ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಾಹೀರಾತು ವಲಯದಲ್ಲೂ ಬಿಗ್‌ಹಿಟ್: ಗಗನಕ್ಕೇರಿದ ರೋಹಿತ್ ಬ್ರ್ಯಾಂಡ್ ವ್ಯಾಲ್ಯೂ

Rohit Sharma's brand value have scaled up | Oneindia kannada
Rohit Sharma a big hit with as many as 22 brands

ಕ್ರಿಕೆಟ್‌ ವಲಯದಲ್ಲಿ ರೋಹಿತ್ ಶರ್ಮಾ ತಮ್ಮ ಸ್ಥಾನವನ್ನು ಎತ್ತರೆತ್ತರಕ್ಕೆ ಏರಿಸುತ್ತಲೇ ಇದ್ದಾರೆ. ಪ್ರತೀ ಸರಣಿಯಲ್ಲೂ ತನ್ನ ಸಾಮರ್ಥ್ಯ ಏನು ಅನ್ನೋದನ್ನು ಬ್ಯಾಟ್ ಮೂಲಕವೇ ವ್ಯಕ್ತಪಡಿಸುತ್ತಿದ್ದಾರೆ. ರೋಹಿತ್ ಆಟ ನಿಗದಿತ ಓವರ್‌ಗಳ ಫಾರ್ಮ್ಯಾಟ್‌ಗೆ ಮಾತ್ರ ಟೆಸ್ಟ್‌ಗೆ ಅಲ್ಲ ಅಂದವರಿಗೂ ರೋಹಿತ್ ಸರಿಯಾಗಿಯೇ ಉತ್ತರವನ್ನು ನೀಡಿದ್ದಾರೆ.

ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 5 ಶತಕಗಳನ್ನು ಬಾರಿಸಿ ಮಿಂಚುದ್ದರು. ಟೆಸ್ಟ್‌ ಚಾಂಪಿಯನ್‌ಶಿಪ್ ಆರಂಭಗೊಂಡ ಬಳಿಕ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲೂ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೀಡಿದ ಅಮೋಘ ಪ್ರದರ್ಶನ ರೋಹಿತ್ ಹೆಸರನ್ನು ಕ್ರೀಡಾ ವಲಯದಲ್ಲಿ ಮಾತ್ರವಲ್ಲ ಜಾಹೀರಾತು ವಲಯದಲ್ಲೂ ಭರ್ಜರಿ ಮಾರ್ಕೆಟ್ ಸೃಷ್ಠಿಸಿದೆ.

ತಂಡಕ್ಕಾಗಿ ಗೆಳೆಯರ ಕಿತ್ತಾಟ: ಅನ್‌ಫಾಲೋನಲ್ಲಿ ಗೆಳೆತನ ಅಂತ್ಯ!ತಂಡಕ್ಕಾಗಿ ಗೆಳೆಯರ ಕಿತ್ತಾಟ: ಅನ್‌ಫಾಲೋನಲ್ಲಿ ಗೆಳೆತನ ಅಂತ್ಯ!

ಇಲ್ಲಿಯವರೆಗೂ ಹತ್ತು ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದ ರೋಹಿತ್ ಶರ್ಮಾ ಇದನ್ನು 22ಕ್ಕೆ ಏರಿಸಿಕೊಂಡಿದ್ದಾರೆ. ಈ ಜಾಹೀರಾತುಗಳಿಂದ 32 ವರ್ಷದ ಸ್ಪೋಟಕ ಆಟಗಾರ ಕೊಟಿ ಕೋಟಿ ವಾರ್ಷಿಕ ಆದಾಯವನ್ನು ಪಡೆಯಲಿದ್ದಾರೆ.

ಏರುತ್ತಲೇ ಇದೆ ರೋಹಿತ್ ಬ್ರ್ಯಾಂಡ್ ವ್ಯಾಲ್ಯೂ:

ಏರುತ್ತಲೇ ಇದೆ ರೋಹಿತ್ ಬ್ರ್ಯಾಂಡ್ ವ್ಯಾಲ್ಯೂ:

ರೋಹಿತ್ ಶರ್ಮಾ ತಮ್ಮ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಈ ವರ್ಷ ಇದು ಭಾರೀ ಮಟ್ಟದಲ್ಲಿ ಏರಿಕೆಯಾಗಿದೆ. ಬರೊಬ್ರಿ ಹತ್ತು ಹೊಸ ಬ್ರ್ಯಾಂಡ್‌ಗಳನ್ನು ರೋಹಿತ್ ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ರೋಹಿತ್ ಯಶಸ್ವಿಯಾಗಿದ್ದಾರೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ತಮ್ಮ ಮೌಲ್ಯದಲ್ಲಿ 55% ಹೆಚ್ಚಳ ಮಾಡಿಕೊಂಡಿದ್ದಾರೆ ಎಂದು ಎಕನಾಮಿಕ್ಸ್‌ ಟೈಮ್ಸ್‌ ವರದಿ ಮಾಡಿದೆ.

ಜಾಹೀರಾತಿನಿಂದ ರೋಹಿತ್ ಪಡೆಯಲಿರುವ ಆದಾಯವೆಷ್ಟು?

ಜಾಹೀರಾತಿನಿಂದ ರೋಹಿತ್ ಪಡೆಯಲಿರುವ ಆದಾಯವೆಷ್ಟು?

ರೋಹಿತ್ ಶರ್ಮಾ ಅವರು 22 ಬ್ರ್ಯಾಂಡ್‌ಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಇವುಗಳ ಜಾಹೀರಾತಿನಿಂದ ವಾರ್ಷಿಕವಾಗಿ 73-75ಕೋಟಿಯಷ್ಟು ಆದಾಯವನ್ನು ಗಳಿಸಲಿದ್ದಾರೆ. ದಿನವೊಂದಕ್ಕೆ ಒಂದು ಕೋಟಿ ಚಾರ್ಜ್ ಮಾಡುತ್ತಾರೆ. ಒಪ್ಪಂದ ಪ್ರಕಾರ ವಾರ್ಷಿಕ ಕನಿಷ್ಟ ಎರಡು ದಿನ ರೋಹಿತ್ ಶರ್ಮಾ ಅವರನ್ನು ಪ್ರಚಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕಿದೆ.

ಹುಬ್ಬಳ್ಳಿಯಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಹಿಟ್‌ಮ್ಯಾನ್‌ ರೋಹಿತ್

ಕೊಹ್ಲಿ ಹಾಗೂ ಧೋನಿ ಹಿಂದೆಯೇ ಇದ್ದಾರೆ ರೋಹಿತ್:

ಕೊಹ್ಲಿ ಹಾಗೂ ಧೋನಿ ಹಿಂದೆಯೇ ಇದ್ದಾರೆ ರೋಹಿತ್:

ವಿರಾಟ್ ಕೊಹ್ಲಿ 25 ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಧೋನಿ 12 ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಆದರೆ ಇವರಿಬ್ಬರು ಈ ಜಾಹೀರಾತಿನಿಂದ ರೊಹಿತ್ ಶರ್ಮಾಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.

ಮೌಲ್ಯ ಹೆಚ್ಚಳಕ್ಕೆ ಕಾರಣ:

ಮೌಲ್ಯ ಹೆಚ್ಚಳಕ್ಕೆ ಕಾರಣ:

ರೋಹಿತ್ ಶರ್ಮಾ ಮೈದಾನದಲ್ಲಿತೋರುತ್ತಿರುವ ಪ್ರದರ್ಶನವೇ ಈ ಪ್ರಮಾಣದಲ್ಲಿ ಮೌಲ್ಯ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ. ಕಳೆದ ವಿಶ್ವಕಪ್‌ನಲ್ಲಿ 5 ಶತಕ ಬಾರಿಸಿ ದಾಖಲೆ ಬರೆದಿದ್ದರು ಶರ್ಮಾ. ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಬಂದ ಪ್ರಥಮ ಪಂದ್ಯದಲ್ಲೇ ದ್ವಿಶತಕ ಬಾರಿಸಿ ಮಿಂಚಿದ್ದರು. ಇದು ಶರ್ಮಾ ಜಾಹೀರಾತು ಲೋಕದಲ್ಲಿ ಸಿಕ್ಸರ್ ಬಾರಿಸಲು ಕಾರಣವಾಗಿದೆ.

Story first published: Friday, November 29, 2019, 15:34 [IST]
Other articles published on Nov 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X