ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ಭಾರತ ಲೆಜೆಂಡ್ಸ್‌ ವಿರುದ್ಧ ಪೀಟರ್ಸನ್ ಮಿಂಚಿನ ಆಟ

Road Safety World Series, India Legends vs England Legends match 9

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಲ್ಲಿ ಇಂದು ಇಂಡಿಯಾ ಲೆಜೆಂಡ್ಸ್ ಹಾಗೂ ಇಂಗ್ಲೆಂಡ್ ಲೆಜೆಂಡ್ಸ್ ನಡುವೆ ಭರ್ಜರಿ ಹೋರಾಟ ನಡೆಯುತ್ತಿದೆ. ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ಮೊದಲ ಓವರ್‌ನಿಂದಲೇ ಸ್ಪೋಟಕ ಆಟವನ್ನು ಪ್ರದರ್ಶಿಸುತ್ತಿದ್ದು ವೇಗವಾಗಿ ಅರ್ಧಶತಕವನ್ನು ಬಾರಿಸಿದ್ದಾರೆ.

ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಇದರಲ್ಲಿ ಭಾರತ ತಂಡಕ್ಕೆ ದೊಡ್ಡ ಯಶಸ್ಸು ದೊರೆಯಲಿಲ್ಲ. ಆರಂಭಿಕ ಆಟಗಾರ ಫಿಲ್ ಮಸ್ಟರ್ಡ್ ಅವರನ್ನು ಅಗ್ಗಕ್ಕೆ ಕಬಳಿಸುವಲ್ಲಿ ಯಶಸ್ವಿಯಾದರೂ ನಾಯಕ ಪೀಟರ್ಸನ್ ಆಟದ ಮುಂದೆ ಇದು ಇಂಡಿಯಾ ಲೆಜೆಂಡ್ಸ್‌ಗೆ ಲಾಭವನ್ನು ತಂದುಕೊಡಲಿಲ್ಲ. 37 ಎಸೆತಗಳನ್ನು ಎದುರಿಸಿದ ಕೆವಿನ್ ಪೀಟರ್ಸನ್ 75 ರನ್‌ಗಳಿಸಿ ಇರ್ಫಾನ್ ಪಠಾಣ್‌ಗೆ ವಿಕೆಟ್ ಒಪ್ಪಿಸಿದರು.

ಆದರೆ ಕೆವಿನ್ ಪೀಟರ್‌ಸನ್ ವಿಕೆಟ್ ಪಡೆದುಕೊಂಡ ನಂತರ ಭಾರತ ಲೆಜೆಂಡ್ಸ್ ತಂಡ ಕೆಲ ಯಶಸ್ಸನ್ನು ಪಡೆದುಕೊಂಡಿತು.

ಇಂಡಿಯಾ ಲೆಜೆಂಡ್ಸ್ ಆಡುವ ಬಳಗ:
ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್ ಬದ್ರಿನಾಥ್, ನಮನ್ ಓಜಾ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್, ಮನ್‌ಪ್ರೀತ್ ಗೋನಿ, ಪ್ರಜ್ಞಾನ್ ಓಜಾ, ಮುನಾಫ್ ಪಟೇಲ್
ಇಂಗ್ಲೆಂಡ್ ಲೆಜೆಂಡ್ಸ್ ಆಡುವ ಬಳಗ:

ಫಿಲ್ ಮಸ್ಟರ್ಡ್ (ವಿಕೆಟ್ ಕೀಪರ್), ಕೆವಿನ್ ಪೀಟರ್ಸನ್ (ನಾಯಕ), ಡ್ಯಾರೆನ್ ಮ್ಯಾಡಿ, ಕ್ರಿಸ್ ಸ್ಕೋಫೀಲ್ಡ್, ಗೇವಿನ್ ಹ್ಯಾಮಿಲ್ಟನ್, ಕಬೀರ್ ಅಲಿ, ಜೇಮ್ಸ್ ಟ್ರೆಡ್‌ವೆಲ್, ಕ್ರಿಸ್ ಟ್ರೆಮ್‌ಲೆಟ್, ರಿಯಾನ್ ಜೇ ಸೈಡ್‌ಬಾಟಮ್, ಮಾಂಟಿ ಪನೇಸರ್, ಮ್ಯಾಥ್ಯೂ ಹೊಗಾರ್ಡ್

Story first published: Tuesday, March 9, 2021, 20:21 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X