ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಜೊತೆ ಮತ್ತೋರ್ವ ಸ್ಟಾರ್ ಆಟಗಾರ ತಂಡದಿಂದ ಹೊರಕ್ಕೆ: ಮುಂದಿನ ಸರಣಿಯಿಂದ ಇಬ್ಬರೂ ಔಟ್!

Rishabh Pant to miss 3rd t20 against West Indies and t20 series against Sri Lanka along with Virat Kohli

ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯನ್ನು ಗೆಲ್ಲುವುದರ ಮೂಲಕ ವಿಶ್ವಾಸದೊಂದಿಗೆ ಭಾರತ ಪ್ರವಾಸವನ್ನು ಕೈಗೊಂಡಿದ್ದ ಕೆರಿಬಿಯನ್ನರು ಅಕ್ಷರಶಃ ಮಂಕಾಗಿದ್ದಾರೆ. ಹೌದು, ಭಾರತ ಪ್ರವಾಸವನ್ನು ಕೈಗೊಂಡಿರುವ ವೆಸ್ಟ್ ಇಂಡೀಸ್ ಮೊದಲಿಗೆ ಟೀಮ್ ಇಂಡಿಯಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹಾಗೂ ನಂತರ ಆರಂಭವಾದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು, ಈ ಎರಡೂ ಪಂದ್ಯಗಳಲ್ಲಿಯೂ ಕೂಡ ಕೆರಿಬಿಯನ್ನರು ಸೋಲನ್ನು ಅನುಭವಿಸಿದ್ದಾರೆ.

ಐಪಿಎಲ್ ಹರಾಜು: ಈ ಸಾಮಾನ್ಯ ಆಟಗಾರರಿಗೆ ಕೋಟಿ ಏಕೆ? ಎಲ್ಲಾ ಫ್ರಾಂಚೈಸಿಯಲ್ಲೂ ಓರ್ವ ಕಳಪೆ ಆಟಗಾರ!ಐಪಿಎಲ್ ಹರಾಜು: ಈ ಸಾಮಾನ್ಯ ಆಟಗಾರರಿಗೆ ಕೋಟಿ ಏಕೆ? ಎಲ್ಲಾ ಫ್ರಾಂಚೈಸಿಯಲ್ಲೂ ಓರ್ವ ಕಳಪೆ ಆಟಗಾರ!

ಇತ್ತ ಇದಕ್ಕೂ ಮುನ್ನ ಹರಿಣಗಳ ವಿರುದ್ಧ ನಡೆದಿದ್ದ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಹೀನಾಯ ಸೋಲನ್ನು ಅನುಭವಿಸಿದ್ದ ಟೀಮ್ ಇಂಡಿಯಾ ಇದೀಗ ಕೆರಿಬಿಯನ್ನರ ವಿರುದ್ಧ ಸಾಲು ಸಾಲು ಜಯ ಸಾಧಿಸುವುದರ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ. ಮೊದಲಿಗೆ ನಡೆದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಬಳಿದಿರುವ ಟೀಮ್ ಇಂಡಿಯಾ ಇದೀಗ ಟಿ ಟ್ವೆಂಟಿ ಸರಣಿಯಲ್ಲಿಯೂ ಕೂಡ ಕೆರಿಬಿಯನ್ನರಿಗೆ ವೈಟ್ ವಾಶ್ ಬಳಿಯುವ ಸನಿಹದಲ್ಲಿದೆ.

ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!

ಆದರೆ, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಈ ತೃತೀಯ ಟಿ ಟ್ವೆಂಟಿ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಭಾರತ ತಂಡದಲ್ಲಿ ಭಾರೀ ಬದಲಾವಣೆಯಾಗುವ ಕುರಿತು ಸುದ್ದಿಯೊಂದು ಹೊರಬಿದ್ದಿದೆ. ಹೌದು, ಫೆಬ್ರವರಿ 20ರ ಭಾನುವಾರದಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯಕ್ಕೆ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಅಲಭ್ಯರಾಗುತ್ತಿದ್ದಾರೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಜತೆ ಮತ್ತೋರ್ವ ಪ್ರಮುಖ ಆಟಗಾರ ವಿಂಡೀಸ್ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯದಿಂದ ಹೊರಗುಳಿದಿದ್ದು, ಈ ಕುರಿತಾದ ಮತ್ತಷ್ಟು ವಿವರ ಈ ಕೆಳಕಂಡಂತಿದೆ.

ವಿರಾಟ್ ಕೊಹ್ಲಿ ಜತೆ ರಿಷಭ್ ಪಂತ್ ಕೂಡ ತಂಡದಿಂದ ಹೊರಕ್ಕೆ

ವಿರಾಟ್ ಕೊಹ್ಲಿ ಜತೆ ರಿಷಭ್ ಪಂತ್ ಕೂಡ ತಂಡದಿಂದ ಹೊರಕ್ಕೆ

ಮೊದಲಿಗೆ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ವಿರಾಟ್ ಕೊಹ್ಲಿ ಮಾತ್ರವಲ್ಲದೇ ಟೀಮ್ ಇಂಡಿಯಾದ ಪ್ರಮುಖ ಆಟಗಾರ ರಿಷಭ್ ಪಂತ್ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಬಿಸಿಸಿಐ ಬಯೋಬಬಲ್ ವ್ಯವಸ್ಥೆಯಿಂದ ರಿಷಭ್ ಪಂತ್ ಅವರಿಗೆ ಹೊರನಡೆಯಲು ಅನುಮತಿಯನ್ನು ನೀಡಿದ್ದು ಶನಿವಾರ ಬೆಳಿಗ್ಗೆಯೇ ರಿಷಭ್ ಪಂತ್ ಕೂಡ ವಿರಾಟ್ ಕೊಹ್ಲಿ ಜೊತೆ ಪಯಣ ಬೆಳೆಸಿದ್ದಾರೆ ಎನ್ನಲಾಗಿದೆ.

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೂ ಪಂತ್ ಅಲಭ್ಯ

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೂ ಪಂತ್ ಅಲಭ್ಯ

ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯ ಮಾತ್ರವಲ್ಲದೇ, ನಂತರ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲೂ ಸಹ ರಿಷಭ್ ಪಂತ್ ಭಾಗವಹಿಸುವುದಿಲ್ಲ ಎಂಬ ಸುದ್ದಿ ಬಂದಿದೆ. ವಿರಾಟ್ ಕೊಹ್ಲಿ ರೀತಿಯೇ ರಿಷಭ್ ಪಂತ್ ಅವರಿಗೂ ಕೂಡ ಬಿಸಿಸಿಐ ವಿಶ್ರಾಂತಿಯನ್ನು ನೀಡಿದೆ. ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಇಬ್ಬರಿಗೂ ಕೂಡ ಬಿಸಿಸಿಐ 10 ದಿನಗಳ ವಿರಾಮವನ್ನು ನೀಡಿದೆ. ಹೀಗಾಗಿ ಇಬ್ಬರೂ ಸಹ ವಿಂಡೀಸ್ ವಿರುದ್ಧದ ಅಂತಿಮ ಟಿ ಟ್ವೆಂಟಿ ಪಂದ್ಯ ಹಾಗೂ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಅಲಭ್ಯರಾಗುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಗಳು ಯಾವಾಗ?

ಶ್ರೀಲಂಕಾ ವಿರುದ್ಧದ ಸರಣಿಗಳು ಯಾವಾಗ?

ಸದ್ಯ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಫೆಬ್ರವರಿ 20ರ ಭಾನುವಾರದಂದು ಮುಕ್ತಾಯಗೊಳ್ಳಲಿದ್ದು, ಇದರ ಬೆನ್ನಲ್ಲೇ ಶ್ರೀಲಂಕಾ ಆಟಗಾರರು ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಮೊದಲಿಗೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆಯಲಿದ್ದು, ನಂತರ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗಳ ದಿನಾಂಕದ ವಿವರ ಈ ಕೆಳಕಂಡಂತಿದೆ..

ಮೊದಲನೇ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 24ರಂದು ಸಂಜೆ 7ಕ್ಕೆ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯಲಿದೆ.


ದ್ವಿತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 26ರಂದು ಸಂಜೆ 7ಕ್ಕೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದೆ.


ತೃತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 27ರಂದು ಸಂಜೆ 7ಕ್ಕೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದೆ.


ಪ್ರಥಮ ಟೆಸ್ಟ್ ಪಂದ್ಯ: ಮಾರ್ಚ್ 4ರಿಂದ 8ರವರೆಗೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ದ್ವಿತೀಯ ಟೆಸ್ಟ್ ಪಂದ್ಯ: ಮಾರ್ಚ್ 12ರಿಂದ ಮಾರ್ಚ್ 16ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Story first published: Saturday, February 19, 2022, 16:07 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X