ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸನತ್ ಜಯಸೂರ್ಯರ ಬೆರಗು ಮೂಡಿಸುವ ಸ್ಫೂರ್ತಿಯ ಕತೆಯಿದು!

Road Safety World Series: Sanath Jayasuriya after 2 knee operations & a heart surgery, plays again at the age of 51 after 9 years

ರಾಯ್‌ಪುರ್: ಕ್ರಿಕೆಟ್ ಪ್ರೇಮಿಗಳಿಗೆಲ್ಲ ಸನತ್ ಜಯಸೂರ್ಯ ಅನ್ನೋ ಶ್ರೀಲಂಕಾ ಕ್ರಿಕೆಟ್ ದಿಗ್ಗಜನ ಬಗ್ಗೆ ಗೊತ್ತೇಯಿದೆ. ಇತ್ತೀಚೆಗಷ್ಟೇ ಭಾರತದ ರಾಯ್‌ಪುರ್‌ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಟೂರ್ನಿಯಲ್ಲಿ ಜಯಸೂರ್ಯ ನಮ್ಮೆಲ್ಲರನ್ನು ರಂಜಿಸಿದ್ದರು. 51ರ ಹರೆಯದ ಜಯಸೂರ್ಯ ಕ್ರಿಕೆಟ್ ಪ್ರಿಯರನ್ನು ರಂಜಿಸಿದ್ದಷ್ಟೇ ಅಲ್ಲ, ಅವರ ಹಿಂದೊಂದು ಬೆರಗಿನ, ಸ್ಫೂರ್ತಿಯ ಕತೆಯಿದೆ ಅನ್ನೋದು ಗೊತ್ತಾ?!

ಭಾರತ vs ಇಂಗ್ಲೆಂಡ್‌: ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆಭಾರತ vs ಇಂಗ್ಲೆಂಡ್‌: ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ

ಭಾನುವಾರ (ಮಾರ್ಚ್ 21) ಮುಕ್ತಾಯಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ ಮತ್ತು ಶ್ರೀಲಂಕಾ ಲೆಜೆಂಡ್ಸ್‌ ಕಾದಾಡಿದ್ದವು. ಕೊನೇಯ ಸಾರಿ ನಮಗೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ತಿಲಕರತ್ನೆ ದಿಲ್ಶನ್ ಮೊದಲಾದ ದಂತಕತೆಗಳ ಆಟ ನೋಡಲು ಸಾಧ್ಯವಾಗಿತ್ತು. ಪ್ರಶಸ್ತಿ ಸುತ್ತಿನಲ್ಲಿ ಜಯಸೂರ್ಯ ಕೂಡ ರಂಜಿಸಿದ್ದರು.

ಜಯಸೂರ್ಯ ಆಕರ್ಷಕ ಬ್ಯಾಟಿಂಗ್

ಜಯಸೂರ್ಯ ಆಕರ್ಷಕ ಬ್ಯಾಟಿಂಗ್

ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್‌ ಪರ ಆರಂಭಿಕರಾಗಿ ಬಂದಿದ್ದ ಸನತ್ ಜಯಸೂರ್ಯ 35 ಎಸೆತಗಳಿಗೆ 43 ರನ್ ಸೇರಿಸಿದ್ದರು. ಇದರಲ್ಲಿ 5 ಫೋರ್, 1 ಸಿಕ್ಸರ್ ಕೂಡ ಸೇರಿತ್ತು. ಆರಂಭಿಕ ಇನ್ನಿಂಗ್ಸ್‌ ಆಡಿದ್ದ ಇಂಡಿಯಾ ಲೆಜೆಂಡ್ಸ್‌ ಸವಾಲಿನ ಗುರಿ ನೀಡಿದ್ದರಿಂದ ಫೈನಲ್‌ನಲ್ಲಿ ಲಂಕಾ ಲೆಜೆಂಡ್ಸ್‌ 14 ರನ್‌ಗಳ ಸೋಲನುಭವಿಸಿತ್ತು.

ಲಂಕಾ ದಿಗ್ಗಜನ ಸ್ಫೂರ್ತಿಯ ಕತೆ

ಈಗ 51ರ ವಯಸ್ಸಿನವರಾದ ಸನತ್ ಜಯಸೂರ್ಯ ಎರಡು ಬಾರಿ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಲ್ಲದೆ ಒಂದು ಬಾರಿ ಹೃದಯದ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಅಷ್ಟಾಗಿಯೂ ಜನಸೂರ್ಯ ಅವರಿಗೆ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ನೋಡಿ. ಕ್ರಿಕೆಟ್ ಬ್ಯಾಟು, ಕೇಕೆ ಹಾಕುವ ಅಭಿಮಾನಿಗಳ ಮೇಲಿನ ಪ್ರೀತಿಗಾಗಿ ಜಯಸೂರ್ಯ ಮತ್ತೆ ಬ್ಯಾಟ್ ಬೀಸಿದರು. ನಮ್ಮೆಲ್ಲರನ್ನು ರಂಜಿಸಿ ಕಳೆದ ಆ ಬಂಗಾರದ ಕ್ರಿಕೆಟ್ ದಿನಗಳನ್ನು ಕಣ್ಣಮುಂದೆ ತಂದಿದ್ದರು.

ಸನತ್ ದಾಖಲೆ/ಪಂದ್ಯದ ಸ್ಕೋರ್‌ಕಾರ್ಡ್

ಸನತ್ ದಾಖಲೆ/ಪಂದ್ಯದ ಸ್ಕೋರ್‌ಕಾರ್ಡ್

ಸನತ್ ಜಯಸೂರ್ಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಈಗಲೂ ಕೆಲವು ದಾಖಲೆಗಳು ಮುರಿಯಲಾಗಿಲ್ಲ. 110 ಟೆಸ್ಟ್‌ ಪಂದ್ಯಗಳನ್ನಾಡಿರುವ ಸನತ್ 6973 ರನ್, 98 ವಿಕೆಟ್, 445 ಏಕದಿನ ಪಂದ್ಯಗಳಲ್ಲಿ 13430 ರನ್, 323 ವಿಕೆಟ್, 31 ಟಿ20ಐ ಪಂದ್ಯಗಳಲ್ಲಿ 629 ರನ್, 19 ವಿಕೆಟ್ ದಾಖಲೆ ಹೊಂದಿದ್ದಾರೆ.
* ಸಂಕ್ಷಿಪ್ತ ಸ್ಕೋರ್‌ಕಾರ್ಡ್: ಇಂಡಿಯಾ ಲೆಜೆಂಡ್ಸ್‌- 181-4 (20 Ov), ಶ್ರೀಲಂಕಾ ಲೆಜೆಂಡ್ಸ್-167-7 (20 Ov)

Story first published: Monday, March 22, 2021, 20:07 [IST]
Other articles published on Mar 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X