ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಕೆಟ್ ಕೀಪಿಂಗ್ ವಿಚಾರವಾಗಿ ರಿಷಭ್ ಪಂತ್‌ಗೆ ಬೆಂಬಲ ವ್ಯಕ್ತಪಡಿಸಿದ ಅಜಿಂಕ್ಯ ರಹಾನೆ

Rishabh Pant will improve as wicketkeeper with more game time in India says Ajinkya Rahane

ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಇತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ಪಂತ್ ವಿಕೆಟ್ ಕೀಪಿಂಗ್ ಬಗ್ಗೆ ಇನ್ನೂ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ವಿಕೆಟ್ ಕೀಪರ್‌ ಆಗಿ ಪಂತ್ ಸಾಕಷ್ಟು ಸುಧಾರಣೆಯಾಗಬೇಕಿರುವುದು ಪ್ರದರ್ಶನದಿಂದಲೇ ಅರಿವಿಗೆ ಬರುತ್ತಿದೆ. ಈ ಬಗ್ಗೆ ಉಪನಾಯಕ ಅಜಿಂಕ್ಯ ರಹಾನೆ ಪ್ರತಿಕ್ರಿಯಿಸಿದ್ದಾರೆ.

ಅಜಿಂಕ್ಯ ರಹಾನೆ ವಿಕೆಟ್ ಕೀಪಿಂಗ್‌ನಲ್ಲಿ ರಿಷಭ್ ಪಂತ್ ಮೇಲೆ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡುತ್ತಿದ್ದಂತೆಯೇ ರಿಷಭ್ ಪಂತ್ ಅವರ ವಿಕೆಟ್ ಕೀಪಿಂಗ್ ಕೌಶಲ್ಯದಲ್ಲಿ ಸುಧಾರಣೆ ಕಾಣಲಿದೆ ಎಂದಿದ್ದಾರೆ ಅಜಿಂಕ್ಯ ರಹಾನೆ.

ಭಾರತ vs ಇಂಗ್ಲೆಂಡ್: ದ್ವಿತೀಯ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟಭಾರತ vs ಇಂಗ್ಲೆಂಡ್: ದ್ವಿತೀಯ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ

"ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಭಾರತದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದಂತೆ ಉತ್ತಮವಾಗಲಿದ್ದಾರೆ. ಬ್ಯಾಟ್‌ನಲ್ಲಿ ಅವರು ಯಾವ ರೀತಿ ಸಾಧನೆ ಮಾಡಲಿದ್ದಾರೆ ಎಂಬುದು ನಮಗೆ ತಿಳಿದಿದೆ. ಅಂತಾ ಆಟಗಾರನ ಬೆಂಬಲಕ್ಕೆ ನಾವು ನಿಲ್ಲಬೇಕಿದೆ" ಎಂದು ಅಜಿಂಕ್ಯ ರಹಾನೆ ಹೇಳಿಕೆಯನ್ನು ನೀಡಿದ್ದಾರೆ.

ಇನ್ನು ಇದಕ್ಕೂ ಮುನ್ನ ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ರಿಷಭ್ ಪಂತ್ ಬ್ಯಾಟಿಂಗ್ ವೇಳೆ ಕೆಲ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಅರಿತು ಆಡುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು. ಪಂತ್ ಮೊದಲ ಟೆಸ್ಟ್‌ನಲ್ಲಿ 88 ಎಸೆತಗಳಲ್ಲಿ 91 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

ಬಿಸಿಸಿಐಯ '2 ಕಿ.ಮೀ. ರನ್' ಫಿಟ್ನೆಸ್ ಪರೀಕ್ಷೆಯಲ್ಲಿ 6 ಆಟಗಾರರು ಫೇಲ್!ಬಿಸಿಸಿಐಯ '2 ಕಿ.ಮೀ. ರನ್' ಫಿಟ್ನೆಸ್ ಪರೀಕ್ಷೆಯಲ್ಲಿ 6 ಆಟಗಾರರು ಫೇಲ್!

ವಿಕೆಟ್ ಕೀಒರ್ ಆಗಿ ಅದ್ಭುತ ಪ್ರದರ್ಶನವನ್ನು ನೀಡಬಲ್ಲ ಸಾಮರ್ಥ್ಯ ಹೊಂದಿರುವ ಅನುಭವಿ ವೃದ್ಧೀಮಾನ್ ಸಾಹಾ ಬದಲಿಗೆ ಬ್ಯಾಟಿಂಗ್ ಸಾಮರ್ಥ್ಯದ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ರಿಷಭ್ ಪಂತ್ ಆಯ್ಕೆಯಾಗಿದ್ದರು. ಎರಡನೇ ಟೆಸ್ಟ್‌ನ ಆಡುವ ಬಳಗದಲ್ಲೂ ಪಂತ್ ಕಾಣಿಸಿಕೊಳ್ಳುವ ಬಗ್ಗೆ ಯಾವುದೇ ಅನುಮಾನಗಳಿಲ್ಲ.

Story first published: Saturday, February 13, 2021, 8:57 [IST]
Other articles published on Feb 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X