ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಕ್ರಿಕೆಟ್‌ ದಿಗ್ಗಜರ ಕುತೂಹಲಕಾರಿ ಟೂರ್ನಿ: ಸಂಪೂರ್ಣ ಮಾಹಿತಿ

Road Safety World Series 2020: Schedule, squads, full detail

ಮುಂಬೈ, ಮಾರ್ಚ್ 5: ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್‌ ಸಿಂಗ್, ಬ್ರಿಯಾನ್ ಲಾರಾ ಇಂಥವರ ಬ್ಯಾಟಿಂಗ್, ಬ್ರೇಟ್‌ ಲೀ, ಮುತ್ತಯ್ಯ ಮುರಳೀಧರನ್, ಅಲ್ಬಿ ಮಾರ್ಕೆಲ್ ಇವರ ಬೌಲಿಂಗ್, ಜಾಂಟಿ ರೋಡ್ಸ್, ಮೊಹಮ್ಮದ್ ಕೈಫ್‌ನಂತವರ ಫೀಲ್ಡಿಂಗ್ ನೋಡಿ ಎಷ್ಟು ದಿನಗಳಾಗಿಲ್ಲ ಹೇಳಿ? ಈ ಎಲ್ಲ ಕ್ರಿಕೆಟ್‌ ದಿಗ್ಗಜರ ಆಟ ನೋಡುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ಒದಗಿ ಬಂದಿದೆ.

ಎಬಿ ಡಿವಿಲಿಯರ್ಸ್‌ಗೆ ದ.ಆಫ್ರಿಕಾ ಕೋಚ್ ಬೌಷರ್ ಕೊಟ್ರು ಡೆಡ್‌ಲೈನ್ !ಎಬಿ ಡಿವಿಲಿಯರ್ಸ್‌ಗೆ ದ.ಆಫ್ರಿಕಾ ಕೋಚ್ ಬೌಷರ್ ಕೊಟ್ರು ಡೆಡ್‌ಲೈನ್ !

ಕ್ರಿಕೆಟ್‌ ಲೋಕದಲ್ಲಿ ಸಾಟಿಯಿಲ್ಲದ ಮನರಂಜನೆ ನೀಡಿದ್ದ ವಿಶ್ವ ಶ್ರೇಷ್ಠ ಕ್ರಿಕೆಟಿಗರು ಮತ್ತೆ ಮೈದಾನಕ್ಕಿಳಿಯುವುದರಲ್ಲಿದ್ದಾರೆ. ವಿಶ್ವದ ಬಲಿಷ್ಠ ಕ್ರಿಕೆಟ್‌ ತಂಡಗಳೆನಿಸಿರುವ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳು ಇಂಥದ್ದೊಂದು ಅಪರೂಪದ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಬಿಸಿಸಿಐ ಆಯ್ಕೆ ಸಮಿತಿ: ಐವರು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇಳಿದ್ದು ಈ ಒಂದು ಪ್ರಶ್ನೆಯನ್ನುಬಿಸಿಸಿಐ ಆಯ್ಕೆ ಸಮಿತಿ: ಐವರು ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಕೇಳಿದ್ದು ಈ ಒಂದು ಪ್ರಶ್ನೆಯನ್ನು

ಕೆಲವಾರು ವರ್ಷಗಳ ಹಿಂದೆ ನಮ್ಮೆಲ್ಲರನ್ನು ರಂಜಿಸಿದ್ದ, ಈಗ ಮಾಜಿ ಕ್ರಿಕೆಟಿಗರಾಗಿ ಮೈದಾನದಿಂದ ಹೊರಗಿರುವ ನೆಚ್ಚಿನ ಕ್ರಿಕೆಟಿಗರೆಲ್ಲ 'ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ 2020' ಟೂರ್ನಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಈ ಟೂರ್ನಿ ಭಾರತದಲ್ಲೇ ನಡೆಯುತ್ತಿದೆ ಅನ್ನೋದು ವಿಶೇಷ.

ಟೂರ್ನಿಯ ಆರಂಭ, ಅಂತ್ಯ

ಟೂರ್ನಿಯ ಆರಂಭ, ಅಂತ್ಯ

ಕ್ರಿಕೆಟ್‌ ದಿಗ್ಗಜರು ಕಾದಾಡಲಿರುವ ಈ ಅಪರೂಪದ 'ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ 2020' ಟೂರ್ನಿ ಭಾರತದ ಮುಂಬೈಯಲ್ಲಿ ಆರಂಭಗೊಳ್ಳಲಿದೆ. ಪಂದ್ಯಾಟವು ಒಟ್ಟಿಗೆ 11 ಪಂದ್ಯಗಳನ್ನು ಒಳಗೊಂಡರಲಿದೆ. ಮಾರ್ಚ್ 7ರಂದು ಆರಂಭಗೊಳ್ಳುವ ಟೂರ್ನಿ, ಮಾರ್ಚ್ 22ರಂದು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

ತಂಡಗಳು, ಪಂದ್ಯದ ಸಮಯ

ತಂಡಗಳು, ಪಂದ್ಯದ ಸಮಯ

ಇಂಡಿಯಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ಸೌತ್‌ ಆಫ್ರಿಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಹೀಗೆ ಒಟ್ಟು 5 ತಂಡಗಳು ಪ್ರಶಸ್ತಿ ಸುತ್ತಿಗಾಗಿ ಪರಸ್ಪರ ಸೆಣಸಾಡಲಿವೆ. ಟೂರ್ನಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ 7 pmಗೆ ಆರಂಭಗೊಳ್ಳಲಿವೆ. ಫೈನಲ್‌ ಪಂದ್ಯವೊಂದನ್ನು ಬಿಟ್ಟು ಉಳಿದೆಲ್ಲಾ ಪಂದ್ಯಗಳು ಭಾರತ ಪೂಣೆ, ನವಿ ಮುಂಬೈ ಮತ್ತು ಮುಂಬೈ ತಾಣಗಳಲ್ಲಿ ನಡೆಯಲಿದೆ.

ಎಲ್ಲಾ 5 ತಂಡಗಳ ಆಟಗಾರರು

ಎಲ್ಲಾ 5 ತಂಡಗಳ ಆಟಗಾರರು

* ಇಂಡಿಯಾ ಲೆಜೆಂಡ್ಸ್: ಸಚಿನ್ ತೆಂಡೂಲ್ಕರ್ (ಕ್ಯಾಪ್ಟನ್), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಮುನಾಫ್ ಪಟೇಲ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ಸಾಯಿರಾಜ್ ಬಹುತುಲೆ, ಅಬೆ ಕುರುವಿಲ್ಲಾ, ಜಹೀರ್ ಖಾನ್, ಇರ್ಫಾನ್ ಪಠಾನ್, ಸಮೀರ್ ದಿಘೆ.
* ಸೌತ್ ಆಫ್ರಿಕಾ ಲೆಜೆಂಡ್ಸ್: ಜಾಂಟಿ ರೋಡ್ಸ್ (ಕ್ಯಾಪ್ಟನ್), ಹರ್ಷಲ್ ಗಿಬ್ಸ್, ಗಾರ್ನೆಟ್ ಕ್ರುಗರ್, ಜಾಕ್ವೆಸ್ ರುಡಾಲ್ಫ್, ಆಂಡ್ರ್ಯೂ ಹಾಲ್, ಆಲ್ಬಿ ಮೊರ್ಕೆಲ್, ಜೋಹಾನ್ ವ್ಯಾನ್ ಡೆರ್ ವಾತ್, ಲ್ಯಾನ್ಸ್ ಕ್ಲುಸೆನರ್, ಮಾರ್ಟಿನ್ ವ್ಯಾನ್ ಜಾರ್ಸ್ವೆಲ್ಡ್, ಮೊರ್ನೆ ವ್ಯಾನ್ ವೈಕ್, ಪಾಲ್ ಹ್ಯಾರಿಸ್, ರೋಜರ್ ಟೆಲಿಮಾಚಸ್, ರಿಯಾನ್ ಮೆಕ್ಲಾರೆನ್.
* ಆಸ್ಟ್ರೇಲಿಯಾ ಲೆಜೆಂಡ್ಸ್: ಬ್ರೆಟ್ ಲೀ (ಕ್ಯಾಪ್ಟನ್), ಬ್ರೆಟ್ ಗೀವ್ಸ್, ಜೇಸನ್ ಕ್ರೆಜ್ಜಾ, ಮಾರ್ಕ್ ಕಾಸ್ಗ್ರೋವ್, ನಾಥನ್ ರಿಯರ್ಡನ್, ಶೇನ್ ಲೀ, ಟ್ರಾವಿಸ್ ಬರ್ಟ್, ಬೆನ್ ಲಾಫ್ಲಿನ್, ಬ್ರಾಡ್ ಹಾಡ್ಜ್, ಕ್ಲಿಂಟ್ ಮೆಕೆ, ಕ್ಸೇವಿಯರ್ ಡೊಹೆರ್ಟಿ.
* ವೆಸ್ಟ್ ಇಂಡೀಸ್ ಲೆಜೆಂಡ್ಸ್: ಬ್ರಿಯಾನ್ ಲಾರಾ (ಕ್ಯಾಪ್ಟನ್), ಆ್ಯಡಮ್ ಸ್ಯಾನ್‌ಫೋರ್ಡ್, ಕಾರ್ಲ್ ಹೂಪರ್, ಡ್ಯಾರೆನ್ ಗಂಗಾ, ಶಿವನರಿನ್ ಚಂದರ್‌ಪಾಲ್, ರಿಕಾರ್ಡೊ ಪೊವೆಲ್, ರಿಡ್ಲೆ ಜೇಕಬ್ಸ್, ಸ್ಯಾಮ್ಯುಯೆಲ್ ಬದ್ರಿ, ಸುಲೈಮಾನ್ ಬೆನ್, ಟಿನೋ ಬೆಸ್ಟ್, ದಿನನಾಥ್ ರಾಮ್‌ನರಿನ್, ಪೆಡ್ರೊ ಕಾಲಿನ್ಸ್, ಡಾಂಜಾ ಹಯಾಟ್.
* ಶ್ರೀಲಂಕಾ ಲೆಜೆಂಡ್ಸ್: ತಿಲಕರತ್ನೆ ದಿಲ್ಶನ್ (ಕ್ಯಾಪ್ಟನ್), ಚಮಿಂದ ವಾಸ್, ಫರ್ವೀಜ್ ಮಹರೂಫ್, ಮಾರ್ವನ್ ಅತಪಟ್ಟು, ಮುತ್ತಯ್ಯ ಮುರಳೀಧರನ್, ರಂಗನಾ ಹೆರಾತ್, ರೋಮೇಶ್ ಕಲುವಿತರಾನ, ಸಚಿತ್ರ ಸೇನನಾಯಕ, ಚಮರ ಕಪುಗೇಡರ, ತಿಲನ್ ತುಶಾರ, ಉಪುಲ್ ಚಂದನ, ಮಲಿಂಡಾ ವರ್ಣಪುರ.

ಪಂದ್ಯಗಳ ವೇಳಾಪಟ್ಟಿ

ಪಂದ್ಯಗಳ ವೇಳಾಪಟ್ಟಿ

* ಮಾರ್ಚ್ 7, ಇಂಡಿಯಾ ಲೆಜೆಂಡ್ಸ್ vs ವೆಸ್ಟ್ ಇಂಡೀಸ್ ಲೆಜೆಂಡ್ಸ್, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 8, ಆಸ್ಟ್ರೇಲಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 10, ಇಂಡಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್, ನವೀ ಮುಂಬಯಿಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ -ಸಂಜೆ 7 ಗಂಟೆಗೆ
* ಮಾರ್ಚ್ 11, ವೆಸ್ಟ್ ಇಂಡೀಸ್ ಲೆಜೆಂಡ್ಸ್ ವರ್ಸಸ್ ಸೌತ್ ಆಫ್ರಿಕಾ ಲೆಜೆಂಡ್ಸ್ ಡಿವೈ ಪಾಟೀಲ್ ಕ್ರೀಡಾಂಗಣ, ನವೀ ಮುಂಬಯಿಯಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 13, ದಕ್ಷಿಣ ಆಫ್ರಿಕಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್, ನವ ಮುಂಬಯಿಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 14, ಇಂಡಿಯಾ ಲೆಜೆಂಡ್ಸ್ vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಕ್ರೀಡಾಂಗಣದಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 16, ಆಸ್ಟ್ರೇಲಿಯಾದ ಲೆಜೆಂಡ್ಸ್ vs ವೆಸ್ಟ್ ಇಂಡೀಸ್ ಲೆಜೆಂಡ್ಸ್ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ- ಸಂಜೆ 7 ಗಂಟೆಗೆ
* ಮಾರ್ಚ್ 17, ವೆಸ್ಟ್ ಇಂಡೀಸ್ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 19, ಆಸ್ಟ್ರೇಲಿಯಾ ಲೆಜೆಂಡ್ಸ್ vs ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ನವೀ ಮುಂಬಯಿಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 20, ಇಂಡಿಯಾದ ಲೆಜೆಂಡ್ಸ್ vs ಆಸ್ಟ್ರೇಲಿಯಾ ಲೆಜೆಂಡ್ಸ್ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ - ಸಂಜೆ 7 ಗಂಟೆಗೆ
* ಮಾರ್ಚ್ 22, ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಫೈನಲ್ -7 ಗಂಟೆಗೆ.

Story first published: Sunday, May 3, 2020, 10:52 [IST]
Other articles published on May 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X