ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಗೆದ್ದಿರುವುದೆಷ್ಟು, ಸೋತಿರುದೆಷ್ಟು?

 Rohit Sharma captaincy record

ಬೆಂಗಳೂರು, ಸೆಪ್ಟೆಂಬರ್ 15: ಇಂದಿನಿಂದ (ಸೆಪ್ಟೆಂಬರ್ 15) ರಿಂದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಯುಎಇಯಲ್ಲಿ ಪ್ರಾರಂಭವಾಗುತ್ತಿದೆ. ಟೂರ್ನಿಯ ಫೇವರೇಟ್ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನೆಡೆಸಲಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ನಾಯಕ ವಿರಾಟ್ ಕೊಹ್ಲಿಗೆ ಈ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಇಂಗ್ಲೆಂಡ್ ಸರಣಿಯಲ್ಲಿ ಇಲ್ಲದಿದ್ದ ರೋಹಿತ್ ಶರ್ಮಾಗೆ ಈ ಸರಣಿಯಲ್ಲಿ ನಾಯಕತ್ವ ವಹಿಸುವ ಅವಕಾಶ ದೊರೆತಿದೆ.

ಇಂತಹಾ ಪ್ರಮುಖ ಸರಣಿ ಆಡಬೇಕಾದ ಸಂಧರ್ಭದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್‌ಗೆ ನಾಯಕತ್ವ ವಹಿಸಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ರೋಹಿತ್ ನಾಯಕತ್ವದಲ್ಲಿ ಸರಣಿ ಆಡುತ್ತಿರುವುದು ಇದು ಮೊದಲೇನಲ್ಲ.

ಈ ಮುಂಚೆಯೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಕೆಲವು ಸರಣಿಗಳನ್ನು ಆಡಿದೆ. ಹಾಗೂ ಗೆಲುವು ಸಾಧಿಸಿದೆ ಕೂಡಾ. ಎರಡು ಸರಣಿಗಳನ್ನು ಗೆದ್ದುಕೊಟ್ಟ ಉತ್ತಮ ರೆಕಾರ್ಡ್‌ ರೋಹಿತ್ ಬೆನ್ನಿಗಿದೆ. ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಿದೆ ಎರಡೂ ಸರಣಿಯನ್ನು ಗೆದ್ದಿದ್ದಾರೆ ಇದು ಗೆದ್ದರೆ ಮೂರನೇ ಸರಣಿ ಗೆದ್ದಂತಾಗುತ್ತದೆ.

ರೋಹಿತ್ ಶರ್ಮಾ 2017ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗೆ ನಾಯಕರಾಗಿ ಆಯ್ಕೆ ಆಗಿದ್ದರು. ಆಗಲೂ ಸಹ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಲುವಾಗಿ ರೋಹಿತ್ ಅವರನ್ನು ನಾಯರನ್ನಾಗಿ ಮಾಡಲಾಗಿತ್ತು.

ಆಗ ಎರಡೂ ಸರಣಿಯನ್ನು ಭರ್ಜರಿಯಾಗಿ ರೋಹಿತ್ ಶರ್ಮಾ ಗೆದ್ದಿದ್ದರು. ಅಷ್ಟೆ ಅಲ್ಲದೆ ನಾಯಕಾರಿದ್ದಾಗಲೇ ಒಂದು ದ್ವಿಶಕವನ್ನೂ ರೋಹಿತ್ ಭಾರಿಸಿದ್ದರು.

ನಾಯಕನಾಗಿ ರೋಹಿತ್ ಶರ್ಮಾ ಬ್ಯಾಟಿಂಗ್ ಸರಾಸರಿ ಅತ್ಯುತ್ತಮವಾಗಿದೆ. ನಾಯಕರಾಗಿ ಆಡಿದ ಮೂರು ಏಕದಿನ ಪಂದ್ಯದಲ್ಲಿ 217 ರನ್ ಗಳಿಸಿರುವ ರೋಹಿತ್ ಶರ್ಮಾ ಅವರು ಬರೋಬ್ಬರಿ 108.50 ಸರಾಸರಿ ಹೊಂದಿದ್ದಾರೆ.

Story first published: Saturday, September 15, 2018, 16:14 [IST]
Other articles published on Sep 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X