ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಸಿಡ್ನಿಯಲ್ಲಿ ನಾನು 30 ನಿಮಿಷ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು"

Rishabh pant statement on Sydney test draw

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಿಂದ ಭರ್ಜರಿಯಾಗಿ ಗೆದ್ದು ಇತಿಹಾಸ ನಿರ್ಮಿಸಿದೆ. ಬ್ರಿಸ್ಬೇನ್ ಪಂದ್ಯದಲ್ಲಿ ರಿಷಬ್ ಪಂತ್ ಅದ್ಭುತ ಆಟದಿಂದಾಗಿ ಭಾರತ ಐತಿಹಾಸಿಕ ಗೆಲುವು ಸಾಧಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಆದರೆ ಅದಕ್ಕೂ ಮುನ್ನ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ರೋಮಾಂಚನಕಾರಿಯಾಗಿ ಡ್ರಾ ಸಾಧಿಸಿತು.

ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಅಮೂಲ್ಯವಾದ 97 ರನ್‌ಗಳ ಕೊಡುಗೆಯನ್ನು ನೀಡಿ ವಿಕೆಟ್ ಒಪ್ಪಿಸಿದ್ದರು. ರಿಷಬ್ ಪಂತ್ ವಿಕೆಟ್ ಒಪ್ಪಿಸುತ್ತಿದ್ದಂತೆಯೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಟೀಮ್ ಇಂಡಿಯಾ ಡ್ರಾ ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ ತಾನು ಇನ್ನು ಅರ್ಧ ಗಂಟೆ ಹೆಚ್ಚು ಕಾಲ ಉಳಿದುಕೊಂಡಿದ್ದರೆ ಟೀಮ್ ಇಂಡಿಯಾ ಆ ಪಂದ್ಯವನ್ನು ಗೆಲ್ಲುವ ಸಾಧ್ಯತೆಯಿತ್ತು ಎಂದು ರಿಷಭ್ ಪಂತ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಪರ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕನಸು ವ್ಯಕ್ತಪಡಿಸಿದ ವಾಶಿಂಗ್ಟನ್ ಸುಂದರ್ಭಾರತದ ಪರ ಟೆಸ್ಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಕನಸು ವ್ಯಕ್ತಪಡಿಸಿದ ವಾಶಿಂಗ್ಟನ್ ಸುಂದರ್

ರಿಷಭ್ ಪಂತ್ ಅಬ್ಬರದ ಆಟ

ರಿಷಭ್ ಪಂತ್ ಅಬ್ಬರದ ಆಟ

ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ 407 ರನ್‌ಗಳ ಬೃಹತ್ ಗುರಿಯನ್ನು ಗೆಲುವಿಗಾಗಿ ನೀಡಿತ್ತು. ಈ ಪಂದ್ಯದ ಅಂತಿಮ ದಿನದಂದು ಭಾರತ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತ್ತು. ಆದರೆ ರಿಷಭ್ ಪಂತ್ ಅಬ್ಬರದ ಆಟದಿಂದಾಗಿ ಅಸಾಧ್ಯ ಗೆಲುವು ಸಾಧಿಸುವ ಭರವಸೆ ಮೂಡುವಂತೆ ಮಾಡಿತ್ತು.

ಆತುರ ಮಾಡಿ ಎಡವಿದ ಪಂತ್

ಆತುರ ಮಾಡಿ ಎಡವಿದ ಪಂತ್

ಈ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 118 ಎಸೆತಗಳಲ್ಲಿ 97 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದ್ದರು. ಚೇತೇಶ್ವರ್ ಪೂಜಾರ ಜೊತೆಗೆ ಪಂತ್ ಬ್ಯಾಟಿಂಗ್ ಮುಂದಯವರಿಸುತ್ತಿದ್ದ ವೇಳೆ ಒಂದು ಹಂತದಲ್ಲಿ ಭಾರತ 250 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನೇಥನ್ ಲಿಯಾನ್ ಎಸೆತದಲ್ಲಿ ಬೌಂಡರಿ ಸಿಡಿಸಿ ಶತಕ ಗಳಿಸುವ ಪ್ರಯತ್ನದಲ್ಲಿ ವಿಫಲವಾಗಿ ಪಂತ್ ವಿಕೆಟ್ ಒಪ್ಪಿಸಿ ಹೊರನಡೆದಿದ್ದರು. ಬಳಿಕ ಪಂದ್ಯದ ಫಲಿತಾಂಶ ಡ್ರಾದೊಂದಿಗೆ ಅಂತ್ಯವಾಗಿತ್ತು.

30 ನಿಮಿಷ ಆಡಿದ್ದರೆ ಗೆಲುವು ಸಾಧ್ಯವಿತ್ತು

30 ನಿಮಿಷ ಆಡಿದ್ದರೆ ಗೆಲುವು ಸಾಧ್ಯವಿತ್ತು

ಸ್ಪೋರ್ಟ್ಸ್ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಿಷಭ್ ಪಂತ್ ಇನ್ನು 30 ನಿಮಿಷಗಳ ಕಾಲ ನಾನು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲುವು ಸಾಧಿಸಬಹುದಾಗಿತ್ತು. ಆದರೆ ಈ ಇನ್ನಿಂಗ್ಸ್ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮತ್ತಷ್ಟು ಉತ್ತಮವಾಗಿ ಆಡಿ ಸರಣಿ ಗೆಲುವಿಗೆ ಈ ಮೂಲಕ ಸಹಕಾರಿಯಾಯಿತು ಎಂದು ರಿಷಭ್ ಪಂತ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿ ಮೇಲೆ ಪಂತ್ ಚಿತ್ತ

ಇಂಗ್ಲೆಂಡ್ ವಿರುದ್ಧದ ಸರಣಿ ಮೇಲೆ ಪಂತ್ ಚಿತ್ತ

ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಪ್ರವಾಸ ಮುಗಿಸಿಕೊಂಡು ತವರಿಗೆ ಮರಳಿರುವ ರಿಷಭ್ ಪಂತ್ ಈಗ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೇಲೆ ಚಿತ್ತ ನೆಟ್ಟಿದ್ದಾರೆ. ಈ ಸರಣಿ ಫೆಬ್ರವರಿ 5 ರಿಂದ ಆರಂಭವಾಗಲಿದ್ದು ತವರಿನಲ್ಲೂ ಟೀಮ್ ಇಂಡಿಯಾ ಪರವಾಗಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದ್ದಾರೆ.

Story first published: Wednesday, January 27, 2021, 8:43 [IST]
Other articles published on Jan 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X