ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್

Rohit, Gayle, AB de Villiers don’t have ability to rotate strike like Kohli says Gautam Gambhir

ನವದೆಹಲಿ: ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್‌ ಗೇಲ್ ಎಂಥ ಬೌಲರ್‌ಗಳ ಎಸೆತವನ್ನೂ ಸಿಕ್ಸ್‌ ಲೈನ್ ದಾಟಿಸಿ ಅಟ್ಟಬಲ್ಲರು. ಹಿಟ್‌ಮ್ಯಾನ್ ಖ್ಯಾತಿಯ ಭಾರತದ ಉಪನಾಯಕ ರೋಹಿತ್ ಶರ್ಮಾ ವೇಗಿಗಳ ಎಸೆಗಳಿಗೆ ಭರ್ಜರಿಯಾಗಿ ಬ್ಯಾಟ್ ಬೀಸುತ್ತಾರೆ. ಇನ್ನು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್, ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ತುಂಬಾ ಸುಲಭವಾಗಿ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಗಳಿಸುತ್ತಾರೆ. ಆದರೆ ಇವರ್ಯಾರೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೋಲಿಕೆಯಾಗಲ್ಲ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೇಳಿದ್ದಾರೆ.

'ಆತ ಅತ್ಯುತ್ತಮ ಆಟಗಾರ': ಪ್ರಭಾವಶಾಲಿ ಭಾರತೀಯನ ಹೆಸರಿಸಿದ ಸ್ಮಿತ್'ಆತ ಅತ್ಯುತ್ತಮ ಆಟಗಾರ': ಪ್ರಭಾವಶಾಲಿ ಭಾರತೀಯನ ಹೆಸರಿಸಿದ ಸ್ಮಿತ್

ವಿರಾಟ್ ಕೊಹ್ಲಿ ಆಗೀಗ ಕುಟುಕುತ್ತ ಸುದ್ದಿಯಾಗುತ್ತಿದ್ದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್, ಗೌತಮ್ ಗಂಭೀರ್ ಈ ಬಾರಿ ಮಾತ್ರ ಕೊಹ್ಲಿಯನ್ನು ಮನಸಾರೆ ಹೊಗಳಿದ್ದಾರೆ. ಕೊಹ್ಲಿಯಲ್ಲಿರುವ ಈ ವಿಶೇಷ ಸಾಮರ್ಥ್ಯ ಬೇರಾವ ಆಟಗಾರರಲ್ಲೂ ಇಲ್ಲ ಎಂದಿದ್ದಾರೆ.

ಬೌಲರ್‌ಗಳು ಚೆಂಡಿಗೆ ಎಂಜಲೇಕೆ ಸವರುತ್ತಾರೆ?: ಕ್ರಿಕೆಟಿಗರ ವಿವರಣೆ ಇಲ್ಲಿದೆಬೌಲರ್‌ಗಳು ಚೆಂಡಿಗೆ ಎಂಜಲೇಕೆ ಸವರುತ್ತಾರೆ?: ಕ್ರಿಕೆಟಿಗರ ವಿವರಣೆ ಇಲ್ಲಿದೆ

ಆಧುನಿಕ ದಿನಗಳ ಕ್ರಿಕೆಟ್‌ನಲ್ಲಿ, ಮುಖ್ಯವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ ಉಳಿದ ಆಟಗಾರರಿಗಿಂತ ಭಿನ್ನ ಬ್ಯಾಟ್ಸ್‌ಮನ್ ಹೇಗೆಂದು ಗಂಭೀರ್ ವಿವರಿಸಿದ್ದಾರೆ.

ಸೀಮಿತ ಓವರ್‌ನಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್

ಸೀಮಿತ ಓವರ್‌ನಲ್ಲಿ ಬೆಸ್ಟ್ ಬ್ಯಾಟ್ಸ್‌ಮನ್

ಲಿಮಿಟೆಡ್ ಓವರ್‌ನಲ್ಲಿ ಕೊಹ್ಲಿ ಒಬ್ಬ ಬೆಸ್ಟ್ ಬ್ಯಾಟ್ಸ್‌ಮನ್ ಎಂದಿರುವ ಗಂಭೀರ್, ವಿರಾಟ್ ಕೊಹ್ಲಿಯ ಸ್ಟ್ರೈಕ್ ರೊಟೇಟ್ ಸಾಮರ್ಥ್ಯ ಕ್ರಿಸ್‌ ಗೇಲ್, ರೋಹಿತ್ ಶರ್ಮಾ, ಎಬಿ ಡಿ ವಿಲಿಯರ್ಸ್ ಅವರಿಗಿಂತ ಚೆನ್ನಾಗಿದೆ. ಅದಕ್ಕೆ ಅವರು ಈ ಎಲ್ಲಾ ಆಟಗಾರರಿಗಿಂತ ಹೆಚ್ಚು ರನ್ ಗಳಿಸುತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲೂ ಕೊಹ್ಲಿ ಪ್ರತೀ ಎಸೆತಕ್ಕೂ ಸ್ಟ್ರೈಕ್ ರೊಟೇಟ್ ಮಾಡಬಲ್ಲರು,' ಎಂದಿದ್ದಾರೆ.

ಏಕದಿನದಲ್ಲಿ ಕೊಹ್ಲಿ ನಂ.1

ಏಕದಿನದಲ್ಲಿ ಕೊಹ್ಲಿ ನಂ.1

ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಸದ್ಯ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ವಿರಾಟ್, ಟಿ20ಯಲ್ಲಿ 10ನೇ ಶ್ರೇಯಾಂಕದಲ್ಲಿದ್ದಾರೆ. 86 ಟೆಸ್ಟ್ ಪಂದ್ಯಗಳಲ್ಲಿ 7240 ರನ್, 248 ಏಕದಿನ ಪಂದ್ಯಗಳಲ್ಲಿ 11867 ರನ್ ಮತ್ತು 81 ಟಿ20ಐ ಪಂದ್ಯಗಳಲ್ಲಿ 2794 ರನ್ ದಾಖಲೆ ಹೊಂದಿದ್ದಾರೆ.

ರೋಹಿತ್‌ಗಿಂತ ಕೊಹ್ಲಿ ಭಿನ್ನ ಹೀಗೆ

ರೋಹಿತ್‌ಗಿಂತ ಕೊಹ್ಲಿ ಭಿನ್ನ ಹೀಗೆ

ಸ್ಟಾರ್ ಸ್ಪೋರ್ಟ್ಸ್‌ನ ಶೋ ಕ್ರಿಕೆಟ್ ಕನೆಕ್ಟೆಡ್'ನಲ್ಲಿ ಮಾತನಾಡಿದ ಗಂಭೀರ್, ಕೊಹ್ಲಿ ಯಾಕೆ ಭಾರತದ ನಿಯಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಅವರಿಗಿಂತ ಭಿನ್ನ ಎಂದು ವಿವರಿಸಿದ್ದಾರೆ. 'ಇದೇ ಕಾರಣಕ್ಕೆ ಕೊಹ್ಲಿ ಉಳಿದವರಿಗಿಂತ ಭಿನ್ನರಾಗಿದ್ದಾರೆ. ನೀವು ರೋಹಿತ್ ಶರ್ಮಾ ಅವರನ್ನು ನೋಡಿ. ಸ್ಟ್ರೈಕ್ ರೊಟೇಟ್ ವಿಚಾರದಲ್ಲಿ ರೋಹಿತ್ ಅವರಲ್ಲಿ ಕೊಹ್ಲಿಯ ಗುಣಮಟ್ಟವಿಲ್ಲ. ರೋಹಿತ್‌ಗೆ ದೊಡ್ಡ ಹೊಡೆತಗಳ ಸಾಮರ್ಥ್ಯವಿದೆ. ಆದರೆ ಕೊಹ್ಲಿ ರೋಹಿತ್‌ಗಿಂತ ಹೆಚ್ಚು ಸ್ಥಿರತೆ ಹೊಂದಿದ್ದಾರೆ,' ಎಂದು ವಿವರಿಸಿದ್ದಾರೆ.

ಕೊಹ್ಲಿಯ ಸರಾಸರಿ ಹೆಚ್ಚಿರುವುದರ ಗುಟ್ಟಿದು

ಕೊಹ್ಲಿಯ ಸರಾಸರಿ ಹೆಚ್ಚಿರುವುದರ ಗುಟ್ಟಿದು

'ಸ್ಟ್ರೈಕ್ ರೋಟೇಟ್ ಮಾಡುವ ಆ ಸಾಮರ್ಥ್ಯ ಕ್ರಿಸ್ ಗೇಲ್‌ಗಿಲ್ಲ. ಸ್ಪಿನ್ ಬೌಲಿಂಗ್‌ಗೆ ಪ್ರತೀ ಎಸೆತಕ್ಕೂ ಸ್ಟ್ರೈಕ್ ರೊಟೇಟ್ ಮಾಡುವ ಸಾಮರ್ಥ್ಯ ಎಬಿ ಡಿ ವಿಲಿಯರ್ಸ್‌ಗೂ ಇಲ್ಲ. ಆದರೆ ಈ ವಿಶೇಷತೆ ಕೊಹ್ಲಿಗಿದೆ. ಹೀಗಾಗಿಯೇ ಅವರ ರನ್ ಸರಾಸರಿ 50ಕ್ಕೂ ಹೆಚ್ಚಿದೆ,' ಎಂದು ಗಂಭೀರ್ ಹೇಳಿದ್ದಾರೆ.

Story first published: Tuesday, June 16, 2020, 15:46 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X