ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗಿಂತ ರೋಹಿತ್ ಉತ್ತಮ ನಾಯಕ ಎಂದ ಪಾರ್ಥೀವ್ ಪಟೇಲ್

Rohit Sharma can read game better, take better decisions: Parthiv Patel

ಹಿರಿಯ ಆಟಗಾರ ಪಾರ್ಥೀವ್ ಪಟೇಲ್ ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹಾಗೂ ಆಟವನ್ನು ಅರ್ಥೈಸಿಕೊಳ್ಳುವುದರಲ್ಲಿ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಒಂದು ಕೈ ಮೇಲಿದ್ದಾರೆ ಎಂದು ಪಾರ್ಥೀವ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿ ಮತ್ತೊಂದು ಸಂಗತಿಯೇನೆಂದರೆ ಪಾರ್ಥೀವ್ ಪಟೇಲ್ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡದ ಸದಸ್ಯರಾಗಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಮುನ್ನಡೆಸುತ್ತಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಉಪನಾಯಕನಾಗಿದ್ದಾರೆ. ಇತ್ತೀಚೆಗೆ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ನಾಯಕತ್ವ ವಿಭಜನೆಯ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.

ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್

ಸ್ಟಾರ್ ಸ್ಪೋಟ್ಸ್‌ನ ಕ್ರಕೆಟ್ ಕನೆಲ್ಟೆಡ್ ಕಾರ್ಯಕ್ರಮದಲ್ಲಿ ಪಾರ್ಥೀವ್ ಪಟೇಲ್ ಮಾತನಾಡುತ್ತಾ "ಮುಖ್ಯವಾದ ಸಂಗತಿಯೇನೆಂದರೆ ಯಾರು ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯಾರು ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ? ಒತ್ತಡದ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಲ್ಳುವ ಮೂಲಕ ತಂಡದ ಗೆಲುವಿಗೆ ಯಾರು ಕಾರಣವಾಗುತ್ತಾರೆ ಎಂಬುದು ಮುಖ್ಯವಾಗುತ್ತದೆ. ಈ ವಿಚಾರಗಳಲ್ಲಿ ರೋಹಿತ್ ಶರ್ಮಾ ಸ್ವಲ್ಪ ಮಟ್ಟಿಗೆ ಮೇಲಿದ್ದಾರೆ" ಎಂದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವೀ ನಾಯಕ ಎನಿಸಿದ್ದಾರೆ. 55 ಟೆಸ್ಟ್ ಪಂದ್ಯಗಳಲ್ಲಿ 33 ಗೆಲುವು ಸಾಧಿಸಿದ್ದಾರೆ. 89 ಏಕದಿನ ಪಂದ್ಯಗಳಲ್ಲಿ 62 ಗೆಲುವು ಸಾಧಿಸಿದೆ ಹಾಗೂ 37 ಟಿ20 ಪಂದ್ಯಗಳಲ್ಲಿ 22ರಲ್ಲಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಹತ್ತು ಏಕದಿನ ಹಾಗೂ 20 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು ಕ್ರಮವಾಗಿ 8 ಹಾಗೂ 16 ಗೆಲುವು ಸಾಧಿಸಿದ್ದಾರೆ.

ಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆ

ಇನ್ನು ಐಪಿಎಲ್‌ನಲ್ಲಿ ರೋಹಿತ್ ಶರ್ಮಾ 2013ರ ಮಧ್ಯಭಾಗದಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅದೇ ವರ್ಷ ಮೊದಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಮುಂಬೈ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ 2015, 2017, 2019 ಹಾಗೂ 2020ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಆದರೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು 8 ಆವೃತ್ತಿಗಳಲ್ಲಿ ಮುನ್ನಡೆಸಿದ್ದು ಒಂದು ಬಾರಿಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

Story first published: Monday, November 23, 2020, 22:49 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X