ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಸಿಕ್ಸರ್ #200 ಮೈಲಿಗಲ್ಲು ದಾಟಿದ ರೋಹಿತ್ ಶರ್ಮ

Rohit Sharma Becomes Fourth Cricketer to Hit 200 Sixes in Tournament’s History

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ಇಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಐಪಿಎಲ್ 2020ರಲ್ಲಿ ದಾಖಲೆಗಳ ಬೆನ್ನು ಹತ್ತಿರುವ ರೋಹಿತ್ ಅವರು ಇಂದು ಐಪಿಎಲ್ ಇತಿಹಾಸದಲ್ಲಿ 200 ಸಿಕ್ಸರ್ ಸಿಡಿಸಿದ ದಿಗ್ಗಜ ಕ್ರಿಕೆಟರ್ ಗಳ ಸಾಲಿಗೆ ಸೇರ್ಪಡೆಗೊಂಡರು.

200 ಸಿಕ್ಸರ್ ಮೈಲಿಗಲ್ಲು ದಾಟಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಈ ದಾಖಲೆ ಸಾಧಿಸಿದ ಎರಡನೇ ಭಾರತೀಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳುಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ಐಪಿಎಲ್ ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟ್ಸ್ ಮನ್:
326: ಕ್ರಿಸ್ ಗೇಲ್
214: ಎಬಿ ಡಿ ವಿಲಿಯರ್ಸ್
212: ಎಂಎಸ್ ಧೋನಿ
200: ರೋಹಿತ್ ಶರ್ಮ
194: ಸುರೇಶ್ ರೈನಾ

ರೋಹಿತ್ ಶರ್ಮ ಅವರು ಈ ದಾಖಲೆಯನ್ನು ಮುಂಬೈ ಇನ್ನಿಂಗ್ಸ್ ನ 14ನೇ ಓವರ್ ನಲ್ಲಿ ಸಾಧಿಸಿದರು. ಕುಲದೀಪ್ ಯಾದವ್ ಎಸೆತವನ್ನು ಮುನ್ನುಗ್ಗಿ ಸಿಕ್ಸ್ ಎತ್ತಿದರು.

ಜಮೈಕಾದ ಕಿಂಗ್ ಗೇಲ್ ಅವರು ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಆಟಗಾರರಲ್ಲ್ದೆ, ಟ್ವೆಂಟಿ 20 ಕ್ರಿಕೆಟ್ ನಲ್ಲೂ ಕ್ರಿಸ್ ಗೇಲ್ ಬಾರಿಸಿದ ಸಿಕ್ಸರ್ ಗಳೇ ಎಲ್ಲರಿಗಿಂತ ಮುಂದಿದೆ.

ಐಪಿಎಲ್ 2020: ಅಂಕ ಪಟ್ಟಿ, ಆರೆಂಜ್, ಪರ್ಪಲ್ ಟೋಪಿ ರೇಸ್ ಯಾರು ಮುಂದೆ? ಐಪಿಎಲ್ 2020: ಅಂಕ ಪಟ್ಟಿ, ಆರೆಂಜ್, ಪರ್ಪಲ್ ಟೋಪಿ ರೇಸ್ ಯಾರು ಮುಂದೆ?

ಅತಿ ಹೆಚ್ಚು ಕ್ಯಾಚ್: ಅತಿ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಗಳ ಪೈಕಿ ಚೆನ್ನೈನ ಸುರೇಶ್ ರೈನಾ ಅಗ್ರಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿ 84 ಕ್ಯಾಚ್ ಹಿಡಿದಿರುವ ಆರ್ ಸಿಬಿಯ ಎಬಿ ಡಿ ವಿಲಿಯರ್ಸ್ ಇದ್ದಾರೆ. ಸದ್ಯ ಎರಡನೇ ಸ್ಥಾನಕ್ಕೇರಲು ರೋಹಿತ್ ಇನ್ನೊಂದು ಕ್ಯಾಚ್ ಹಿಡಿದರೆ ಸಾಕು.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಅತಿ ಹೆಚ್ಚು ರನ್: ಈ ಪಂದ್ಯಕ್ಕೂ ಮುನ್ನ 4910 ರನ್ ಗಳಿಸಿದ್ದ ರೋಹಿತ್ ಅವರು 5,000 ರನ್ ಪೂರೈಸಿ ಕೊಹ್ಲಿ, ರೈನಾ ಸಾಲಿಗೆ ಸೇರಲು 90 ರನ್ ಅಗತ್ಯವಿತ್ತು. ಆದರೆ, ಕೆಕೆಆರ್ ವಿರುದ್ಧ ಇಂದು 80ರನ್(54 ಎಸೆತ) ಗಳಿಸಿ ಔಟಾಗಿದ್ದಾರೆ. ಇನ್ನು 10 ರನ್ ಗಳಿಸಿದರೆ ಮತ್ತೊಂದು ಮೈಲಿಗಲ್ಲು ದಾಟಲಿದ್ದಾರೆ.

Story first published: Thursday, September 24, 2020, 10:23 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X