ಭಾರತ vs ದ.ಆಫ್ರಿಕಾ 2ನೇ ಏಕದಿನ ಪಂದ್ಯ: ಪಂತ್ ಅಬ್ಬರಕ್ಕೆ ದ್ರಾವಿಡ್, ಧೋನಿ ಇಬ್ಬರ ದಾಖಲೆಯೂ ಧ್ವಂಸ!

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಇತ್ತಂಡಗಳ ನಡುವಿನ ಈ ಏಕದಿನ ಸರಣಿಯ ಚೊಚ್ಚಲ ಪಂದ್ಯ ಈಗಾಗಲೇ ಮುಗಿದಿದ್ದು, ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾವನ್ನು ಮೊದಲನೇ ಪಂದ್ಯದಲ್ಲಿ ಸೋಲಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದೆ.

ದ.ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಗೆಲ್ಲಲು ಈ ಇಬ್ಬರಲ್ಲಿ ಒಬ್ಬನನ್ನು ತಂಡದಿಂದ ಹೊರಗಿಡಿ: ಡಿಕೆದ.ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಗೆಲ್ಲಲು ಈ ಇಬ್ಬರಲ್ಲಿ ಒಬ್ಬನನ್ನು ತಂಡದಿಂದ ಹೊರಗಿಡಿ: ಡಿಕೆ

ಅತ್ತ ಏಕದಿನ ಸರಣಿಯ ಚೊಚ್ಚಲ ಪಂದ್ಯದಲ್ಲಿ ಸೋತಿರುವ ಟೀಮ್ ಇಂಡಿಯಾ ಉಳಿದೆರಡು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಹರಿಣಗಳ ನೆಲದಲ್ಲಿ ಮುಖಭಂಗದಿಂದ ಪಾರಾಗಬೇಕಿದೆ. ಹೌದು, ಈ ಏಕದಿನ ಸರಣಿಗೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಯಲ್ಲಿಯೂ ಕೂಡ ಹಿನ್ನಡೆ ಅನುಭವಿಸಿದ್ದು ಉಳಿದೆರಡು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಅವಮಾನದಿಂದ ತಪ್ಪಿಸಿಕೊಳ್ಳಬೇಕಿದೆ.

ಇದೆಂಥ ನಾಯಕತ್ವ, ಆ ಇಬ್ಬರಿಲ್ಲದೇ ಟೀಮ್ ಇಂಡಿಯಾ ಸೋತಿದೆ ಎಂದು ಬೇಸರಗೊಂಡ ಮಾಜಿ ಕ್ರಿಕೆಟಿಗಇದೆಂಥ ನಾಯಕತ್ವ, ಆ ಇಬ್ಬರಿಲ್ಲದೇ ಟೀಮ್ ಇಂಡಿಯಾ ಸೋತಿದೆ ಎಂದು ಬೇಸರಗೊಂಡ ಮಾಜಿ ಕ್ರಿಕೆಟಿಗ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮಂಕಾಗಿದ್ದರಿಂದ ಟೀಮ್ ಇಂಡಿಯಾ ಪಂದ್ಯವನ್ನು ಸೋಲಬೇಕಾಗಿ ಬಂತು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದಿದ್ದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 55 ರನ್ ಗಳಿಸಿದರೆ, ಶಿಖರ್ ಧವನ್ 29 ರನ್ ಗಳಿಸಿದರು ಹಾಗು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದು 71 ಎಸೆತಗಳಲ್ಲಿ 85 ರನ್ ಬಾರಿಸುವುದರ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಹೀಗೆ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಆಟವನ್ನು ಆಡುವುದರ ಮೂಲಕ ಟೀಮ್ ಇಂಡಿಯಾಗೆ ಆಸರೆಯಾಗಿರುವ ರಿಷಭ್ ಪಂತ್ ಈ ಇನ್ನಿಂಗ್ಸ್ ಮೂಲಕ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಎಂಎಸ್ ಧೋನಿ ಅವರನ್ನು ದಾಖಲೆಯೊಂದರಲ್ಲಿ ಹಿಂದಿಕ್ಕಿದ್ದಾರೆ. ಈ ದಾಖಲೆ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

{photo-feature}

ಇದಪ್ಪ ಕನ್ನಡಿಗನ ಅದೃಷ್ಟ ಅಂದ್ರೆ !! | Oneindia Kannada

For Quick Alerts
ALLOW NOTIFICATIONS
For Daily Alerts
Story first published: Friday, January 21, 2022, 18:06 [IST]
Other articles published on Jan 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X