ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿಯಾಯ್ತಾ ಟೀಮ್ ಇಂಡಿಯಾದಲ್ಲಿ ಆಟಗಾರರ ಬದಲಾವಣೆ?: ನಾಯಕ ರೋಹಿತ್ ಕೊಟ್ರು ಬಲವಾದ ಸಮರ್ಥನೆ!

Rohit Sharma Want explain the reason for Indias Squad Rotation he said it Create Bench Strength
ಗೆದ್ದಿದ್ದೇ ತಡ...Rohit Sharma ಕ್ಯಾಪ್ಟನ್ಸ್ ಮೇಲೆ ಕಣ್ಣಿಟ್ಟ Hardik Pandya *Cricket | Oneindia Kannada

ಕಳೆದ ಕೆಲ ತಿಂಗಳಿನಲ್ಲಿ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಅನೇಕ ಪ್ರಯೋಗಗಳು ನಡೆದಿದೆ. ಟಿ20 ವಿಶ್ವಕಪ್‌ನ ದೃಷ್ಟಿಯಿಂದ ಕೆಲವೊಂದು ಪ್ರಯೋಗಗಳು ಅನಿವಾರ್ಯವಾಗಿದ್ದರೂ ಅನೇಕ ಬಾರಿ ಭಾರತ ತಂಡದಲ್ಲಿ ಅಗತ್ಯಕ್ಕಿಂತ ಹೆಚ್ಚು ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂಬ ಭಾವನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಇಂಥಾ ಪ್ರಯೋಗಗಳು ಕೆಲ ಆಟಗಾರರ ಉತ್ತಮ ಫಾರ್ಮ್‌ ಮೇಲೆಯೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಆದರೆ ಈ ಅಭಿಪ್ರಾಯಗಳಿಗೆ ಸಂಬಂದಿಸಿದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು ಯಾವ ಕಾರಣಕ್ಕಾಗಿ ಇಷ್ಟು ಪ್ರಮಾಣದಲ್ಲಿ ಬದಲಾವಣೆ ಮಾಡಲಾಯಿತು ಎಂಬುದಕ್ಕೆ ಉತ್ತರಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿದ್ದ ಪ್ರಶ್ನೆಗಳಿಗೆ ನಾಯಕ ರೋಹಿತ್ ಶರ್ಮಾ ಸಮರ್ಥನೆಯನ್ನು ನೀಡಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರ

ಆಟಗಾರರ ಬದಲಾವಣೆ ಅಗತ್ಯವಾಗಿತ್ತು

ಆಟಗಾರರ ಬದಲಾವಣೆ ಅಗತ್ಯವಾಗಿತ್ತು

ಕಳೆದ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಲೀಗ್ ಹಂತದಿಂದಲೇ ಹೊರಬಿದ್ದ ಬಳಿಕ ತಂಡದಲ್ಲಿ ಪ್ರಯೋಗಗಳನ್ನು ಮಾಡಲು ಆರಂಭಿಸಲಾಗಿತ್ತು. ಆಟಗಾರರು ಗಾಯಗೊಳ್ಳುವುದು, ಆಟಗಾರರ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಕೂಡ ಇದು ತಂಡದಲ್ಲಿ ನಡೆಯಿತು. ಇದಕ್ಕೆ ನಾಯಕ ರೋಹಿತ್ ಶರ್ಮಾ "ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಹಾಗಾಗಿ ಆಟಗಾರರು ಗಾಯಗೊಳ್ಳುವುದು, ಕೆಲಸದ ಒತ್ತಡಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಹಾಗಾಗಿ ತಂಡದಲ್ಲಿ ಆಟಗಾರರ ಬದಲಾವಣೆಗಳು ಅಗತ್ಯವಾಗಿದೆ" ಎಂದಿದ್ದಾರೆ ರೋಹಿತ್ ಶರ್ಮಾ.

ಬೆಂಚ್ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ

ಬೆಂಚ್ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ

ಇನ್ನು ಈ ರೀತಿ ತಂಡದಲ್ಲಿ ಆಟಗಾರರ ಬದಲಾವಣೆಯಿಂದ ತಂಡಕ್ಕೆ ಹೆಚ್ಚಿನ ಉಪಯೋಗವಾಗಿದ್ದು ಭವಿಷ್ಯದ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ ಎಂದು ರೋಹಿತ್ ಶರ್ಮಾ ಸಮರ್ಥನೆಯನ್ನು ನೀಡಿದ್ದಾರೆ. "ಹೀಗೆ ಆಟಗಾರರ ಬದಲಾವಣೆಯಿಂದ ನಮ್ಮಲ್ಲಿ ಬೆಂಚ್ ಸ್ಟ್ರೆಂತ್ ಹೆಚ್ಚಾಗಿದಗ್ದು ಆಟಗಾರರು ನೇರವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಸಿದ್ಧವಾಗಿದ್ದಾರೆ. ನಾವು ಬೆಂತ್ ಸಾಮರ್ಥ್ಯವನ್ನು ಹೆಚ್ಚಿಸುವ ಬಲಗೊಳಿಸುವ ಪ್ರಯತ್ನ ನಡೆಸಿದ್ದೇವೆ. ಉತ್ತಮ ಆಟಗಾರರ ಕೈಯಲ್ಲಿ ಭಾರತ ತಂಡದ ಭವಿಷ್ಯವನ್ನು ನೀಡುವುದು ನಮ್ಮ ಕರ್ತವ್ಯ" ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಂಡದಲ್ಲಿನ ಆಟಗಾರರ ಬದಲಾವಣೆ ವಿಚಾರವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸತತ ಸೋಲಿಗೆ ಕಾರಣ ಏನು? ಪಾಕ್ ಕ್ರಿಕೆಟಿಗನ ಉತ್ತರ

ಭಾರತದ ಮುಂದಿದೆ ಎರಡು ದೊಡ್ಡ ಸವಾಲುಗಳು

ಭಾರತದ ಮುಂದಿದೆ ಎರಡು ದೊಡ್ಡ ಸವಾಲುಗಳು

ಇದೀಗ ಭಾರತ ತಂಡದ ಮುಂದೆ ಎರಡು ದೊಡ್ಡ ಸವಾಲುಗಳಿದೆ. ಏಷ್ಯಾ ಕಪ್ ಟೂರ್ನಿ ಹಾಗೂ ವಿಶ್ವಕಪ್ ಟೂರ್ನಿಗಳು ಮುಂದಿನ ಆರಂಭವಾಗಲಿದೆ. ಈ ತಿಂಗಳಾಂತ್ಯದಲ್ಲಿಯೇ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು ಈಗಾಗಲೇ ತಂಡವನ್ನು ಕೂಡ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗಲಿದ್ದು ಭಾರತ ಈ ಎರಡು ಟೂರ್ನಿಗಳನ್ನು ಗೆಲ್ಲುವತ್ತ ತನ್ನ ಚಿತ್ತ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಅನೇಕ ಪ್ರಯೋಗಳು ನಡೆದಿದ್ದು ಸಾಕಷ್ಟು ಯುವ ಆಟಗಾರರು ಇತ್ತೀಚಿನ ತಿಂಗಳಲ್ಲಿ ಭಾರತ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದಾರೆ.

ನಾಯಕನಾಗಿ ಸತತ ಯಶಸ್ಸು ಸಾಧಿಸುತ್ತಿರುವ ರೋಹಿತ್

ನಾಯಕನಾಗಿ ಸತತ ಯಶಸ್ಸು ಸಾಧಿಸುತ್ತಿರುವ ರೋಹಿತ್

ಇನ್ನು ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕತ್ವವನ್ನು ಪೂರ್ಣಪ್ರಮಾಣದಲ್ಲಿ ವಹಿಸಿಕೊಂಡ ನಾಯಕನಾಗಿ ಮೇಲಿಂದ ಮೇಲೆ ಯಶಸ್ಸು ಸಾಧಿಸುತ್ತಿದ್ದಾರೆ. ವೈಟ್‌ಬಾಲ್ ಟೂರ್ನಿಯಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಸತತವಾಗಿ ಸರಣಿಗಳನ್ನು ಗೆಲ್ಲುತ್ತಾ ಸಾಗುತ್ತಿದೆ. ಅದರಲ್ಲೂ ಟಿ20 ಸರಣಿಯಲ್ಲಿ ಕಳೆದ ಕೆಳ ತಿಂಗಳಿನಿಂದ ಭಾರತ ಯಾವುದೇ ಸರಣಿಯಲ್ಲಿ ಸೋಲು ಅನುಭವಿಸಿಲ್ಲ ಎಂಬುದು ಗಮನಾರ್ಹ ಅಂಶ. ಹೀಗಾಗಿ ಮುಂದಿನ ಏಷ್ಯಾ ಕಪ್ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, August 10, 2022, 13:15 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X