ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನದಲ್ಲಿ ರೋಹಿತ್ 200+ ಸಿಕ್ಸ್: ಹಿಟ್‌ಮ್ಯಾನ್ ಆಡಿದ್ರೆ ಗೆಲುವು ಫಿಕ್ಸ್?!

Rohit Sharma becomes the seventh to hit 200 sixes in ODIs

ತಿರುವನಂತಪುರಂ, ನವೆಂಬರ್ 1: ಕೇರಳದ ತಿರುವನಂತಪುರಂನಲ್ಲಿ ನಡೆದ ವೆಸ್ಟ್ ಇಂಡೀಸ್-ಭಾರತ 5ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ ಉಪನಾಯಕ ರೋಹಿತ್ ಶರ್ಮಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ರೋಹಿತ್ 200+ ಸಿಕ್ಸ್ ಬಾರಿಸಿದ ವಿಶ್ವದ ಏಳನೇ ಆಟಗಾರನಾಗಿ, ಭಾರತದ ಎರಡನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ತಂಡದ ಮೆನುವಿನಿಂದ ಬೀಫ್ ತೆಗೆಯಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿತಂಡದ ಮೆನುವಿನಿಂದ ಬೀಫ್ ತೆಗೆಯಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ

ಭಾರತದ ಆರಂಭಿಕ ಆಟಗಾರರಾಗಿರುವ ರೋಹಿತ್, ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ (ನವೆಂಬರ್ 1) ನಡೆದ ಕೊನೆಯ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಅವರ 11ನೇ ಓವರ್ ನಲ್ಲಿ ಸಿಕ್ಸ್ ಬಾರಿಸಿ ಏಕದಿನ ಕ್ರಿಕೆಟ್ ನಲ್ಲಿ 200+ ಸಿಕ್ಸ್ ಬಾರಿಸಿದ ವಿಶ್ವದ 7ನೇ ಆಟಗಾರರಾಗಿ ಮಿಂಚಿದರು.

ಜಾರ್ಜ್ ಬೇಲಿ ಕ್ರೀಸ್ ನಲ್ಲಿ ನಿಂತ ರೀತಿ ನೋಡಿದರೆ ಹುಬ್ಬೇರುತ್ತೆ!ಜಾರ್ಜ್ ಬೇಲಿ ಕ್ರೀಸ್ ನಲ್ಲಿ ನಿಂತ ರೀತಿ ನೋಡಿದರೆ ಹುಬ್ಬೇರುತ್ತೆ!

ಈ ಪಂದ್ಯದಲ್ಲಿ ರೋಹಿತ್ 4 ಸಿಕ್ಸ, 5 ಬೌಂಡರಿ ಬಾರಿಸಿದ್ದರು. ಭಾರತ 9 ವಿಕೆಟ್ ಜಯ ಸಾಧಿಸುವುದರೊಂದಿಗೆ ಐದು ಪಂದ್ಯಗಳ ಈ ಏಕದಿನ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿತು. ರೋಹಿತ್ ಸಾಧನೆ ಜೊತೆಗೆ ಇನ್ನೊಂದಿಷ್ಟು ಕುತೂಹಲಕಾರಿ ಅಂಶಗಳು ಇಲ್ಲಿವೆ.

9 ವಿಕೆಟ್ ಸುಲಭ ಜಯ

ಗುರುವಾರ (ನ. 1) ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವೆಸ್ಟ್ ಇಂಡೀಸ್ ಸಾಲು ಸಾಲಾಗಿ ವಿಕೆಟ್ ಕಳೆದುಕೊಳ್ಳುತ್ತಾ ಬಂತು. ಜೇಸನ್ ಹೋಲ್ಡರ್ 25 ರನ್ ಗಳಿಸಿದ್ದೇ ಹೆಚ್ಚೆನಿಸಿತು. ಇಂಡೀಸ್ 31.5 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 104 ರನ್ ಪೇರಿಸಿತ್ತು. ಭಾರತ ಭಾರತ 14.5 ಓವರ್ ಗೆ 1 ವಿಕೆಟ್ ಕಳೆದು 105 ರನ್ ನೊಂದಿಗೆ ಗೆಲುವನ್ನಾಚರಿಸಿತು.

ಧೋನಿ ಮೊದಲಿಗ

ಭಾರತ ಪರ 200+ ಸಿಕ್ಸ್ ಬಾರಿಸಿದವರಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮೊದಲನೆಯವರು. ಈ ಯಾದಿಯಲ್ಲಿ ಪಾಕ್ ಆಟಗಾರ ಶಾಹಿದ್ ಅಫ್ರಿದಿ (351 ಸಿಕ್ಸ್), ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್-275), ಸನತ್ ಜಯಸೂರ್ಯ (ಶ್ರೀಲಂಕಾ-270) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಇನ್ನುಳಿದಂತೆ ಧೋನಿ (218), ಆಫ್ರಿಕಾದ ಎಬಿ ಡಿವಿಲಿಯರ್ಸ್ (204), ರೋಹಿತ್ (202), ನ್ಯೂಜಿಲ್ಯಾಂಡ್ ನ ಮೆಕಲಮ್ (200) ಇದ್ದಾರೆ.

37ನೇ ಏಕದಿನ ಅರ್ಧಶತಕ

ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 56 ಎಸೆತಗಳಿಗೆ 63 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ 37ನೇ ಏಕದಿನ ಅರ್ಧಶತಕ ಸಾಧನೆಯನ್ನು ಮಾಡಿದರು. ಏಕದಿನ ರ್ಯಾಂಕಿಂಗ್ ನಲ್ಲಿ ಕೊಹ್ಲಿ ಬಳಿಕ ದ್ವಿತೀಯ ಸ್ಥಾನದಲ್ಲಿರುವ ರೋಹಿತ್, 7,454 ರನ್ ಗಳಿಸಿದ್ದಾರೆ.

ಭಾರತ ಎಂದು ಕೂಗಿ

ಅಕ್ಟೋಬರ್ 29ರಂದು ಮುಂಬೈಯಲ್ಲಿ ನಡೆದಿದ್ದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ದಿಕೊಂಡಿತ್ತು. ರೋಹಿತ್ 162 ರನ್ ಚಚ್ಚಿದ್ದರು. ಮತ್ತೆ ಭಾರತ ಫೀಲ್ಡಿಂಗ್ ಗೆ ಇಳಿಯುವ ವೇಳೆ ಪ್ರೇಕ್ಷಕರು 'ರೋಹಿತ್ ರೋಹಿತ್' ಎಂದು ಕೂಗುತ್ತಿದ್ದುದು ಜೋರಾಗಿ ಕೇಳಿಸುತ್ತಿತ್ತು. ಇದನ್ನು ಕೇಳಿಸಿಕೊಂಡ ರೋಹಿತ್ 'ಇಂಡಿಯಾ' ಎಂದು ಕೂಗಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡು ಅಭಿಮಾನಿಗಳ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದರು. ಈ ಪಂದ್ಯದಲ್ಲಿ ಭಾರತ 224 ರನ್ ಭರ್ಜರಿ ಗೆಲುವನ್ನಾಚರಿಸಿತ್ತು.

ಅಚ್ಚರಿಯೂ, ಕಾಕತಾಳೀಯವೂ!

ವಿಂಡೀಸ್ ವಿರುದ್ಧ ಈ ಏಕದಿನ ಸರಣಿಯ ಅಂಕಿ ಅಂಶಗಳು ರೋಹಿತ್ ಪ್ರದರ್ಶನ ಮತ್ತು ಗೆಲುವಿಗೆ ತಳುಕು ಹಾಕುತ್ತವೆ. ಇದು ಅಚ್ಚರಿಯೂ ಮೂಡಿಸಿದೆ. ಮೊದಲ ಪಂದ್ಯದಲ್ಲಿ ರೋಹಿತ್ 152 ರನ್ ಬಾರಿಸಿದ್ದರು. ಇದರಲ್ಲಿ ಭಾರತ 8 ವಿಕೆಟ್ ಜಯ ಗಳಿಸಿತ್ತು. ದ್ವಿತೀಯ ಪಂದ್ಯದಲ್ಲಿ ರೋಹಿತ್ 4ಕ್ಕೆ ಔಟಾಗಿದ್ದರು; ಈ ಪಂದ್ಯ ಟೈ ಎನಿಸಿತ್ತು. ಮೂರನೇ ಪಂದ್ಯದಲ್ಲಿ ಶರ್ಮಾ ಬರೀ 8 ರನ್ ಗಳಿಸಿದ್ದರು. ಇದಲ್ಲಿ ಭಾರತ 43 ರನ್ ಸೋಲನುಭವಿಸಿತ್ತು. ನಾಲ್ಕನೇ ಪಂದ್ಯದಲ್ಲಿ ರೋಹಿತ್ 162 ರನ್ ಸೇರಿಸಿದ್ದರು; ಇಂಡೀಯ 224 ರನ್ ಭರ್ಜರಿ ಗೆಲುವನ್ನಾಚರಿಸಿತ್ತು. ಕೊನೆಯ ಪಂದ್ಯದಲ್ಲಿ ರೋಹಿತ್ ಅಜೇಯ 63 ರನ್ ಪೇರಿಸಿದ್ದರು; ಭಾರತ 9 ವಿಕೆಟ್ ಜಯಭೇರಿ ಬಾರಿಸಿದೆ!

Story first published: Thursday, November 1, 2018, 18:39 [IST]
Other articles published on Nov 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X