ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ರೋಹಿತ್‌ ಉದ್ದೇಶವೇನೆಂಬುದನ್ನು ಬಿಚ್ಚಿಟ್ಟ ಕೋಚ್‌!

Rohit on a mission to bring WC trophy back home: Coach

ಮುಂಬೈ, ಜುಲೈ 08: ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಲಯದಲ್ಲಿರುವ ಟೀಮ್‌ ಇಂಡಿಯಾದ ಉಪನಾಯಕ ರೋಹಿತ್‌ ಶರ್ಮಾ, ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ರನ್‌ ಹೊಳೆಯನ್ನೇ ಹರಿಸಿ ಹಲವು ದಾಖಲೆಗಳನ್ನು ನುಚ್ಚು ನೂರು ಮಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಈ ಬಾರಿ ಅತಿ ಹೆಚ್ಚು ರನ್‌ಗಳಿಸಿದವರ ಪೈಕಿ ಅಗ್ರಸ್ಥಾನದಲ್ಲಿರುವ ರೋಹಿತ್‌ ಒಟ್ಟು 5 ಶತಕಗಳನ್ನು ಸಿಡಿಸಿ ವಿಶ್ವ ದಾಖಲೆಯನ್ನೂ ಬರೆದಿದ್ದಾರೆ. ಆಡಿದ ಪ್ರತಿಯೊಂದು ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆಗಳನ್ನು ತಮ್ಮ ಮುಡಿಗೇರಿಸಿ ಕೊಳುತ್ತಿದ್ದಾರೆ.

ಅಂದಹಾಗೆ ಟೀಮ್‌ ಇಂಡಿಯಾದ ರನ್‌ ಮಷೀನ್‌ ವಿರಾಟ್‌ ಕೊಹ್ಲಿ ಆಗಿದ್ದರೂ ಕೂಡ ವಿಶ್ವಕಪ್‌ನಲ್ಲಿ ಅಬ್ಬರಿಸುತ್ತಿರುವುದು ರೋಹಿತ್‌ ಶರ್ಮಾ. ಅಂದಹಾಗೆ ಹಿಟ್‌ಮ್ಯಾನ್‌ ಈ ಬಾರಿ ವಿಶ್ವಕಪ್‌ನಲ್ಲಿ ಹೊಂದಿರುವ ಮುಖ್ಯ ಗುರಿ ಏನೆಂಬುದನ್ನು ಅವರ ಬಾಲ್ಯದ ಕೋಚ್‌ ದಿನೇಶ್‌ ಲಾಡ್‌ ವಿವರಿಸಿದ್ದಾರೆ.

ಬುಮ್ರಾ ಬೌಲಿಂಗ್‌ ಬಗ್ಗೆ ಡೇನಿಯಲ್‌ ವೆಟೊರಿ ಹೇಳಿದ್ದೇನು ಗೊತ್ತಾ?ಬುಮ್ರಾ ಬೌಲಿಂಗ್‌ ಬಗ್ಗೆ ಡೇನಿಯಲ್‌ ವೆಟೊರಿ ಹೇಳಿದ್ದೇನು ಗೊತ್ತಾ?

"ರೋಹಿತ್‌ ಅದ್ಭುತವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ವಿಶ್ವಕಪ್‌ ಗೆದ್ದು ಅದನ್ನು ತಾಯ್ನಾಡಿಗೆ ತರುವುದೇ ಅವರ ಮುಖ್ಯ ಗುರಿಯಾಗಿದೆ. ರೋಹಿತ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಜವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಪ್ರಮುಖವಾಗಿ ಅವರು ತಾಳ್ಮೆ ಕಂಡುಕೊಂಡಿದ್ದು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವ ಕಡೆಗೆ ಗಮನ ನೀಡುತ್ತಿದ್ದಾರೆ. ಅವರು ವಿಶ್ವಕಪ್‌ಗೆ ತೆರಳುವ ಮುನ್ನ ಕನಿಷ್ಠ 10-12 ಓವರ್‌ಗಳ ವರೆಗೆ ಕ್ರೀಸ್‌ನಲ್ಲಿ ಉಳಿಯುವಂತೆ ಸಲಹೆ ನೀಡಿದ್ದೆ. ಇದನ್ನು ಅವರು ಪಾಲಿಸುತ್ತಿದ್ದಾರೆ. ಫಲಿತಾಂಶ ಎಲ್ಲರ ಮುಂದಿದೆ,'' ಎಂದು ಲಾಡ್‌ ಹೇಳಿದ್ದಾರೆ.

ಇಂಡೊ-ಕಿವೀಸ್‌ ಸೆಮಿಫೈನಲ್‌ಗೆ ಮಳೆ ಅಡ್ಡಿ ಪಡಿಸಿದರೆ ಏನಾಗುತ್ತದೆ?

ರೋಹಿತ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 647 ರನ್‌ಗಳನ್ನು ಚೆಚ್ಚಿದ್ದಾರೆ. ಈ ಮೂಲಕ ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪೈಕಿ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ (673) ಅವರ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೂ ವಿಶ್ವಕಪ್‌ ಇತಿಹಾಸದಲ್ಲಿ 7 ಶತಕಗಳನ್ನು ಬಾರಿಸಿದ ಮೊತ್ತ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸದ್ಯ ಸಚಿನ್‌ ತೆಂಡೂಲ್ಕರ್‌ (6) ಅವರೊಟ್ಟಿಗೆ ಈ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಸಿಡಿಸಿರುವ ವಿಶ್ವದ ಏಕಮಾತ್ರ ಆಟಗಾರ ಆಗಿರುವ ರೋಹಿತ್‌, ದೊಡ್ಡ ಶತಕಗಳನ್ನು ಬಾರಿಸುವುದಕ್ಕೇ ಹೆಸರುವಾಸಿ. ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಅವರಿಂದ ಇಂಥದ್ದೊಂದು ದೊಡ್ಡ ಶತಕ ಹೊರಬಂದಿಲ್ಲ.

ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಕಿವೀಸ್‌ ತನ್ನ ಪ್ರಮುಖ ಅಸ್ತ್ರದ ಬಳಕೆ!ಸೆಮಿಫೈನಲ್ಸ್‌ನಲ್ಲಿ ಭಾರತ ವಿರುದ್ಧ ಕಿವೀಸ್‌ ತನ್ನ ಪ್ರಮುಖ ಅಸ್ತ್ರದ ಬಳಕೆ!

ಈ ಕುರಿತಾಗಿಯೂ ಮಾತನಾಡಿರುವ ಲಾಡ್‌, "ಶತಕದ ಬಳಿಕ ರೋಹಿತ್‌ ಹೆಚ್ಚು ಆಕ್ರಮಣಕಾರಿ ಬ್ಯಾಟಿಂಗ್‌ ಮಾಡುತ್ತಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕಳಪೆ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರು. ಇಲ್ಲವಾಗಿದ್ದರೆ ಖಂಡಿತಾ 200 ರನ್‌ ಗಳಿಸುತ್ತಿದ್ದರು. ಶತಕದ ಬಳಿಕ ಅವರು ಕೊಂಚ ತಾಳ್ಮೆಯಿಂದ ಆಡಬೇಕಿದೆ. ಸೆಮಿಫೈನಲ್ಸ್‌ ಪಂದ್ಯದ ಒತ್ತಡ ಅವರ ಮೇಲಿಲ್ಲ. ಈ ಪಂದ್ಯದಲ್ಲೂ ಅವರು ಅಬ್ಬರಿಸುವುದು ನಿಶ್ಚಿತ" ಎಂದು ಹೇಳಿದ್ದಾರೆ.

ODI rankings: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೆ ಕುತ್ತು!

2011ರಲ್ಲಿ ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿ ರೋಹಿತ್‌ ಸ್ಥಾನ ಪಡೆದಿರಲಿಲ್ಲ. ಆದರೆ, 2015ರಲ್ಲಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ವಿಶ್ವಕಪ್‌ನಲ್ಲಿ ತಮ್ಮ ಶತಕಗಳ ಖಾತೆ ತೆರೆದಿದ್ದರು. ಇದೀಗ ವಿಶ್ವಕಪ್‌ ಗೆದ್ದು ತಮ್ಮ ಕನಸು ನನಸಾಗಿಸಿಕೊಳ್ಳುವತ್ತ ರೋಹಿತ್‌ ಎದುರು ನೋಡುತ್ತಿರುವುದಂತೂ ಸತ್ಯ.

Story first published: Monday, July 8, 2019, 19:59 [IST]
Other articles published on Jul 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X