ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 'ಬಲ್ ಅಪರೂಪ'ದ ಕ್ಷಣಕ್ಕೆ ಸಾಕ್ಷಿಯಾದ ಪಂತ್-ರೈನಾ-ವಿಡಿಯೋ

IPL 2019 : ಸೀನಿಯರ್ ಆದ್ರು ಜೂನಿಯರ್ ಶೂ ಮುಟ್ಟಿದ್ರು ರೈನಾ..? | Oneindia Kannada
Rishabh Pant, Suresh Raina showcase ‘Spirit of Cricket’ - Watch

ವಿಶಾಖಪಟ್ಟಣ, ಮೇ 11: ಬದ್ಧ ಎದುರಾಳಿ ತಂಡಗಳ ಮಧ್ಯೆ ಜಿದ್ದಾಜಿದ್ದಿಯ ಪಂದ್ಯವಿದ್ದಾಗ ಭಾರತೀಯ ಆಟಗಾರರೂ ಬಿಗು ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದ ಸಂಗತಿಗಳಿವೆ. ಆದರೆ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದ ವೇಳೆ ಇದಕ್ಕೆ ವ್ಯತಿರಿಕ್ತ ದೃಶ್ಯ ಕಾಣಸಿಕ್ಕಿತು. ರಿಷಬ್ ಪಂತ್ ಮತ್ತು ಅನುಭವಿ ಆಟಗಾರ ಸುರೇಶ್ ರೈನಾ ಅಪರೂಪದ ಕ್ಷಣವೊಂದಕ್ಕೆ ಗಮನ ಸೆಳೆದರು.

ಕಾಮೆಂಟರಿ ಮಧ್ಯೆ ಡಾ. ರಾಜ್‌ ಹಾಡು ಹಾಡಿದ ವೆಂಕಟೇಶ್ ಪ್ರಸಾದ್-ವಿಡಿಯೋಕಾಮೆಂಟರಿ ಮಧ್ಯೆ ಡಾ. ರಾಜ್‌ ಹಾಡು ಹಾಡಿದ ವೆಂಕಟೇಶ್ ಪ್ರಸಾದ್-ವಿಡಿಯೋ

ಡಾ. ವೈಡಸ್ ರಾಜಶೇಖರ್ ರೆಡ್ಡಿ ವಿಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಡಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸಿಎಸ್‌ಕೆ ಬೌಲಿಂಗ್ ಆಯ್ದುಕೊಂಡಿತ್ತು.

ಡೆಲ್ಲಿ ಇನ್ನಿಂಗ್ಸ್ ವೇಳೆ ತಂಡದ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ಶೂ ಲೇಸ್ ಕಳಚಿತ್ತು. ಆಗ ಎದುರಾಳಿ ತಂಡದ ಆಟಗಾರ ರೈನಾ ಬಂದು ಪಂತ್ ಎರಡೂ ಕಾಲಿನ ಶೂ ಲೇಸ್ ಕಟ್ಟಿ ಸಹಾಯ ಮಾಡಿದ್ದರು. ಪಂದ್ಯದ ವೇಳೆ ಆಟಗಾರರು ಹೀಗೆ ಶೂ ಲೇಸ್ ಕಟ್ಟಿಕೊಳ್ಳುವ ದೃಶ್ಯ ಆಗಾಗ ಕಣಸಿಗುತ್ತದಾದರೂ, ಇದು ಕೊಂಚ ಅಪರೂಪವೆಂಬಂತೆ ಗಮನ ಸೆಳೆದಿತ್ತು.

ಕ್ರಿಕೆಟ್: ಐಪಿಎಲ್ ಗೆಲುವಿನಲ್ಲಿ ಸೆಂಚುರಿ ಬಾರಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ಕ್ರಿಕೆಟ್: ಐಪಿಎಲ್ ಗೆಲುವಿನಲ್ಲಿ ಸೆಂಚುರಿ ಬಾರಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯದಲ್ಲಿ ಶೇನ್ ವ್ಯಾಟ್ಸನ್ (50) ಮತ್ತು ಫಾ ಡು ಪ್ಲೆಸಿಸ್ (50) ಅರ್ಧಶತಕದ ಬೆಂಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಡೆಲ್ಲಿ ವಿರುದ್ಧ 6 ವಿಕೆಟ್‌ ಜಯದೊಂದಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಡಿಸಿಯ ಐಪಿಎಲ್ ಚೊಚ್ಚಲ ಫೈನಲ್ ಪ್ರವೇಶದ ಕನಸು ಈ ಪಂದ್ಯದೊಂದಿಗೆ ಮಣ್ಣು ಪಾಲಾಯ್ತು.

Story first published: Saturday, May 11, 2019, 14:57 [IST]
Other articles published on May 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X