ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ರೋಹಿತ್, ಹಾರ್ದಿಕ್ ಗಾಯದ ಬಗ್ಗೆ ಟ್ರೆಂಟ್ ಬೋಲ್ಡ್ ಅಪ್‌ಡೇಟ್

Rohit and Hardik recovering very well but their availability for the KKR match is uncertain

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದೆ ಅಚ್ಚರಿ ಮೂಡಿಸಿದ್ದರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಬದಲಿಗೆ ಉಪನಾಯಕ ಕಿರಾನ್ ಪೊಲಾರ್ಡ್ ಮುನ್ನಡೆಸಿದ್ದರು. ಪ್ರಮುಖ ಇಬ್ಬರು ಆಟಗಾರರ ಅಲಭ್ಯತೆಯ ಮಧ್ಯೆ ಗಾಯದ ಕಾರಣದಿಂದಾಗಿ ಈ ಇಬ್ಬರು ಪ್ರಮುಖ ಆಟಗಾರರು ಹೊರಗುಳಿದಿರುವುದು ಬಳಿಕ ಸ್ಪಷ್ಟವಾಗಿತ್ತು. ಇದೀಗ ಈ ಇಬ್ಬರು ಆಟಗಾರರು ಮುಂದಿನ ಪಂದ್ಯದಲ್ಲಿಯೂ ಆಡುವ ಬಗ್ಗೆ ಅನುಮಾನವಿದೆ.

ತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತುತಂಡದಲ್ಲಿ ಬೇರೆ ಒಳ್ಳೊಳ್ಳೆ ಆಟಗಾರರಿದ್ದಾರೆ; ಕೊಹ್ಲಿ ನಾಯಕತ್ವ ತ್ಯಜಿಸುತ್ತಿರುವುದರ ಬಗ್ಗೆ ಸುದೀಪ್ ಮಾತು

ಮುಂಬೈ ಇಂಡಿಯನ್ಸ್ ತಂಡದ ಅನುಭವಿ ವೇಗಿ ಟ್ರೆಂಟ್ ಬೋಲ್ಟ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮುಂದಿನ ಪಂದ್ಯ ಸೆಪ್ಟೆಂಬರ್ 23ರಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯಲಿದ್ದು ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಆಡುವ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದಿದ್ದಾರೆ ಬೋಲ್ಟ್.

ಐಪಿಎಲ್ 2021: ಪ್ರಮುಖ ಆಟಗಾರನ ಹೊರಗಿಟ್ಟಿದ್ದಕ್ಕೆ ಅನಿಲ್ ಕುಂಬ್ಳೆ ಟ್ರೋಲ್
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದರು. ಹಾರ್ದಿಕ್ ಪಾಂಡ್ಯ ಕೂಡ ನೋವಿಗೆ ತುತ್ತಾಗಿದ್ದರು. ಹೀಗಾಗಿ ಈ ಇಬ್ಬರು ದುಬೈನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಪಡೆ 20 ರನ್‌ಗಳ ಅಂತರದಿಂದ ಸೋತಿತ್ತು.

ಈ ಬಾರಿಯ ಐಪಿಎಲ್‌ ಟೂರ್ನಿಯ ಮಧ್ಯದಲ್ಲೇ ಕೊಹ್ಲಿ ಕೈಬಿಟ್ಟು ಹೊಸ ನಾಯಕನನ್ನು ಆರಿಸಲಿದೆ ಆರ್‌ಸಿಬಿ!?ಈ ಬಾರಿಯ ಐಪಿಎಲ್‌ ಟೂರ್ನಿಯ ಮಧ್ಯದಲ್ಲೇ ಕೊಹ್ಲಿ ಕೈಬಿಟ್ಟು ಹೊಸ ನಾಯಕನನ್ನು ಆರಿಸಲಿದೆ ಆರ್‌ಸಿಬಿ!?

ಇಬ್ಬರು ಅನುಭವಿ ಆಟಗಾರರು ಕೂಡ ಗಾಯದಿಂದ ಉತ್ತಮವಾದ ಚೇತರಿಕೆ ಕಾಣುತ್ತಿದ್ದಾರೆ ಎಂದು ಟ್ರೆಂಟ್ ಬೋಲ್ಟ್ ಖಚಿತಪಡಿಸಿದ್ದಾರೆ. ಆದರೆ ಮುಂದಿನ ಪಂದ್ಯದಲ್ಲಿ ಈ ಇಬ್ಬರು ಆಟಗಾರರು ಆಡುವ ಬಗ್ಗೆ ಖಚಿತತೆಯಿಲ್ಲ ಎಂದು ಕೂಡ ಅವರು ವಿವರಿಸಿದರು. "ಅವರಿಬ್ಬರು ಕೂಡ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಮುಂದಿನ ಪಂದ್ಯದಲ್ಲಿ ಆಡುವ ವಿಚಾರವಾಗಿ ಏನಾಗಲಿದೆ ಎಂಬು ಹೇಳಲು ಸಾಧ್ಯವಿಲ್ಲ. ಆದರೆ ದಿನದಿಂದ ದಿನಕ್ಕೆ ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬೋಲ್ಟ್ ವಿವರಿಸಿದರು.

ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್ಮತ್ತದೇ ಕಥೆ; ರಾಜಸ್ಥಾನ್ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ತಿಳಿಸಿದ ಕೆಎಲ್ ರಾಹುಲ್

"ಖಂಡಿತವಾಗಿಯೂ ಈ ಇಬ್ಬರು ಆಟಗಾರರು ಮುಂಬೈ ಇಂಡಿಯನ್ಸ್ ಪಾಲಿಗೆ ಪ್ರಮುಖ ಆಟಗಾರರು. ಅವರಿಬ್ಬರೂ ಆಡುವ ಬಳಗಕ್ಕೆ ಮರಳಲು ನಾವೆಲ್ಲಾ ಕಾತರಿಸುತ್ತಿದ್ದೇವೆ. ಮುಂದಿನ ಪಂದ್ಯದಲ್ಲಿ ಅವರು ಆಡುವಂತಾಗಲಿದೆ ಎಂದು ನಾವು ಆಶಿಸುತ್ತೇವೆ" ಎಂದು ಬೋಲ್ಟ್ ಹೇಳಿದ್ದಾರೆ.

ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ಜವಾಬ್ದಾರಿ ಬಗ್ಗೆ ಹೇಳಿದ ರಿಕಿ ಪಾಂಟಿಂಗ್ | Oneindia Kannada

ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಐತಿಹಾಸಿಕವಾಗಿ ಹೊಂದಿರುವ ಹಿನ್ನಡೆಯ ದಾಖಲೆಯ ಬಗ್ಗೆಯೂ ಬೋಲ್ಟ್‌ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಬೋಲ್ಟ್, ಅಂದಿನ ಪಂದ್ಯದಲ್ಲಿ ಆಡುವಾಗ ಇತಿಹಾಸಗಳು ಪಾತ್ರವಹಿಸಲಾರದು ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ಬೋಲ್ಟ್ ಮುಂಬರುವ ಟಿ20 ವಿಶ್ವಕಪ್‌ನ ಸಿದ್ಧತೆಯ ದೃಷ್ಟಿಯಿಂದ ಐಪಿಎಲ್ ಅತ್ಯುತ್ತಮವಾದ ವೇದಿಕೆ ಎಂದಿದ್ದಾರೆ.

Story first published: Wednesday, September 22, 2021, 19:00 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X