ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದು ತಪ್ಪು ನಿರ್ಧಾರ ಕ್ರಿಕೆಟ್ ಕೆರಿಯರ್‌ಗೆ ಕಂಟಕವಾಯಿತು: ರಾಬಿನ್ ಉತ್ತಪ್ಪ

Robin Uthappa Regrets Altering Technique To Suit Test Cricket At Wrong Age

ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಆರಂಭದ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿದ್ದ ಆಟಗಾರ. ಏಕದಿನ ಮತ್ತು ಟಿ20ಗೆ ಹೇಳಿ ಮಾಡಿಸಿದಂತಿದ್ದ ಈ ಆಟಗಾರ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದರು.

ಆದರೆ ಕೆಲ ಸಮಯಗಳ ನಂತರ ಉತ್ತಪ್ಪ ಪ್ರದರ್ಶನ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿತ್ತು. ಪರಿಣಾಮ ಟೀಮ್ ಇಂಡಿಯಾದಿಂದ ಉತ್ತಪ್ಪ ಹೊರಬಿದ್ದಿದ್ದರು. ಏರುಗತಿಯಲ್ಲಿ ಸಾಗುತ್ತಿದ್ದ ಉತ್ತಪ್ಪ ಕ್ರಿಕೆಟ್ ಬದುಕು ಕುಸಿಯಲು ಆರಂಭಿಸಿತ್ತು. ಈ ಬಗ್ಗೆ ಸ್ವತಃ ರಾಬಿನ್ ಉತ್ತಪ್ಪ ಪ್ರತಿಕ್ರಿಯಿಸಿದ್ದಾರೆ. ಟೀಮ್ ಇಂಡಿಯಾದಿಂದ ಹೊರಬೀಳಲು ಕಾರಣವಾದ ಒಂದು ಅಂಶವನ್ನು ಉತ್ತಪ್ಪ ಬಹಿರಂಗಪಡಿಸಿದ್ದಾರೆ.

ನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳುನಿಮಗೆ ಗೊತ್ತಿಲ್ಲದ ಸಚಿನ್: ಬೌಲಿಂಗ್‌ನಲ್ಲಿ ತೆಂಡೂಲ್ಕರ್ ಮಾಡಿದ 5 ವಿಶೇಷ ದಾಖಲೆಗಳು

ತಪ್ಪಾದ ಸಂದರ್ಭದಲ್ಲಿ ತೆಗೆದುಕೊಂಡ ಒಂದು ನಿರ್ಧಾರ ಅಂತಾರಾಷ್ಟ್ರೀಯ ಕೆರಿಯರ್‌ಗೆ ಮುಳುವಾಯಿತು ಎಂದು ಉತ್ತಪ್ಪ ಹೇಳಿದ್ದಾರೆ. ಉತ್ತಪ್ಪ ಹೇಳಿದ್ದೇನು ಮುಂದೆ ಓದಿ

ಬ್ಯಾಟಿಂಗ್ ತಂತ್ರ ಬದಲಾವಣೆ

ಬ್ಯಾಟಿಂಗ್ ತಂತ್ರ ಬದಲಾವಣೆ

ಸೀಮಿತ ಓವರ್‌ಗಳಲ್ಲಿ ಉತ್ತಪ್ಪ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ ಉತ್ತಪ್ಪ ಅವರ ಕನಸು ಬೇರೆಯೇ ಆಗಿತ್ತು. ಆ ಕನಸನ್ನು ಬೆನ್ನತ್ತುವ ಪ್ರಯತ್ನ ಮಾಡಿದ್ದರು ಉತ್ತಪ್ಪ. ಅದಕ್ಕಾಗಿ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ಇದು ಉತ್ತಪ್ಪ ಅವರ ಒಟ್ಟಾರೆ ಬ್ಯಾಟಿಂಗ್ ಮೇಲೆಯೇ ಪರಿಣಾಮ ಬಿತ್ತು ಎಂದು ಸ್ವತಃ ಉತ್ತಪ್ಪ ಹೇಳಿಕೊಂಡಿದ್ದಾರೆ.

ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸು

ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸು

ಉತ್ತಪ್ಪ ಅವರಿಗಿದ್ದ ಕನಸು ಬೇರೇನಲ್ಲ. ಟೀಮ್ ಇಮಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯಬೇಕೆಂಬುದಾಗಿತ್ತು. ಹೀಗಾಗಿ ಸ್ಪೋಟಕವಾಗಿ ಆಡುತ್ತಿದ್ದ ಉತ್ತಪ್ಪ ಒಂದಷ್ಟು ಬದಲಾವನೆ ಮಾಡುವ ನಿರ್ಧಾರವನ್ನು ಮಾಡಿದರು. "ನಾನು 25ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಟೆಕ್ನಿಕ್ ಬದಲಿಸಿಕೊಂಡಿದ್ದೆ. ಅಲ್ಲಿವರೆಗೂ ಸ್ಥಿರವಾಗಿ ಸಾಗುತ್ತಿದ್ದ ನನ್ನ ಬ್ಯಾಟಿಂಗ್ ಸ್ಪೀಡ್ ಕಡಿಮೆ ಆಗಿತ್ತು. ಸ್ಪೋಟಕ ಬ್ಯಾಟಿಂಗ್‌ಗೆ ಬ್ರೇಕ್ ಬಿತ್ತು" ಎಂದು ಹೇಳಿದರು.

ಬೇಗನೆ ಪ್ರಯತ್ನ ಪಡಬೇಕಿತ್ತು

ಬೇಗನೆ ಪ್ರಯತ್ನ ಪಡಬೇಕಿತ್ತು

ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ ಪರ ಆಡುತ್ತಿರುವ ಉತ್ತಪ್ಪ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಸೆಷನ್‍ನಲ್ಲಿ ತಮ್ಮ ವೃತ್ತಿ ಜೀವನ ಕುರಿತು ಆಸಕ್ತಿಕರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಮುಖ್ಯ ಗುರಿಯಾಗಿತ್ತು. ಇದರಂತೆ ನಾನು 20-21ರ ವಯಸ್ಸಿನಲ್ಲೇ ಪ್ರಯತ್ನ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ ತಡವಾಗಿ ಆ ಪ್ರಯತ್ನವನ್ನು ಮಾಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ವಿಶ್ವಕಪ್ ಗೆಲುವಿನ ನೆನಪು

ವಿಶ್ವಕಪ್ ಗೆಲುವಿನ ನೆನಪು

ಇದೇ ವೇಳೆ 2007ರ ವಿಶ್ವಕಪ್ ಗೆಲುವಿನ ಸಂಭ್ರಮದ ಬಗ್ಗೆ ಮಾತನಾಡಿರುವ ಉತ್ತಪ್ಪ, ವಿಶ್ವಕಪ್ ಗೆಲುವಿನಲ್ಲಿ ನೀವು ಒಂದು ಭಾಗವಾಗಿರುವುದರ ಅನುಭವವೇ ಬೇರೆಯಾಗಿರುತ್ತದೆ. 1983ರ ಬಳಿಕ ಮೊದಲ ವಿಶ್ವಕಪ್ ಗೆದ್ದದ್ದು ಬಹಳ ನಿರಾಳ ತಂದು ಕೊಟ್ಟಿತ್ತು. ವಿಶ್ವಕಪ್ ಗೆದ್ದ ಭಾರತಕ್ಕೆ ಹಿಂದಿರುಗಿದ್ದ ನಮಗೆ ಭವ್ಯ ಸ್ವಾಗತ ಲಭಿಸಿತ್ತು. ಅಂದು ಮೂರು ದಿನಗಳ ಕಾಲ ನಾನು ನಿದ್ದೆ ಮಾಡಿರಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.

Story first published: Wednesday, May 20, 2020, 20:47 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X