ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಅಂಗಳಕ್ಕಿಳಿಯಲಿದ್ದಾರೆ ಕ್ರಿಕೆಟ್ ದಿಗ್ಗಜರು, ಯಾವುದೀ ಟೂರ್ನಿ?!

Road Safety World Series 2020: Schedule, Teams & Players List, Timings

ಮುಂಬೈ, ಸೆಪ್ಟೆಂಬರ್ 14: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ 'ಇಂಡಿಯಾ ಲೆಜೆಂಡ್ಸ್', ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರ 'ವೆಸ್ಟ್ ಇಂಡೀಸ್ ಲೆಜೆಂಡ್ಸ್' ತಂಡ, ಅನ್‌ಅಕಾಡೆಮಿ ರೋಡ್‌ ಸೇಫ್ಟಿ ವರ್ಲ್ಡ್‌ ಸೀರೀಸ್ ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿವೆ. ಈ ಪಂದ್ಯ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಮಾರ್ಚ್ 7ರಂದು ನಡೆಯಲಿದೆ.

ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!

ವಿಶ್ವದ ಪ್ರಮುಖ ತಂಡಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿಯ ಫೈನಲ್ ಪಂದ್ಯ ಮುಂಬೈಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮಾರ್ಚ್ 22ರಂದು ನಡೆಯಲಿದೆ. ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಹೀಗೆ ಒಟ್ಟು 5 ತಂಡಗಳು ಪಾಲ್ಗೊಳ್ಳುತ್ತಿವೆ.

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್

ಯಾರೆಲ್ಲಾ ಆಡುತ್ತಿದ್ದಾರೆ?
ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಝಹೀರ್ ಖಾನ್, ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್), ಶಿವ್‌ನರೀನ್ ಚಂದ್ರಪೌಲ್ (ವೆಸ್ಟ್ ಇಂಡೀಸ್), ಬ್ರೆಟ್‌ ಲೀ (ಆಸ್ಟ್ರೇಲಿಯಾ), ಬ್ರಾಡ್‌ ಹಾಜ್ (ಆಸ್ಟ್ರೇಲಿಯಾ), ಜಾಂಟಿ ರೋಡ್ಸ್ (ದಕ್ಷಿಣ ಆಫ್ರಿಕಾ), ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ), ದಿಲಕರತ್ನೆ ದಿಲ್ಶನ್ (ಶ್ರೀಲಂಕಾ), ಅಜಂತ ಮೆಂಡಿಸ್ (ಶ್ರೀಲಂಕಾ) ಇನ್ನಿತರ ಪ್ರಮುಖರು ಟೂರ್ನಿಯಲ್ಲಿ ಇರಲಿದ್ದಾರೆ.

Road Safety World Series 2020: Schedule, Teams & Players List, Timings

ಪಂದ್ಯದ ಸಮಯ, ಪ್ರಸಾರ
ಟೂರ್ನಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ 7:00 PMಗೆ ಆರಂಭವಾಗಲಿದೆ. ಕಲರ್ಸ್ ಸಿನಿಪ್ಲೆಕ್ಸ್, ಕಲರ್ಸ್ ಕನ್ನಡ ಸಿನೆಮಾ, ವೂಟ್‌ ಮತ್ತು ಜಿಯೋ ಟಿವಿಯಲ್ಲಿ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ. ಪಂದ್ಯವನ್ನು ಮೈದಾನದಲ್ಲೇ ವೀಕ್ಷಿಸುವವರಿಗೆ ಬುಕ್‌ಮೈ ಶೋ ನಲ್ಲಿ ಫೆಬ್ರವರಿ 14ರಿಂದ ಟಿಕೆಟ್‌ಗಳು ಲಭ್ಯವಿದೆ. ಟಿಕೆಟ್ ಬೆಲೆ 50-500 ರೂ. ವರೆಗಿರಲಿದೆ.

Story first published: Friday, February 14, 2020, 18:55 [IST]
Other articles published on Feb 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X