ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್ ಇನ್ನೂ 15 ವರ್ಷಗಳ ಕಾಲ ಭಾರತಕ್ಕಾಗಿ ಆಡಲಿದ್ದಾರೆ: ಗಂಗೂಲಿ

Rishabh Pant will play for India for next 15 years, says Sourav Ganguly

ಕೋಲ್ಕತ್ತಾ, ಏಪ್ರಿಲ್ 24: ಮುಂಬರಲಿರುವ ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಪರಿಗಣಿಸದಿರುವುದು ರಿಷಬ್ ಪಂತ್‌ಗೆ ನಿರಾಸೆ ಮೂಡಿಸಿರಬಹುದು. ಆದರೆ ಪಂತ್ ಇನ್ನೂ 15 ವರ್ಷಗಳ ಕಾಲ ಭಾರತ ತಂಡಕ್ಕಾಗಿ ಆಡಲಿದ್ದಾರೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

'ಧೋನಿ ಯಾವತ್ತಿಗೂ ಆಡುತ್ತಾರೆ ಎನ್ನಲಾಗದು. ಡಿಕೆದ್ದೂ (ದಿನೇಶ್ ಕಾರ್ತಿಕ್‌) ಇದೇ ಕತೆ. ಆದರೆ ಪಂತ್‌ನ ನಾಳೆಗಳು ಚೆನ್ನಾಗಿರಲಿವೆ. ಪಂತ್ ಭವಿಷ್ಯ ನಿಜಕ್ಕೂ ಉತ್ತಮವಾಗಿದೆ' ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಗಂಗೂಲಿ ನುಡಿದಿದ್ದಾರೆ.

'ಪಂತ್ ಇನ್ನೂ 15-16 ವರ್ಷಗಳ ಕಾಲ ಕ್ರಿಕೆಟ್‌ ಕ್ಷೇತ್ರದಲ್ಲಿ ಮುಂದುವರೆಯುವವರು. ಹೀಗಾಗಿ ವಿಶ್ವಕಪ್‌ನಲ್ಲಿ ಈಗ ಸ್ಥಾನ ದೊರೆಯದ್ದು ದೊಡ್ಡ ಹಿನ್ನಡೆ ಅಂತ ನನಗನ್ನಿಸುತ್ತಿಲ್ಲ. ಅದೊಂದು ಸಮಸ್ಯೆಯೆಂದು ನನಗನ್ನಿಸುತ್ತಲೇ ಇಲ್ಲ. ಪಂತ್ ಈಗ ವಿಶ್ವಕಪ್ ಮಿಸ್ ಮಾಡಿಕೊಂಡರೂ ನಾಳೆ ಬಹಳಷ್ಟು ವಿಶ್ವಕಪ್‌ಗಳನ್ನು ಆಡಲಿದ್ದಾರೆ' ಎಂದು ಬಂಗಾಳ ಹುಲಿ ಅಭಿಪ್ರಾಯಿಸಿದರು.

ರಹಸ್ಯ ಬಿಚ್ಚಿಟ್ಟರೆ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ: ಧೋನಿರಹಸ್ಯ ಬಿಚ್ಚಿಟ್ಟರೆ ಸಿಎಸ್‌ಕೆ ನನ್ನನ್ನು ಖರೀದಿಸುವುದಿಲ್ಲ: ಧೋನಿ

'ಈ ಬಾರಿ ಅವಕಾಶ ಸಿಗದ ಮಾತ್ರಕೆ ದಾರಿಯೇ ಮುಗಿಯಿತೆಂದಲ್ಲ' ಎಂದು ಗಂಗೂಲಿ ಪಂತ್ ಸಮಾಧಾನಿಸುವ ಪ್ರಯತ್ನ ಮಾಡಿದರು. ತನ್ನ ನೆಚ್ಚಿನ ವಿಶ್ವಕಪ್‌ ತಂಡ ಆರಿಸುವಾಗ ಗಂಗೂಲಿ ಪಂತ್ ಹೆಸರನ್ನೂ ಸೇರಿಸಿದ್ದರು. ಆದರೆ ಸದ್ಯ ಪ್ರಕಟಿತ ತಂಡ ಸಮತೋಲಿತವಾಗಿದೆ ಎಂದೂ ಗಂಗೂಲಿ ತಿಳಿಸಿದ್ದಾರೆ. ಮೇ 30ರಿಂದ ಇಂಗ್ಲೆಂಡ್ & ವೇಲ್ಸ್‌ನಲ್ಲಿ ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದೆ.

Story first published: Wednesday, April 24, 2019, 22:12 [IST]
Other articles published on Apr 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X