ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಿಆರ್‌ಎಸ್‌ನಲ್ಲಿ ರೋಹಿತ್‌ ಔಟ್‌ ಆದುದಕ್ಕೆ ಪತ್ನಿ ರಿತಿಕಾ ಶಾಕ್‌!

ICC World Cup 2019 : ರೋಹಿತ್ ಔಟ್, DRS ಮೇಲೆ ಎಲ್ಲರ ಕೆಂಗಣ್ಣು..! | IND vs WI
Rohits dismissal against Windies raises questions on DRS

ಮ್ಯಾಂಚೆಸ್ಟರ್‌, ಜೂನ್‌ 27: ಟೀಮ್‌ ಇಂಡಿಯಾದ ಉಪನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ವೆಸ್ಟ್‌ ಇಂಡೀಸ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಔಟ್‌ ಆದ ರೀತಿ ಸಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರೋಹಿತ್‌ ಅವರ ಪತ್ನಿ ಕೂಡ ಡಿಆರ್‌ಎಸ್‌ನಲ್ಲಿ ರೋಹಿತ್‌ ಅವರನ್ನು ಔಟ್‌ ಎಂದು ತೀರ್ಮಾನಿಸಿದ್ದಕ್ಕೆ ಶಾಕ್‌ ಆಗಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ವೆಸ್ಟ್‌ ಇಂಡೀಸ್‌ ವಿರುದ್ಧ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತೆಯೇ ಇನಿಂಗ್ಸ್‌ ಆರಂಭಿಸಿದ ರೋಹಿತ್‌, ಕಳೆದ ಪಂದ್ಯದಲ್ಲಿ ಅಫಘಾನಿಸ್ಥಾನ ವಿರುದ್ಧ ಅನುಭವಿಸಿದ ವೈಫಲ್ಯವನ್ನು ಮರೆತು ದೊಡ್ಡ ಇನಿಂಗ್ಸ್‌ ಆಡುವ ಲೆಕ್ಕಾಚಾರದಲ್ಲಿ 22 ಎಸೆತಗಳಲ್ಲಿ 18 ರನ್‌ಗಳನ್ನು ಗಳಿಸಿದ್ದರು.

ಈ ಸಂದರ್ಭದಲ್ಲಿ ದಾಳಿಗಿಳಿದ ವೆಸ್ಟ್‌ ಇಂಡೀಸ್‌ನ ವೇಗಿ ಕೆಮಾರ್‌ ರೋಚ್‌ ಅವರ ಗುಡ್‌ ಲೆನ್ತ್‌ ಎಸೆತವು ತೀಕ್ಷಣವಾಗಿ ಒಳಗೆ ನುಗ್ಗಿತ್ತು. ಚೆಂಡು ರೋಹಿತ್‌ ಅವರ ಬ್ಯಾಟ್‌ ಮತ್ತು ಪ್ಯಾಡ್‌ ಮಧ್ಯದಲ್ಲಿ ನುಸುಳಿ ವಿಕೆಟ್‌ಕೀಪರ್‌ ಶೇಯ್‌ ಹೋಪ್‌ ಕೈ ಸೇರಿತ್ತು. ವಿಂಡೀಸ್‌ ಆಟಗಾರರ ಮನವಿಗೆ ಆನ್‌ಫೀಲ್ಡ್‌ ಅಂಪೈರ್‌ ಮಣೆ ಹಾಕಲಿಲ್ಲ. ಬಳಿಕ ನಾಯಕ ಜೇಸನ್‌ ಹೋಲ್ಡರ್‌ ಡಿಆರ್‌ಎಸ್‌ ಮೊರೆ ಹೋದರು.

ಪಾಕ್‌ ತಂಡವನ್ನು ಪಾಕ್‌ ತಂಡವನ್ನು "ಗ್ರೇಟ್‌" ಎಂದ ಕಿವೀಸ್‌ ನಾಯಕ ವಿಲಿಯಮ್ಸನ್‌!

ಮೈರನೇ ಅಂಪೈರ್‌ ವಿಡಿಯೊ ಪರಿಶೀಲನೆ ನಡೆಸಿದಾಗ ಚೆಂಡು ಬ್ಯಾಟ್‌ ಮತ್ತು ಪ್ಯಾಡ್‌ ಎರಡದ ಮಧ್ಯದಲ್ಲಿ ಏಕಕಾಲದಲ್ಲಿ ನುಸುಳಿರುವುದು ತಿಳಿದುಬಂದಿತು. ಆದರೆ ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲ. ಬ್ಯಾಟ್‌ ಮತ್ತು ಪ್ಯಾಡ್‌ ಎರಡಕ್ಕೂ ಚೆಂಡು ತಾಗಿರುವ ಸಾಧ್ಯತೆ ಇತ್ತು. ಹೀಗಿರುವಾಗ ಯಾವುದೇ ರೀತಿಯ ನಿರ್ಧಾರ ಹೊರಬರುವ ಸಾಧ್ಯತೆ ಇತ್ತು.

ಅಂತಿಮವಾಗಿ ಮೂರನೇ ಅಂಪೈರ್‌ ಆನ್‌ಫೀಲ್ಡ್‌ ಅಂಪೈರ್‌ನ ನಿರ್ಧಾರ ಬದಲಾಯಿಸುವಂತೆ ಸೂಚಿಸಿದರು. ಔಟ್‌ ನಿರ್ಧಾರಕ್ಕೆ ಸಮ್ಮತಿಸದವರಂತೆ ರೋಹಿತ್‌ ಕೂಡ ತಲೆ ಅಲ್ಲಾಡಿಸುತ್ತಾ ನಿರಾಸೆಯಿಂದ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು. ಗ್ಯಾಲರಿಯಲ್ಲಿ ಕುಳಿತಿದ್ದ ರೋಹಿತ್‌ ಶರ್ಮಾ ಅವರ ಪತ್ನಿ ಅಚ್ಚರಿಯಿಂದ "ವಾಟ್‌'' ಎಂದು ದಿಗ್ಭ್ರಮೆ ವ್ಯಕ್ತ ಪಡಿಸಿದ ವಿಡಿಯೊವನ್ನು ಟೆಲಿವಿಷನ್‌ ಪರದೆಯ ಮೇಲೆ ಇದೇ ವೇಳೆ ತೋರಿಸಲಾಯಿತು.

ವಿಶ್ವಕಪ್‌ 2019: 'ಯೂನಿವರ್ಸ್‌ ಬಾಸ್‌' ಕ್ರಿಸ್‌ ಗೇಲ್‌ ಅಪ್ರತಿಮ ಆಟಗಾರವಿಶ್ವಕಪ್‌ 2019: 'ಯೂನಿವರ್ಸ್‌ ಬಾಸ್‌' ಕ್ರಿಸ್‌ ಗೇಲ್‌ ಅಪ್ರತಿಮ ಆಟಗಾರ

ಡಿಆರ್‌ಎಸ್‌ನಲ್ಲಿ ಈ ರೀತಿಯ ಗೊಂದಲದ ನಿರ್ಧಾರಗಳು ಹೊರ ಬೀಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಡಿಆರ್‌ಎಸ್‌ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯು ಕೂಡ ಈ ಕುರಿತಾಗಿ ಪರ ವಿರೋಧಗಳ ಚರ್ಚೆ ಜೋರಾಗಿದೆ.

ಬಳಿಕ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇದಾರ್‌ ಜಾಧವ್‌ ಕೂಡ ಇದೇ ರೀತಿಯಲ್ಲಿ ಔಟಾದರು.

Story first published: Thursday, June 27, 2019, 17:27 [IST]
Other articles published on Jun 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X