ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಿಮ ಏಕದಿನ ಪಂದ್ಯ; 22 ವರ್ಷಗಳ ದಾಖಲೆ ಮುರಿದ ರೋಹಿತ್ ಶರ್ಮಾ

ind vs wi 3rd odi | Rohit Sharma nine runs shy of breaking Sanath Jayasuriya’s 22-year-old record
Rohit Sharma ends year on a high with another world record

ಟೀಮ್ ಇಂಡಿಯಾ ಆರಂಭಿಕ ಆಟಗಾರರ ರೋಹಿತ್ ಶರ್ಮಾ 22 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. ಈ ಮೂಲಕ ಈ ವರ್ಷವನ್ನು ಮತ್ತಷ್ಟು ಸ್ಮರಣೀಯವಾಗಿಸಿದ್ದಾರೆ. 2019ರ ಕ್ಯಾಲೆಂಡರ್ ವರ್ಷದುದ್ದಕ್ಕೂ ಅತ್ಯುತ್ತಮ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ ಅಂತಿಮ ಪಂದ್ಯದಲ್ಲೂ ಮಿಂಚಿ ತಂಡಕ್ಕೆ ಆಸರೆಯಾಗಿದ್ದಾರೆ.

ರೋಹಿತ್ ಶರ್ಮಾ ಕಟಕ್ ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ 63 ಎಸೆತಗಳನ್ನು ಎದುರಿಸಿ 63 ರನ್ ಬಾರಿಸಿದ್ದಾರೆ. ಎರಡೂ ತಂಡಗಳಿಗೂ ಸರಣಿ ಗೆಲ್ಲಲು ಈ ಪಂದ್ಯ ಮಹತ್ವದ್ದಾಗಿದೆ. ವೆಸ್ಟ್ ಇಂಡೀಸ್‌ ಈ ಪಂದ್ಯದಲ್ಲಿ 315 ರನ್ ಗಳಿಸಿ ಟೀಮ್ ಇಂಡಿಯಾಗೆ ದೊಡ್ಡ ಗುರಿಯನ್ನು ನೀಡಿದೆ. ಈ ಗುರಿಯನ್ನು ಟೀಮ್ ಇಂಡಿಯಾ ದಿಟ್ಟವಾಗಿಯೇ ಬೆನ್ನಟ್ಟಿದೆ.

ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ದಶಕದ ಟಾಪ್-5 ಬ್ಯಾಟ್ಸ್‌ಮನ್‌ಗಳು ಯಾರು!ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ದಶಕದ ಟಾಪ್-5 ಬ್ಯಾಟ್ಸ್‌ಮನ್‌ಗಳು ಯಾರು!

ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 9 ರನ್ ಗಳಿಸಿದ ವೇಳೆ ಈ ದಾಖಲೆಯನ್ನು ಮಾಡಿದ್ದಾರೆ. ಅದು 22 ವರ್ಷಗಳ ಹಿಂದೆ ಶ್ರೀಲಂಕಾದ ಲೆಜೆಂಡರಿ ಆಟಗಾರ ಸನತ್ ಜಯಸೂರ್ಯ ಮಾಡಿದ ದಾಖಲೆಯಾಗಿದೆ. ಆರಂಭಿಕನಾಗಿ ವರ್ಷವೊಂದರಲ್ಲಿ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಸನತ್ ಜಯಸೂರ್ಯ 2379 ರನ್ ದಾಖಲಿಸಿದ್ದು ಇಲ್ಲಿಯವರೆಗೆ ಇದ್ದ ದಾಖಲೆಯಾಗಿದ್ದು. ಆದರೆ ಈ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಈ ವರ್ಷದಲ್ಲಿ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ 7 ಶತಕಗಳನ್ನು ಬಾರಿಸಿದ ಸಾಧನೆಯನ್ನೂ ಮಾಡಿದ್ದಾರೆ. ಇದು ಕ್ಯಾಲೆಂಡರ್‌ ವರ್ಷವೊಂದರಲ್ಲಿ ಬಾರಿಸಿದ ಎರಡನೇ ಅತಿ ಹೆಚ್ಚು ಶತಕಗಳಾಗಿದೆ. ಸಚಿನ್ ತೆಂಡೂಲ್ಕರ್ 1998ರಲ್ಲಿ 9 ಶತಕ ಬಾರಿಸಿರುವುದು ದಾಖಲೆಯಾಗಿದೆ. ಸೌರವ್ ಗಂಗೂಲಿ(2000 ಇಸವಿ) ಡೇವಿಡ್ ವಾರ್ನರ್(2016) ರಲ್ಲಿ ತಲಾ 7 ಶತಕ ಬಾರಿಸಿ ರೋಹಿತ್ ಜೊತೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

Story first published: Sunday, December 22, 2019, 20:34 [IST]
Other articles published on Dec 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X