ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: ಉತ್ತಮ ಜೊತೆಯಾಟಕ್ಕಾಗಿ ರೋಹಿತ್-ಧವನ್ ದಾಖಲೆ

Rohit, Dhawan become second highest scoring India pairing

ಮೊಹಾಲಿ, ಮಾರ್ಚ್ 11: ಮೊಹಾಲಿಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ದಾಖಲೆ ಬರೆದ್ದಾರೆ. ಏಕದಿನದಲ್ಲಿ ಉತ್ತಮ ಜೊತೆಯಾಟಕ್ಕಾಗಿ ಭಾರತೀಯರಲ್ಲಿ ದ್ವಿತೀಯ ಸ್ಥಾನದಲ್ಲಿ ರೋಹಿತ್-ಧವನ್ ಜೋಡಿ ಗುರುತಿಸಿಕೊಂಡಿದೆ (ಚಿತ್ರಕೃಪೆ: ಬಿಸಿಸಿಐ).

ಭಾರತ vs ಆಸ್ಟ್ರೇಲಿಯಾ: ದೀರ್ಘ ಕಾಲದ ಬಳಿಕ ಅಬ್ಬರಿಸಿದ ಶಿಖರ್ ಧವನ್ಭಾರತ vs ಆಸ್ಟ್ರೇಲಿಯಾ: ದೀರ್ಘ ಕಾಲದ ಬಳಿಕ ಅಬ್ಬರಿಸಿದ ಶಿಖರ್ ಧವನ್

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಇಂದರ್‌ಜಿತ್ ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 10) ನಡೆದ ಭಾರತ-ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯದಲ್ಲಿ ರೋಹಿತ್ 92 ಎಸೆತಗಳಿಗೆ 95 ರನ್ ಮತ್ತು ಧವನ್ 115 ಎಸೆತಗಳಿಗೆ 143 ರನ್ ಬಾರಿಸಿದರು. ಪಂದ್ಯದಲ್ಲಿ ಈ ಜೋಡಿ ಒಟ್ಟು 193 ರನ್ ಜೊತೆಯಾಟ ನೀಡಿತ್ತು.

ಮೊಹಾಲಿಯಲ್ಲಿ ಭಾರತಕ್ಕೆ ಮತ್ತೆ ಸೋಲು, ದಾಖಲೆ ಮುರಿಯುವಾಸೆ ಮಣ್ಣುಪಾಲು!ಮೊಹಾಲಿಯಲ್ಲಿ ಭಾರತಕ್ಕೆ ಮತ್ತೆ ಸೋಲು, ದಾಖಲೆ ಮುರಿಯುವಾಸೆ ಮಣ್ಣುಪಾಲು!

ಈ ಸಾಧನೆ ಏಕದಿನದಲ್ಲಿ ಅತ್ಯಧಿಕ ಜೊತೆಯಾಟ ನೀಡಿದ ಭಾರತ ಜೋಡಿಗಳಲ್ಲಿ ರೋಹಿತ್-ಧವನ್ ಅವರನ್ನು ದ್ವಿತೀಯ ಸ್ಥಾನದಲ್ಲಿ ತಂದು ನಿಲ್ಲಿಸಿದೆ. 47.55ರ ಸರಾಸರಿಯಂತೆ 8227 ರನ್ ಕಲೆ ಹಾಕಿದ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಜೋಡಿ ಈ ಯಾದಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಏಕದಿನದಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ಜೋಡಿ
ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ (ಇಂಡಿಯಾ) - 176 ಇನ್ನಿಂಗ್ಸ್‌ಗಳಲ್ಲಿ 8227 ರನ್.
ಶಿಖರ್ ಧವನ್, ರೋಹಿತ್ ಶರ್ಮಾ (ಇಂಡಿಯಾ) - 102 ಇನ್ನಿಂಗ್ಸ್‌ಗಳಲ್ಲಿ 4571 ರನ್.
ವೀರೇಂದ್ರ ಸೆಹ್ವಾಗ್, - ಸಚಿನ್ ತೆಂಡುಲ್ಕರ್ (ಭಾರತ) - 114 ಇನ್ನಿಂಗ್ಸ್‌ಗಳಲ್ಲಿ 4387 ರನ್.
ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ (ಇಂಡಿಯಾ) - 87 ಇನ್ನಿಂಗ್ಸ್‌ಗಳಲ್ಲಿ 4332 ರನ್.
ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ (ಭಾರತ) - 72 ಇನ್ನಿಂಗ್ಸ್‌ಗಳಲ್ಲಿ 4328 ರನ್.

ಆರ್ಮಿ ಕ್ಯಾಪ್ ಧರಿಸಿದ ಟೀಮ್ ಇಂಡಿಯಾ ವಿರುದ್ಧ ಕ್ರಮಕ್ಕೆ ಪಾಕ್ ಒತ್ತಾಯ!ಆರ್ಮಿ ಕ್ಯಾಪ್ ಧರಿಸಿದ ಟೀಮ್ ಇಂಡಿಯಾ ವಿರುದ್ಧ ಕ್ರಮಕ್ಕೆ ಪಾಕ್ ಒತ್ತಾಯ!

ರೋಹಿತ್-ಧವನ್ ಜೋಡಿ 102 ಇನ್ನಿಂಗ್ಸ್‌ಗಳಲ್ಲಿ 45.25ರ ಸರಾಸರಿಯಂತೆ 4571 ರನ್ ಬಾರಿಸಿದ್ದಾರೆ. ಇದು ವೀರೇಂದ್ರ-ಸಚಿನ್ ತೆಂಡೂಲ್ಕರ್ ಜೊತೆಯಾಟದ ದಾಖಲೆಯನ್ನು ಮೀರಿಸಿದೆ. ಸೆಹ್ವಾಗ್-ಸಚಿನ್ ಒಟ್ಟು 114 ಇನ್ನಿಂಗ್ಸ್‌ಗಳಲ್ಲಿ 39.16ರ ಸರಾಸರಿಯಂತೆ 4387 ರನ್ ಸಾಧನೆ ಮಾಡಿದ್ದರು.

Story first published: Monday, March 11, 2019, 2:11 [IST]
Other articles published on Mar 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X