ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ದಾಖಲೆ ಬರೆದು ರೈನಾ, ಕೊಹ್ಲಿ ಜೊತೆ ಸೇರಿದ ರೋಹಿತ್ ಶರ್ಮಾ

Rohit Sharma becomes the 3rd player to Complete 5000 Runs In IPL

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 5000+ ರನ್ ಬಾರಿಸಿದ ಮೂರನೇ ಭಾರತದ ಬ್ಯಾಟ್ಸ್‌ಮನ್‌ ಆಗಿ ರೋಹಿತ್ ಗುರುತಿಸಿಕೊಂಡಿದ್ದಾರೆ. ಗುರುವಾರ (ಅಕ್ಟೋಬರ್ 1) ನಡೆದ ಐಪಿಎಲ್ 13ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಒಂಜಾಬ್ ವಿರುದ್ಧ ರೋಹಿತ್ ರೋಹಿತ್ ಈ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಐಪಿಎಲ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ ಟ್ವಿಟ್ಟರ್‌ನಲ್ಲಿ ಮನಗೆದ್ದ ಮಯಾಂತಿಐಪಿಎಲ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ ಟ್ವಿಟ್ಟರ್‌ನಲ್ಲಿ ಮನಗೆದ್ದ ಮಯಾಂತಿ

ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ನೀಡಿದರು. ಐಪಿಎಲ್‌ನಲ್ಲಿ 5000+ ರನ್ ಬಾರಿಸಲು ಕೇವಲ 2 ರನ್ ಬೇಕಿತ್ತು.

ಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ರೋಹಿತ್ ನಿರ್ಮಿಸಿದ ದಾಖಲೆ ಮತ್ತು ಇದೇ ದಾಖಲೆ ನಿರ್ಮಿಸಿರುವ ಇತರ ಆಟಗಾರರ ಸಂಪೂರ್ಣ ಮಾಹಿತಿ ಇಲ್ಲಿದೆ.

187 ಇನ್ನಿಂಗ್ಸ್‌ಗಳಲ್ಲಿ ದಾಖಲೆ

187 ಇನ್ನಿಂಗ್ಸ್‌ಗಳಲ್ಲಿ ದಾಖಲೆ

ಐಪಿಎಲ್‌ನಲ್ಲಿ 187 ಇನ್ನಿಂಗ್ಸ್‌ಗಳನ್ನು ಆಡಿರುವ ರೋಹಿತ್ 5000 ರನ್ ಪೂರೈಸಿದ್ದಾರೆ. ಇದರಲ್ಲಿ 1 ಶತಕ ಮತ್ತು 37 ಅರ್ಧ ಶತಕಗಳು ಸೇರಿವೆ. ಐಪಿಎಲ್‌ನಲ್ಲಿ ರೋಹಿತ್ ಬಾರಿಸಿದ ಅತ್ಯಧಿಕ ವೈಯಕ್ತಿಕ ರನ್ ಎಂದರೆ 109 ರನ್‌.

ಅಗ್ರ ಸ್ಥಾನದಲ್ಲಿ ಕೊಹ್ಲಿ

ಅಗ್ರ ಸ್ಥಾನದಲ್ಲಿ ಕೊಹ್ಲಿ

ಐಪಿಎಲ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರಾಟ್ ಕೊಹ್ಲಿ ಇದ್ದಾರೆ. ಕೊಹ್ಲಿ 172 ಇನ್ನಿಂಗ್ಸ್‌ಗಳಲ್ಲಿ 5430 ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕ, 36 ಅರ್ಧ ಶತಕಗಳು ಸೇರಿವೆ. 113 ಕೊಹ್ಲಿ ಬಾರಿಸಿರುವ ಅತ್ಯಧಿಕ ರನ್.

ರೈನಾಗೆ ದ್ವಿತೀಯ ಸ್ಥಾನ

ರೈನಾಗೆ ದ್ವಿತೀಯ ಸ್ಥಾನ

ಐಪಿಎಲ್ 5000+ ರನ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ ದ್ವಿತೀಯ ಸ್ಥಾನದಲ್ಲಿದ್ದಾರೆ. 189 ಇನ್ನಿಂಗ್ಸ್‌ಗಳನ್ನಾಡಿರುವ ರೈನಾ 5368 ರನ್ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ರೈನಾ ಆಡುತ್ತಿಲ್ಲವಾದ್ದರಿಂದ ರೈನಾ ಹಿಂದಿಕ್ಕಲು ರೋಹಿತ್‌ಗೆ ಅವಕಾಶವಿದೆ.

ಮುಂಬೈಗೆ ಭರ್ಜರಿ ಜಯ

ಮುಂಬೈಗೆ ಭರ್ಜರಿ ಜಯ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ತಂಡ, ರೋಹಿತ್ ಶರ್ಮಾ 70 (45 ಎಸೆತ), ಕೀರನ್ ಪೊಲಾರ್ಡ್ 47 (20 ಎಸೆತ), ಹಾರ್ದಿಕ್ ಪಾಂಡ್ಯ 30 (11 ಎಸೆತ) ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 191 ರನ್ ಗಳಿಸಿತ್ತು. ಪಂಜಾಬ್‌ ತಂಡ 20 ಓವರ್‌ಗೆ 8 ವಿಕೆಟ್ ಕಳೆದು 143 ರನ್ ಪೇರಿಸುವುದರೊಂದಿಗೆ 48 ರನ್‌ಗಳ ಸೋಲನುಭವಿಸಿತು.

Story first published: Friday, October 2, 2020, 1:49 [IST]
Other articles published on Oct 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X