ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2 ದಿನಗಳ ಹಿಂದಷ್ಟೇ ICUನಲ್ಲಿದ್ದ ರಿಜ್ವಾನ್ ಆಸ್ಟ್ರೇಲಿಯಾ ವಿರುದ್ಧ ಅಬ್ಬರ: ನಿಜವಾದ ಹೀರೋ ಎಂದ ಅಕ್ತರ್

Mohamad rizwan

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ನ. 12) ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕ್‌ ವಿರುದ್ಧ ಆಸ್ಟ್ರೇಲಿಯಾ ರೋಚಕ ಗೆಲುವನ್ನ ಕಂಡಿದೆ. ಟೂರ್ನಮೆಂಟ್‌ನಲ್ಲಿ ಒಂದೇ ಒಂದು ಸೋಲನ್ನ ಕಾಣದ ಪಾಕಿಸ್ತಾನ ಕಾಂಗರೂಗಳ ಎದುರು ಮುಗ್ಗರಿಸಿದೆ.

ಪಾಕಿಸ್ತಾನ ನೀಡಿದ 177 ರನ್‌ಗಳನ್ನ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಪರ ವಾರ್ನರ್, ಮಾರ್ಕಸ್ ಸ್ಟೋಯ್ನೀಸ್, ಮ್ಯಾಥ್ಯೂ ವೇಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಒಂದು ಓವರ್ ಇರುವಂತೆಯೇ ಗೆಲುವಿನ ಗೆರೆ ದಾಟಿ ಫೈನಲ್ ಪ್ರವೇಶಿಸಿತು. 2010ರ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಪರ ಓಪನರ್‌ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಕ್ಯಾಪ್ಟನ್ ಬಾಬರ್ ಅಜಮ್ ಭದ್ರ ಅಡಿಪಾಯ ಹಾಕಿಕೊಟ್ಟರು. ಬಾಬರ್ 34 ಎಸೆತಗಳಲ್ಲಿ 39 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಮೊಹಮ್ಮದ್ ರಿಜ್ವಾನ್ 52 ಎಸೆತಗಳಲ್ಲಿ 67 ರನ್‌ ದಾಖಲಿಸಿ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ಗಳಿದ್ದವು.

ಮೊಹಮ್ಮದ್ ರಿಜ್ವಾನ್ ಆರಂಭಿಕ ಉತ್ತಮ ಬ್ಯಾಟಿಂಗ್ ಹಾಗೂ ಫಖಾರ್ ಜಮಾನ್ ಅಜೇಯ ಅರ್ಧಶತಕದ ನೆರವಿನಿಂದ ಪಾಕಿಸ್ತಾನ 4 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಆರಂಭಿಕ ರಿಜ್ವಾನ್ ಪಾತ್ರ ಮುಖ್ಯವಾಗಿತ್ತು. ಆದರೆ ಬಹಳ ಆಶ್ಚರ್ಯಕರ ವಿಷಯವು ಪಂದ್ಯ ಮುಗಿದ ಬಳಿಕ ಹೊರಬಿದ್ದಿದೆ.

ಮೊಹಮ್ಮದ್ ರಿಜ್ವಾನ್ ಪಂದ್ಯ ಆರಂಭಕ್ಕೂ ಎರಡು ದಿನಗಳ ಹಿಂದೆ ಶ್ವಾಸಕೋಶ ಸೋಂಕಿಗಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಹೌದು ಇದನ್ನು ಸ್ವತಃ ಮಾಜಿ ಪಾಕಿಸ್ತಾನ ವೇಗಿ ಶೋಯೆಬ್ ಅಕ್ತರ್ ಬಹಿರಂಗಪಡಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ರಿಜ್ವಾನ್ ಫೋಟೋವನ್ನು ಶೇರ್ ಮಾಡಿರುವ ಅಕ್ತರ್ ಇಂದು(ಗುರುವಾರ 11) ರಿಜ್ವಾನ್‌ರನ್ನ ಹೀರೋ ಎಂದು ಕರೆದಿದ್ದಾರೆ.

''ಈ ವ್ಯಕ್ತಿ ಇಂದು ತನ್ನ ದೇಶಕ್ಕಾಗಿ ಆಡಿದ ಮತ್ತು ಆತ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾನೆ ಎಂಬುದನ್ನ ನೀವು ಊಹಿಸಬಹುದೇ? ಕಳೆದ ಎರಡು ದಿನಗಳಿಂದ ಈತ ಆಸ್ಪತ್ರೆಯಲ್ಲಿದ್ದ. ನಿಜವಾದ ಹೀರೋ'' ಎಂದು ಶೋಯೆಬ್ ಅಕ್ತರ್ ರಿಜ್ವಾನ್ ಕ್ರೀಡಾಸ್ಫೂರ್ತಿಯನ್ನ ದೇಶಕ್ಕಾಗಿ ಆಡಬೇಕೆಂಬ ಮನೋಬಲವನ್ನ ಹೊಗಳಿದ್ದಾರೆ.

David Warner ಹೊಡೆದ 6 ಈಗ ಎಲ್ಲೆಡೆ ವೈರಲ್ | Oneindia Kannada

ಇನ್ನು ರಿಜ್ವಾನ್ ಅಷ್ಟೇ ಅಲ್ಲದೆ ಶೋಯೆಬ್ ಮಲ್ಲಿಕ್‌ ಕೂಡ ಜ್ವರದಿಂದ ಬಳಲುತ್ತಿದ್ದಾರೆಂದು ಸುದ್ದಿಯಾಗಿತ್ತು. ಹೀಗಾಗಿಯೇ ಈ ಇಬ್ಬರು ಆಟಗಾರರು ಸೆಮಿಫೈನಲ್‌ಗೂ ಮುನ್ನ ಅಭ್ಯಾಸದಲ್ಲಿ ಪಾಲ್ಗೊಂಡಿರಲಿಲ್ಲ.

Story first published: Friday, November 12, 2021, 12:30 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X