ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿತುರಾಜ್, ಗಿಲ್, ಸೈನಿ ಶೈನ್: ವೆಸ್ಟ್ ಇಂಡೀಸ್ 'ಎ' ಮಣಿಸಿದ ಭಾರತ 'ಎ'

Rituraj Gaikwad, Shubman Gill, Navdeep Saini star in India A’s win over Windies A

ಆ್ಯಂಟಿಗುವಾ, ಜುಲೈ 15: ಯುವ ಬ್ಯಾಟ್ಸ್ಮನ್‌ಗಳಾದ ರಿತುರಾಜ್ ಗಾಯಕ್‌ವಾಡ್, ಶುಭ್‌ಮಾನ್‌ ಗಿಲ್ ಮತ್ತು ಬೌಲರ್ ನವದೀಪ್ ಸೈನಿಯ ಆಟದ ನೆರವಿನಿಂದ ಆ್ಯಂಟಿಗುವಾದ ನಾರ್ತ್‌ಸೌಂಡ್‌ನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾನುವಾರ (ಜುಲೈ 14) ನಡೆದ ಭಾರತ 'ಎ' ಮತ್ತು ವೆಸ್ಟ್ ಇಂಡೀಸ್ 'ಎ' ನಡುವಿನ 2ನೇ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ 65 ರನ್ ಜಯ ಗಳಿಸಿದೆ.

ವಿಶ್ವಕಪ್ 2019: ಕೊಹ್ಲಿ-ರೋಹಿತ್ ನಡುವಿನ ಬಿರುಕು ಪರಿಶೀಲಿಸಲಿದೆ ಬಿಸಿಸಿಐ!ವಿಶ್ವಕಪ್ 2019: ಕೊಹ್ಲಿ-ರೋಹಿತ್ ನಡುವಿನ ಬಿರುಕು ಪರಿಶೀಲಿಸಲಿದೆ ಬಿಸಿಸಿಐ!

ಭಾರತ 'ಎ'ಯ ಆರಂಭಿಕ ಬ್ಯಾಟ್ಸ್ಮನ್‌ಗಳಾದ ರಿತುರಾಜ್ ಮತ್ತು ಶುಭ್‌ಮಾನ್ ಅರ್ಧಶತಕದ ಬೆಂಬಲ ನೀಡಿದರೆ, ಮಧ್ಯಮ ವೇಗಿ ನವದೀಪ್ ಸೈನಿ ಮಾರಕ ಬೌಲಿಂಗ್ ದಾಳಿ ತಂಡದ ಗೆಲುವಿಗೆ ನೆರವು ನೀಡಿತು. ಈ ಗೆಲುವಿನೊಂದಿಗೆ ಭಾರತ, ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಗಳಿಸಿದೆ.

ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್‌ ಆಟಗಾರ!ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್‌ ಆಟಗಾರ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 'ಎ'ಗೆ ರಿತುರಾಜ್ 85 (102 ಎಸೆತ), ಗಿಲ್ 62 (83 ಎಸೆತ), ಮನೀಷ್ ಪಾಂಡೆ 27, ಹನುಮ ವಿಹಾರಿ 23, ಇಶನ್ ಕಿಶನ್ 24, ಅಕ್ಸರ್ ಪಟೇಲ್ 13 ರನ್ ಸೇರಿಸಿದರು. ಭಾರತ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 255 ರನ್ ಪೇರಿಸಿತು.

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ 2019: ಕೇನ್‌ ವಿಲಿಯಮ್ಸನ್‌ ಎಂಬ ಅದ್ಭುತ!ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ 2019: ಕೇನ್‌ ವಿಲಿಯಮ್ಸನ್‌ ಎಂಬ ಅದ್ಭುತ!

ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್‌ಗೆ ರೇಮನ್ ರೀಫರ್ 71, ಸುನಿಲ್ ಆ್ಯಂಬ್ರಿಸ್ 24, ರಹಕೀಮ್ ಕಾರ್ನ್‌ವಾಲ್ 13, ರೊಮಾರಿಯೋ ಶೆಫರ್ಡ್ 34 ರನ್ ಸೇರ್ಪಡೆ ಪ್ರಮುಖವೆನಿಸಿತು. ವಿಂಡೀಸ್ 'ಎ' 50 ಓವರ್‌ ಮುಕ್ತಾಯಕ್ಕೆ ಸರ್ವ ಪತನ ಕಂಡು 190 ರನ್ ಗಳಿಸಲಷ್ಟೇ ಶಕ್ತವಾಯ್ತು.

ಸೂಪರ್ ಗೇಮ್ : ಒಂದು ಕಪ್. ಒಂದು ಗೆಲುವು, ಎರಡು ತಂಡ ಚಾಂಪಿಯನ್ಸ್ಸೂಪರ್ ಗೇಮ್ : ಒಂದು ಕಪ್. ಒಂದು ಗೆಲುವು, ಎರಡು ತಂಡ ಚಾಂಪಿಯನ್ಸ್

ಭಾರತದ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ನ ರೊಮಾರಿಯೋ ಶೆಫರ್ಡ್ 36 ರನ್‌ಗೆ 4 ವಿಕೆಟ್ ಪಡೆದು ಗಮನ ಸೆಳೆದರೆ, ವಿಂಡೀಸ್ ಇನ್ನಿಂಗ್ಸ್‌ ವೇಳೆ ಭಾರತದ ನವದೀಪ್ ಸೈನಿ 46 ರನ್‌ಗೆ 5 ವಿಕೆಟ್, ರಾಹುಲ್ ಚಾಹರ್ 47 ರನ್‌ಗೆ 2 ವಿಕೆಟ್ ಪಡೆದು ಮಿಂಚಿದರು. 3ನೇ ಪಂದ್ಯ ಜುಲೈ 16ರ ಮಂಗಳವಾರ ನಡೆಯಲಿದೆ.

Story first published: Monday, July 15, 2019, 18:05 [IST]
Other articles published on Jul 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X