ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಓವರ್‌ನಲ್ಲಿ ಹೆಚ್ಚು ರನ್: ನನ್ನ ದಾಖಲೆ ಕಳೆದುಕೊಂಡದ್ದಕ್ಕೆ ಬೇಜಾರು ಎಂದು ಬ್ರಾಡ್ ಕಾಲೆಳೆದ ಪೀಟರ್ಸನ್

Robin Peterson pulled Stuart Broads leg for conceded 35 runs in an over in 5th test against India
ಟೀಂ ಇಂಡಿಯಾ ನಾಯಕನಾಗಿದ್ದಕ್ಕೆ ರನ್ ಹೊಳೆ ಹರಿಸಿದ ಬುಮ್ರಾ | OneIndia Kannada

ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ನಿನ್ನೆ ( ಜುಲೈ 1 ) ಆರಂಭವಾದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿ ನಂತರ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಉತ್ತಮ ಆಟದ ನೆರವಿನಿಂದ ಸುಧಾರಿಸಿಕೊಂಡಿತು. ಪಂತ್ ಮತ್ತು ಜಡೇಜಾ ಇಬ್ಬರು ಶತಕ ಬಾರಿಸಿದರೆ, ಟೀಮ್ ಇಂಡಿಯಾದ ನಾಯಕ ಜಸ್ ಪ್ರೀತ್ ಬುಮ್ರಾ ಅಂತಿಮ ಹಂತದಲ್ಲಿ ಅಬ್ಬರಿಸಿ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ವಿಶ್ವದಾಖಲೆಯನ್ನು ನಿರ್ಮಿಸಿದರು.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

ಹೌದು, ಹತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದ ಜಸ್ಪ್ರೀತ್ ಬುಮ್ರಾ 16 ಎಸೆತಗಳಲ್ಲಿ ಅಜೇಯ 31 ರನ್ ಕಲೆ ಹಾಕಿದರು. ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಇನ್ನಿಂಗ್ಸ್‌ನ 84ನೇ ಓವರ್ ಎಸೆದಾಗ ಜಸ್ಪ್ರೀತ್ ಬುಮ್ರಾ ಸ್ಟ್ರೈಕ್‌ನಲ್ಲಿದ್ದರು. ಈ ಓವರ್‌ನಲ್ಲಿ 4, 5 ( ವೈಡ್ ಫೋರ್), 6 ( ನೋಬಾಲ್ ), 4, 4, 4, 6 ಮತ್ತು 1 ರನ್ ಹೀಗೆ ಒಟ್ಟು 35 ರನ್ ಹರಿದುಬಂತು. ಪರಿಣಾಮ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ದಾಖಲಾದ ವಿಶ್ವ ದಾಖಲೆ ನಿರ್ಮಾಣವಾಯಿತು.

ಪಂತ್ vs ಧೋನಿ, ಸಂಗಕ್ಕಾರ, ಗಿಲ್‌ಕ್ರಿಸ್ಟ್: 31 ಟೆಸ್ಟ್ ನಂತರ ಹೆಚ್ಚು ರನ್ ಮತ್ತು ಶತಕ ಸಿಡಿಸಿದ ಕೀಪರ್ ಯಾರು?ಪಂತ್ vs ಧೋನಿ, ಸಂಗಕ್ಕಾರ, ಗಿಲ್‌ಕ್ರಿಸ್ಟ್: 31 ಟೆಸ್ಟ್ ನಂತರ ಹೆಚ್ಚು ರನ್ ಮತ್ತು ಶತಕ ಸಿಡಿಸಿದ ಕೀಪರ್ ಯಾರು?

ಹೀಗೆ ಈ ವಿಶ್ವದಾಖಲೆಯ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದು, ಕೆಲವರು ಜಸ್ಪ್ರೀತ್ ಬುಮ್ರಾಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಸ್ಟುವರ್ಟ್ ಬ್ರಾಡ್ ಅವರನ್ನು ಕಾಲೆಳೆದು ಟ್ರೋಲ್ ಮಾಡುತ್ತಿದ್ದಾರೆ. ಈ ಕುರಿತಾಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ರಾಬಿನ್ ಜಾನ್ ಪೀಟರ್ಸನ್ ಕೂಡ ಟ್ವೀಟ್ ಮಾಡಿದ್ದು, ತಮ್ಮ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಮುರಿದ ಸ್ಟುವರ್ಟ ಬ್ರಾಡ್ ಅವರ ಕಾಲನ್ನು ಈ ಕೆಳಕಂಡಂತೆ ಎಳೆದಿದ್ದಾರೆ.

ನನ್ನ ದಾಖಲೆ ಮುರಿದದ್ದಕ್ಕೆ ದುಃಖವಾಗುತ್ತಿದೆ ಎಂದು ಕಾಲೆಳೆದ ಪೀಟರ್ಸನ್

ಈ ಹಿಂದೆ 2003ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬ್ರಿಯಾನ್ ಲಾರಾಗೆ ಬೌಲಿಂಗ್ ಮಾಡಿ ಓವರ್ ಒಂದರಲ್ಲಿ 28 ರನ್ ನೀಡಿ ಟೆಸ್ಟ್ ಕ್ರಿಕೆಟ್ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕೆಟ್ಟ ದಾಖಲೆಯನ್ನು ಬರೆದಿದ್ದ ದಕ್ಷಿಣ ಆಫ್ರಿಕಾದ ರಾಬಿನ್ ಪೀಟರ್ಸನ್ ಇದೀಗ ತಮ್ಮ ಆ ದಾಖಲೆಯನ್ನು ಮುರಿದು ಹಾಕಿರುವ ಬ್ರಾಡ್ ಅವರ ಕಾಲನ್ನು ಟ್ವೀಟ್ ಮಾಡುವ ಮೂಲಕ ಎಳೆದಿದ್ದಾರೆ. ಇಂದು ನನ್ನ ದಾಖಲೆಯನ್ನು ಕಳೆದುಕೊಂಡದ್ದಕ್ಕೆ ದುಃಖವಾಗುತ್ತಿದೆ, ಇರಲಿ ದಾಖಲೆಗಳು ಇರುವುದೇ ಮುರಿಯುವುದಕ್ಕಾಗಿ ಎಂದು ಬರೆದುಕೊಂಡಿರುವ ಪೀಟರ್ಸನ್ ಬ್ರಾಡ್ ಅವರನ್ನು ರೇಗಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿರುವ ಬ್ಯಾಟ್ಸ್‌ಮನ್‌ಗಳು ಮತ್ತು ರನ್ ಬಿಟ್ಟುಕೊಟ್ಟ ಬೌಲರ್‌ಗಳ ಟಾಪ್ 5 ಪಟ್ಟಿ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿರುವ ಬ್ಯಾಟ್ಸ್‌ಮನ್‌ಗಳು ಮತ್ತು ರನ್ ಬಿಟ್ಟುಕೊಟ್ಟ ಬೌಲರ್‌ಗಳ ಟಾಪ್ 5 ಪಟ್ಟಿ

1. ಜಸ್ ಪ್ರೀತ್ ಬೂಮ್ರಾ: ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 35 ರನ್ - 2022. ರನ್ ವಿವರ: 4, 4 ( ವೈಡ್), 6(ನೋ ಬಾಲ್), 4, 4, 4, 6 ಮತ್ತು 1 ರನ್

2. ಬ್ರಿಯಾನ್ ಲಾರಾ: ದಕ್ಷಿಣ ಆಫ್ರಿಕಾದ ರಾಬಿನ್ ಪೀಟರ್ಸನ್ ಓವರ್‌ನಲ್ಲಿ 28 ರನ್ - 2003. ರನ್ ವಿವರ: 4,6,6,4,4,4

3. ಆಸ್ಟ್ರೇಲಿಯಾದ ಜಾರ್ಜ್ ಬೇಲಿ: ಇಂಗ್ಲೆಂಡ್ ತಂಡದ ಜೇಮ್ಸ್ ಆ್ಯಂಡರ್ಸನ್ ಓವರ್‌ನಲ್ಲಿ 28 ರನ್ - 2013. ರನ್ ವಿವರ: 4,6,2,4,6,6

4. ದಕ್ಷಿಣ ಆಫ್ರಿಕಾದ ಕೇಶವ್ ಮಹರಾಜ್: ಇಂಗ್ಲೆಂಡ್ ಆಟಗಾರ ಜೋ ರೂಟ್ ಓವರ್‌ನಲ್ಲಿ 28 ರನ್ - 2019. ರನ್ ವಿವರ: 4,4,4,6,6 ಮತ್ತು ಬೈಸ್ 4

5. ಪಾಕಿಸ್ತಾನದ ಶಾಹಿದ್ ಅಫ್ರಿದಿ: ಟೀಮ್ ಇಂಡಿಯಾದ ಹರ್ಭಜನ್ ಸಿಂಗ್ ಓವರ್‌ನಲ್ಲಿ 27 ರನ್ - 2005. ರನ್ ವಿವರ: 6,6,6,6,2,1

6 ಎಕ್ಸ್‌ಟ್ರಾ ರನ್ ಬಿಟ್ಟುಕೊಟ್ಟ ಸ್ಟುವರ್ಟ್ ಬ್ರಾಡ್

6 ಎಕ್ಸ್‌ಟ್ರಾ ರನ್ ಬಿಟ್ಟುಕೊಟ್ಟ ಸ್ಟುವರ್ಟ್ ಬ್ರಾಡ್

ಇನ್ನು ಸ್ಟುವರ್ಟ್ ಬ್ರಾಡ್ ಓವರ್ ಒಂದರಲ್ಲಿ 35 ರನ್ ನೀಡಿದ್ದು, ಆ ಪೈಕಿ 5 ರನ್ ವೈಡ್ ಫೋರ್ ಹಾಗೂ 1 ರನ್ ನೋಬಾಲ್ ಎಸೆತದಿಂದ ಬಂದಿದೆ. ಈ ಮೂಲಕ 6 ಎಕ್ಸ್‌ಟ್ರಾ ರನ್‌ಗಳನ್ನು ಬಿಟ್ಟುಕೊಟ್ಟ ಸ್ಟುವರ್ಟ್ ಬ್ರಾಡ್ ಮತ್ತಷ್ಟು ದುಬಾರಿಯಾದರು.

Story first published: Saturday, July 2, 2022, 22:27 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X