ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನನಗೆ ಸ್ಫೂರ್ತಿ ಎಂದ ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟರ್

ಕೊಹ್ಲಿಯಿಂದ ಈತ ಕಲಿಯುತ್ತಿರೋದು ಏನು ಅಂತ ನೋಡಿ. ONEINDIA KANNADA
Rising Australia star Labuschagne aspires to emulate Virat as top performer in all formats

ನವದೆಹಲಿ, ಜನವರಿ 10: ಆಸ್ಟ್ರೇಲಿಯಾದ ಉದಯೋನ್ಮುಖ ಕ್ರಿಕೆಟರ್ ಮಾರ್ನಸ್ ಲಾಬುಚಾನೆ ಅವರು ಭಾರತ ವಿರುದ್ಧ ಮುಂಬರುವ ಏಕದಿನ ಕ್ರಿಕೆಟ್ ಸರಣಿ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನನಗೆ ಸ್ಫೂರ್ತಿ, ಮುಂಬರುವ ಸರಣಿಯಲ್ಲಿ ಕೊಹ್ಲಿ ಹಾಗೂ ಸ್ಮಿತ್ ಆಟವನ್ನು ನೋಡಿ ನಾನು ಸಾಕಷ್ಟು ಕಲಿಯುವುದಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಸಂಚಲನ ಮೂಡಿಸಿರುವ 22 ವರ್ಷ ವಯಸ್ಸಿನ ಲಾಬುಚಾನೆ ಪಾಕಿಸ್ತಾನ ವಿರುದ್ಧ ಸತತ ಎರಡು ಶತಕ, ನ್ಯೂಜಿಲೆಂಡ್ ವಿರುದ್ಧ ದ್ವಿಶತಕ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ದಶಕದ ಚೊಚ್ಚಲ ಶತಕ ಬಾರಿಸಿದ ಆಸೀಸ್ ದಾಂಡಿಗ ಮಾರ್ನಸ್ ಲ್ಯಾಬುಸ್ಚಾಗ್ನೆದಶಕದ ಚೊಚ್ಚಲ ಶತಕ ಬಾರಿಸಿದ ಆಸೀಸ್ ದಾಂಡಿಗ ಮಾರ್ನಸ್ ಲ್ಯಾಬುಸ್ಚಾಗ್ನೆ

ಇಎಸ್ ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತಾ, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಜೋ ರೂಟ್ ಆಟ ನೋಡಿ ಕಲಿಯುವುದು ಮುಖ್ಯ, ಕಳೆದ ಹಲವು ವರ್ಷಗಳಿಂದ ಯುವ ಕ್ರಿಕೆಟರ್ ಗಳಿಗೆ ಇವೆರಲ್ಲ ಸ್ಫೂರ್ತಿಯಾಗಿದ್ದಾರೆ ಎಂದು ಮಾರ್ನಸ್ ಹೇಳಿದ್ದಾರೆ.

ಜನವರಿ 14ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ(3 ಪಂದ್ಯಗಳು) ಮುಂಬೈನಲ್ಲಿ ಆರಂಭವಾಗಲಿದೆ.

ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್‌ ಬಿಟ್ಟಿದ್ದಕ್ಕೆ ಬೆಲೆತೆತ್ತ ಆಸ್ಟಲ್: ವೀಡಿಯೋಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್‌ ಬಿಟ್ಟಿದ್ದಕ್ಕೆ ಬೆಲೆತೆತ್ತ ಆಸ್ಟಲ್: ವೀಡಿಯೋ

ಭಾರತದಲ್ಲಿ ಸ್ಪಿನ್ನರ್ ಗಳನ್ನು ಎದುರಿಸುವುದು ಬ್ಯಾಟ್ಸ್ ಮನ್ ಗಳು ಕಲಿಯಬೇಕಾದ ಮೊದಲ ಪಾಠ, ವಿಕೆಟ್ ನಡುವೆ ಚುರುಕಾಗಿ ಓಡುವುದು, ಮಧ್ಯಮ ಕ್ರಮಾಂಕದಲ್ಲಿ ಇನ್ನಿಂಗ್ಸ್ ಸಂಭಾಳಿಸುವುದು ಮುಖ್ಯ. ಭಾರತದಲ್ಲಿ ಆಡುವಾಗ ಮೈಕಲ್ ಹಸ್ಸಿ ಅವರು ಅನುಸರಿಸಿದ ಶೈಲಿಯನ್ನೇ ನಾನು ಅನುಸರಿಸುತ್ತೇನೆ ಎಂದು ಲಾಬುಚಾನೆ ಹೇಳಿದರು.

ಆಸ್ಟ್ರೇಲಿಯಾ ತಂಡದಲ್ಲಿ ಅರೋನ್ ಫಿಂಚ್, ಡೇವಿಡ್ ವಾರ್ನರ್, ಸ್ಮಿತ್ ಮೊದಲ ಮೂರು ಕ್ರಮಾಂಕದಲ್ಲಿ ಆಡುವುದರಿಂದ ನಂತರದ ಕ್ರಮಾಂಕದಲ್ಲಿ ಲಾಬುಚಾನೆ, ಪೀಟರ್ ಹ್ಯಾಂಡ್ಸ್ ಕಂಬ್, ಅಲೆಕ್ಸ್ ಕ್ಯಾರಿ ಹಾಗೂ ಆಸ್ಟನ್ ಟರ್ನರ್ ಸ್ಥಾನ ಪಡೆಯುವ ನಿರೀಕ್ಷೆಯಿದೆ.

Story first published: Friday, January 10, 2020, 15:31 [IST]
Other articles published on Jan 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X