ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: ಅಪರೂಪದ ವಿಶ್ವದಾಖಲೆಗಳ ಬರೆದ ರೋಹಿತ್ ಶರ್ಮಾ!

Rohit Sharma becomes 2nd Indian opener to achieve huge milestone

ರಾಂಚಿ, ಅಕ್ಟೋಬರ್ 19: ರೋಹಿತ್ ಶರ್ಮಾ ಭರ್ಜರಿ ಫಾರ್ಮ್ ಮುಂದುವರೆದಿದೆ. ರಾಂಚಿಯಲ್ಲಿ ಶನಿವಾರ (ಅಕ್ಟೋಬರ್ 19) ಆರಂಭವಾಗಿರುವ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಮತ್ತು ಕೊನೆಯ ಟೆಸ್ಟ್‌ನಲ್ಲೂ ರೋಹಿತ್ ಶತಕ ಬಾರಿಸಿದ್ದಾರೆ.

ಮೈದಾನಕ್ಕೆ ನುಗ್ಗಿದ ದಕ್ಷಿಣ ಆಫ್ರಿಕಾದ ಇಬ್ಬಿಬ್ಬರು ನಾಯಕರು: ವಿಡಿಯೋಮೈದಾನಕ್ಕೆ ನುಗ್ಗಿದ ದಕ್ಷಿಣ ಆಫ್ರಿಕಾದ ಇಬ್ಬಿಬ್ಬರು ನಾಯಕರು: ವಿಡಿಯೋ

ರಾಂಚಿಯಲ್ಲಿ ರೋಹಿತ್ ಬಾರಿಸಿದ್ದು 6ನೇ ಟೆಸ್ಟ್ ಶತಕ. ಇದೇ ಪಂದ್ಯದಲ್ಲಿ ಗಮನಾರ್ಹ ಸಂಖ್ಯೆಗಳ ಬೌಂಡರಿ, ಸಿಕ್ಸ್‌ ಕೂಡ ಬಾರಿಸಿದ ರೋಹಿತ್ ಒಂದಿಷ್ಟು ಅಪರೂಪದ ದಾಖಲೆಗಳಿಗೂ ಕಾರಣರಾಗಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
46115

ಮೊದಲನೇ ದಿನದಾಟದ ಅಂತ್ಯದ ವೇಳೆಗೆ ರೋಹಿತ್ ಶರ್ಮಾ ಶತಕ, ಅಜಿಂಕ್ಯ ರಹಾನೆ ಅರ್ಧಶತಕದೊಂದಿಗೆ ಕ್ರೀಸ್‌ನಲ್ಲಿದ್ದರು.

ಭಾರತದ 2ನೇ ಬ್ಯಾಟ್ಸ್‌ಮನ್

ಭಾರತದ 2ನೇ ಬ್ಯಾಟ್ಸ್‌ಮನ್

ಟೆಸ್ಟ್‌ ಸರಣಿಯೊಂದರಲ್ಲಿ 3 ಅಥವಾ ಹೆಚ್ಚು ಶತಕಗಳನ್ನು ಬಾರಿಸಿದ ಭಾರತದ 2ನೇ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಗುರುತಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಇದ್ದಾರೆ. ಫಾರ್ಮ್‌ನಲ್ಲಿ ಇಲ್ಲದ ಕೆಎಲ್ ರಾಹುಲ್ ಬದಲಿಗೆ ಆರಂಭಿಕರಾಗಿ ಬಂದಿರುವ ರೋಹಿತ್ ಅವಕಾಶವನ್ನು ಚೆನ್ನಾಗೇ ಬಳಸಿಕೊಳ್ಳುತ್ತಿದ್ದಾರೆ.

ಸರಣಿಯಲ್ಲಿ 3ನೇ ಶತಕ

ಸರಣಿಯಲ್ಲಿ 3ನೇ ಶತಕ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆರಂಭಿಕರಾಗಿ ಚೊಚ್ಚಲ ಬಾರಿಗೆ ಆಡಿದ್ದ ರೋಹಿತ್, ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ತೃತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ 164 ಎಸೆತಗಳಿಗೆ ಅಜೇಯ 117 ರನ್ ಬಾರಿಸಿದ್ದಾರೆ. ಇದರಲ್ಲಿ 14 ಬೌಂಡರಿ, 4 ಸಿಕ್ಸ್‌ಗಳು ಸೇರಿವೆ.

ಗವಾಸ್ಕರ್ 3 ಬಾರಿ ದಾಖಲೆ

ಗವಾಸ್ಕರ್ 3 ಬಾರಿ ದಾಖಲೆ

ಟೆಸ್ಟ್‌ನಲ್ಲಿ ಆರಂಭಿರಾಗಿ ಸರಣಿಯೊಂದರಲ್ಲಿ 3ಕ್ಕೂ ಹೆಚ್ಚು ಶತಕ ಬಾರಿಸಿದ ಸಾಧನೆ ಸಾಲಿನಲ್ಲಿ ಸುನಿಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಗವಾಸ್ಕರ್ ಈ ಸಾಧನೆಗಾಗಿ 3 ಬಾರಿ ಗುರುತಿಸಿಕೊಂಡಿದ್ದಾರೆ. ಗವಾಸ್ಕರ್, 1970-71ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ಇನ್ನಿಂಗ್ಸ್‌ಗಳಲ್ಲಿ 4 ಶತಕ, 1978-79ರಲ್ಲಿ ವಿಂಡೀಸ್ ವಿರುದ್ಧ 9 ಇನ್ನಿಂಗ್ಸ್‌ಗಳಲ್ಲಿ 4 ಶತಕ, 1977-78ರಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ಇನ್ನಿಂಗ್ಸ್‌ಗಳಲ್ಲಿ 3 ಶತಕ ಬಾರಿಸಿದ್ದರು.

ಅತ್ಯಧಿಕ ಸಿಕ್ಸ್‌ ಮೈಲಿಗಲ್ಲು

ಅತ್ಯಧಿಕ ಸಿಕ್ಸ್‌ ಮೈಲಿಗಲ್ಲು

ದಕ್ಷಿಣ ಆಫ್ರಿಕಾ ವಿರುದ್ಧದ ಇದೇ ಟೆಸ್ಟ್‌ ಸರಣಿಯಲ್ಲಿ ಅತ್ಯಧಿಕ ಸಿಕ್ಸ್‌ ಬಾರಿಸಿರುವ ಶರ್ಮಾ ಒಂದೇ ಟೆಸ್ಟ್‌ ಸರಣಿಯಲ್ಲಿ ಅತ್ಯಧಿಕ ಸಿಕ್ಸ್‌ ಬಾರಿಸಿದ (ಈವರೆಗೆ 16 ಸಿಕ್ಸ್‌ಗಳು) ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ ಶರ್ಮಾ ಟೆಸ್ಟ್‌ನಲ್ಲಿ 2000+ ರನ್ ಮೈಲಿಗಲ್ಲು ಕೂಡ ಸ್ಥಾಪಿಸಿದ್ದಾರೆ.

ಅತ್ಯಧಿಕ ಶತಕ ವಿಶ್ವದಾಖಲೆ

ಅತ್ಯಧಿಕ ಶತಕ ವಿಶ್ವದಾಖಲೆ

ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಶತಕ ಬಾರಿಸಿದ ಆರಂಭಿಕರಾಗಿ ರೋಹಿತ್ ಶರ್ಮಾ ವಿಶ್ವದಾಖಲೆಯೂ ನಿರ್ಮಿಸಿದ್ದಾರೆ. ಈ ಯಾದಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ (9 ಶತಕ-1998), ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (9 ಶತಕ-2005), ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (9 ಶತಕ-2016), ಭಾರತದ ರೋಹಿತ್ ಶರ್ಮಾ (9 ಶತಕ-2019) ಇದ್ದಾರೆ.

Story first published: Saturday, October 19, 2019, 23:25 [IST]
Other articles published on Oct 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X