅಸಾಂಪ್ರದಾಯಿಕ ಹೊಡೆತಗಳು ಬೌಲರ್‌ಗಳಿಗೆ ಬೌಲ್ ಮಾಡಲು ಸವಾಲೆನಿಸುತ್ತವೆ. ಹೀಗಾಗಿ ನಿಯಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ಗೆ ಹೆಚ್ಚು ಅವಕಾಶ ನೀಡಬೇಕು ಎಂದು ಬ್ರಾಡ್‌ ಹಾಗ್‌ ಅಭಿಪ್ರಾಯಿಸಿದ್ದಾರೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಹಾಗ್, ಈ ವಿಚಾರ ಹೇಳಿಕೊಂಡಿದ್ದಾರೆ.

'ಆಸ್ಟ್ರೇಲಿಯಾದಲ್ಲಿ ಆಡಿದ ಆ ತಂಡಕ್ಕಿಂತ ಉತ್ತಮ ತಂಡ ನಿಮಗೆ ಬೇರೆ ಸಿಗಲಿಕ್ಕಿಲ್ಲ. ನಾನವನನ್ನು (ಪಂತ್‌ನನ್ನು) ಶ್ರೇಯಸ್ ಜಾಗದಲ್ಲಿ ಇಡಲು ಬಯಸುತ್ತೇನೆ. ನಿಮ್ಮ ಆಲ್ ರೌಂಡರ್ ಆಯ್ಕೆಗಳನ್ನೆಲ್ಲಾ ಬೌಲಿಂಗ್, ಬ್ಯಾಟಿಂಗ್‌ನತ್ತ ಇಡಿ. ಆತ ಒಂದೋ ಶ್ರೇಯಸ್ ಐಯ್ಯರ್ ಬದಲು ಅಥವಾ ಸಂಜು ಸ್ಯಾಮ್ಸನ್ ಬದಲು ತಂಡದಲ್ಲಿರುತ್ತಾರೆ,' ಎಂದು ಹಾಗ್ ಹೇಳಿದ್ದಾರೆ.

ಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್‌ ಶ್ರೀಶಾಂತ್‌ ಸಜ್ಜುಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್‌ ಶ್ರೀಶಾಂತ್‌ ಸಜ್ಜು

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಐದು ಇನ್ನಿಂಗ್ಸ್‌ಗಳಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಪಂತ್ 3ನೇ ಸ್ಥಾನ ಪಡೆದುಕೊಂಡಿದ್ದರು. ಪಂತ್‌ 68.50ರ ಸರಾಸರಿಯಂತೆ 274 ರನ್ ಬಾರಿಸಿದ್ದರು. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಕೂಡ ಪಂತ್‌ ಅನಂತರದ ಸ್ಥಾನಗಳಲ್ಲಿ ಅಂದರೆ 4ನೇ, 5ನೇ ಸ್ಥಾನದಲ್ಲಿದ್ದರು.

Story first published: Saturday, January 23, 2021, 19:17 [IST]
Other articles published on Jan 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X