ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ಗೆ ಪರ್ಯಾಯ ಪದವೇ ಭಾರತದ ಈ ಆಟಗಾರ: ದಿನೇಶ್ ಕಾರ್ತಿಕ್ ಹೀಗೆ ಹೊಗಳಿದ್ದು ಯಾರನ್ನು!

Rohit Sharma and World Cups are synonymous says Dinesh Karthik ahead of T20 World Cup
ವಿಶ್ವಕಪ್ ನಲ್ಲಿ ಸಿಡಿಯೋ ಇಬ್ಬರು ಬ್ಯಾಟ್ಸ್ ಮನ್ ಬಗ್ಗೆ ಹೇಳಿದ DK | Oneindia Kannada

ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸದ್ಯ ಕಾಮೆಂಟೇಟರ್ ಆಗಿಯೂ ಖ್ಯಾತಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮಿ ಅಭಿಪ್ರಾಯಗಳನ್ನು ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕವೂ ದಿನೇಶ್ ಕಾರ್ತಿಕ್ ಆಗಾಗ ಸುದ್ದಿಯಲ್ಲಿರುತ್ತಾರೆ. ಈಗ ಟಿ20 ವಿಶ್ವಕಪ್‌ನ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕಾರಿಯಾಗಿದೆ. ಟೀಮ್ ಇಂಡಿಯಾದ ಓರ್ವ ಆಟಗಾರನನ್ನು ದಿನೇಶ್ ಕಾರ್ತಿಕ್ ಮುಕ್ತಕಂಠದಿಂದ ಹೊಗಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆತನ ಮೇಲೆ ವಿಶೇಷವಾದ ವಿಶ್ವಾಸವಿದೆ ಎಂದಿದ್ದಾರೆ ದಿನೇಶ್ ಕಾರ್ತಿಕ್.

ಈ ಬಾರಿಯ ಟಿ20 ವಿಶ್ವಕಪ್‌ ಭಾರತದಲ್ಲಿ ಆಯೋಜನೆಯಾಗಬೇಕಿತ್ತು. ಆದರೆ ಕೊರೊನಾವೈರಸ್‌ನ ಕಾರಣದಿಂದಾಗಿ ಈ ಟೂರ್ನಿಯನ್ನು ಯುಎಇ ಹಾಗೂ ಒಮಾನ್‌ನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಅಕ್ಟೋಬರ್ 17ರಿಂದ ಈ ಮಹತ್ವದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಈ ಚುಟುಕು ಮಹಾಸಮರಕ್ಕೂ ಮುನ್ನ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಆಟಗಾರನ ಬಗ್ಗೆ ಒ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲಿದ್ದಾರೆ ಟಿಮ್ ಡೇವಿಡ್

ರೋಹಿತ್ ಶರ್ಮಾ ವಿಶೇಷ ವಿಶ್ವಾಸ ವ್ಯಕ್ತೊಡಿಸಿದ ಡಿಕೆ: ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬಗ್ಗೆ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪರವಾಗಿ ಶರ್ಮಾ ಮಹತ್ವದ ಆಟವನ್ನು ಪ್ರದರ್ಶಿಸಲಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ದೊಡ್ಡ ವೇದಿಕೆಗಳಲ್ಲಿ ರೋಹಿತ್ ಶರ್ಮಾ ಭರವಸೆಯ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದು ಮುಂಬರುವ ಟಿ20 ವಿಶ್ವಕಪ್‌ನಲ್ಲಿಯೂ ಅದನ್ನು ಮುಂದುವರಿಸಲಿದ್ದಾರೆ ಎಂದಿದ್ದಾರೆ ದಿನೇಶ್ ಕಾರ್ತಿಕ್.

ಏಕದಿನ ವಿಶ್ವಕೊ್‌ನಲ್ಲಿ ಮಿಂಚಿದ್ದ ರೋಹಿತ್: ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕಳೆದ ಏಕದಿನ ವಿಶ್ವಕಪ್‌ನಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದರು. ಒಂದೇ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಐದು ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ ಎನಿಸಿದ್ದಾರೆ. ಶ್ರೀಲಂಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಶತಕ ಸಿಡಿಸಿದ್ದರು ಶರ್ಮಾ.

ಇಬ್ಬರು ಆಟಗಾರರ ಮೇಲೆ ನಿರೀಕ್ಷೆ ಎಂದ ದಿನೇಶ್ ಕಾರ್ತಿಕ್: ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ಮೂಲಕ ಭರ್ಜರಿ ಪ್ರದರ್ಶನದ ಭರವಸೆ ನಿರೀಕ್ಷಿಸಬಹುದಾದ ಆಟಗಾರರ ಬಗ್ಗೆ ದಿನೇಶ್ ಕಾರ್ತಿಕ್‌ಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ ಡಿಕೆ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ. ಒಂದು ಟೀಮ್ ಇಂಡಿಯಾದ ಆರಂಬಿಕ ಆಟಗಾರ ರೋಹಿತ್ ಶರ್ಮಾ ಆಗಿದ್ದರೆ ಮತ್ತೋರ್ವ ಆಸ್ಟ್ರೇಲಿಯಾದ ಆರಂಬಿಕ ಆಟಗಾರ ಡೇವಿಡ್ ವಾರ್ನರ್. "ಇಬ್ಬರು ಕೂಡ ಆರಂಭಿಕ ಆಟಗಾರರು. ಇಬ್ಬರೂ ಅದ್ಭುತ ಕ್ರಿಕೆಟಿಗರು. ಈ ಇಬ್ಬರ ಮೇಲೆ ನಾನು ಕೂಡಿಕೆ ಮಾಡಲು ಬಯಸುತ್ತೇನೆ. ಇಬ್ಬರು ಕೂಡ ರನ್‌ಗಳಿಸಲು ಸಾಕಷ್ಟು ಹಸಿವು ಹೊಂದಿದ್ದಾರೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ರೋಹಿತ್ ಶರ್ಮಾ ಹಾಗೂ ವಿಶ್ವಕಪ್ ಪರ್ಯಾಯ ಪದ: ಇನ್ನು ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅನುಭವಿ ರೋಹಿತ್ ಶರ್ಮಾ ಹಾಗೂ ವಿಶ್ವಕಪ್ ಎರಡು ಕೂಡ ಪರ್ಯಾಯ ಪದಗಳು ಎಂದು ಬಣ್ಣಿಸಿದ್ದಾರೆ. ಈ ಎರಡು ಕೂಡ ಒಂದನ್ನೊಂದು ಸಾಕಷ್ಟು ಇಷ್ಟಪಡುತ್ತದೆ. ಒಬ್ಬರಿಗೆ ಮತ್ತೊಬ್ಬರು ಗೆಲ್ಲಲು ಸಾಕಷ್ಟು ಸಹಾಯ ಮಾಡುತ್ತಾರೆ. ಭಾರತ ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದ್ದರೆ ರೋಹಿತ್ ಶರ್ಮಾ ಸಿಡಿಯಬೇಕಿದೆ" ಎಂದಿದ್ದಾರೆ ದಿನೇಶ್ ಕಾರ್ತಿಕ್. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತನ್ನ ಬದ್ಧ ಎದುರಾಳಿ ಪಾಕಿಸ್ತಾನ ತಂಡವನ್ನು ಸೂಪರ್ 12 ಹಂತದಲ್ಲಿ ಎದುರಿಸುವ ಮೂಲಕ ಟೂರ್ನಿಯನ್ನು ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 24 ರಂದು ನಡೆಯಲಿದೆ.

Story first published: Sunday, August 22, 2021, 20:20 [IST]
Other articles published on Aug 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X