ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲ್ಯಾಂಡ್ ಟಿ20 ಸರಣಿ ಸೋತು ವಿಶ್ವದಾಖಲೆ ಕೈ ಚೆಲ್ಲಿದ ಭಾರತ!

ಸರಣಿ ಸೋತು ವಿಶ್ವದಾಖಲೆ ಕೈ ಚೆಲ್ಲಿದ ಭಾರತ! | Oneindia Kannada
Rohit Sharma & Co miss out on world record after T20 series loss

ನವದೆಹಲಿ, ಫೆಬ್ರವರಿ 11: ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಭಾನುವಾರ (ಫೆಬ್ರವರಿ 10) ನಡೆದ ಭಾರತ vs ನ್ಯೂಜಿಲ್ಯಾಂಡ್ ಮೂರನೇ ಟಿ20 ಪಂದ್ಯದಲ್ಲಿ ಭಾರತ ಕೇವಲ 4 ರನ್‌ಗಳಿಂದ ಸೋತಿತ್ತು. ಈ ಸೋಲಿನೊಂದಿಗೆ ರೋಹಿತ್ ಶರ್ಮಾ ಬಳಗ ವಿಶ್ವದಾಖಲೆಯೊಂದನ್ನೂ ಕೈತಪ್ಪಿಸಿಕೊಂಡಿದೆ.

ನ್ಯೂಜಿಲ್ಯಾಂಡ್ ಟಿ20 ಸರಣಿಯನ್ನು ಭಾರತ 2-1ರಿಂದ ಸೋತಿತು. ಒಂದು ವೇಳೆ ಸರಣಿ ಗೆದ್ದಿದ್ದರೆ ಸಾಲು ಸಾಲಾಗಿ ಅತ್ಯಧಿಕ ಟಿ20 ಸರಣಿಗಳನ್ನು ಗೆದ್ದ ದಾಖಲೆಗಾಗಿ ಭಾರತವೂ ಪಾಕಿಸ್ಥಾನ ತಂಡದೊಂದಿಗೆ ಗುರುತಿಸಿಕೊಳ್ಳುತ್ತಿತ್ತು. ಪಾಕಿಸ್ತಾನ ತಂಡ ಬೆನ್ನುಬೆನ್ನಿಗೆ ಒಟ್ಟು 11 ಟಿ20 ಸರಣಿಗಳನ್ನು ಗೆದ್ದು ಈ ಸಾಧನೆ ಮಾಡಿದೆ.

ಭಾರತ vs ನ್ಯೂಜಿಲ್ಯಾಂಡ್ ಟಿ20: ಎಂಎಸ್‌ ಧೋನಿ ಅಪರೂಪದ ದಾಖಲೆ ಭಾರತ vs ನ್ಯೂಜಿಲ್ಯಾಂಡ್ ಟಿ20: ಎಂಎಸ್‌ ಧೋನಿ ಅಪರೂಪದ ದಾಖಲೆ

ಕಳೆದ ಜುಲೈ 2017ರಿಂದ ಭಾರತ ಆಡಿದ ಟಿ20 ಸರಣಿಗಳಲ್ಲಿ ಶ್ರೀಲಂಕಾ ವಿರುದ್ಧ 1-0, ಆಸ್ಟ್ರೇಲಿಯಾ ವಿರುದ್ಧ 1-1ರ ಸಮಬಲ, ನ್ಯೂಜಿಲ್ಯಾಂಡ್ ವಿರುದ್ಧ 2-1ರ ಗೆಲುವು, ಶ್ರೀಲಂಕಾ ವಿರುದ್ಧ ತವರಿನಲ್ಲಿ 3-0ಯ ಗೆಲುವು, ದಕ್ಷಿಣ ಆಫ್ರಿಕಾದಲ್ಲಿ 2-1ರ ಜಯ, ನಿದಹಾಸ ಟ್ರೋಫಿ ಗೆಲುವು, ಐರ್ಲೆಂಡ್ 2-0 ಮತ್ತು ಇಂಗ್ಲೆಂಡ್ 2-1ರ ಮೇಲುಗೈ, ವೆಸ್ಟ್ ಇಂಡೀಸ್ ವೈಟ್ ವಾಷ್ 3-0ಯಿಂದ, ಆಸ್ಟ್ರೇಲಿಯಾ ವಿರುದ್ಧ 1-1ರ ಸಮಬಲ. ಹೀಗೆ ಒಟ್ಟಿನಲ್ಲಿ ಭಾರತ ಯಾವುದೇ ಟಿ20 ಸರಣಿಯಲ್ಲಿ ಸೋತಿರಲಿಲ್ಲ. ಆದರೆ ನ್ಯೂಜಿಲ್ಯಾಂಡ್ ಅಂತಿಮ ಪಂದ್ಯದಲ್ಲಿ ಕಾಲಿನ್ ಮುನ್ರೋ ಅವರ 72 ರನ್ ಭಾರತದ ಪಾಲಿಗೆ ದುಬಾರಿಯೆನಿಸಿತು.

ಹ್ಯಾಮಿಲ್ಟನ್, ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 4 ರನ್ ರೋಚಕ ಜಯ ಹ್ಯಾಮಿಲ್ಟನ್, ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 4 ರನ್ ರೋಚಕ ಜಯ

ಪಾಕಿಸ್ತಾನ ತಂಡ ಒಟ್ಟು 11 ಟಿ20 ಸರಣಿಗಳಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿತ್ತು. ಆದರೆ ಕಳೆದ ಭಾನುವಾರ (ಫೆಬ್ರವರಿ 3) ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 2-0ಯಿಂದ ಟಿ20 ಸರಣಿ ಕೈಚೆಲ್ಲಿಯಾಗಿತ್ತು. ಸರಣಿಯ ಕಡೆಯ ಪಂದ್ಯ ಪಾಕ್ ಗೆದ್ದಿತಾದರೂ ಸರಣಿ ಉಳಿಸಿಕೊಳ್ಳಲಾಗಿಲ್ಲ. ಅಂದ್ಹಾಗೆ ಪಾಕ್ ತಂಡ 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 1-2ರಿಂದ ಕಡೆಯ ಸಾರಿ ಟಿ20 ಸರಣಿ ಸೋತಿತ್ತು.

Story first published: Monday, February 11, 2019, 8:45 [IST]
Other articles published on Feb 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X