ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

Rohit Sharma Fastest to reach 7000 ODI Runs as Opener

ರಾಜ್‌ಕೋಟ್‌, ಜನವರಿ 17: ಭಾರತದ ಆರಂಭಿಕ ಬ್ಯಾಟ್ಸ್‌ಮನ್, 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ರೋಹಿತ್ ಅರ್ಧ ಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸಿದರಾದರೂ ಅದಾಗಲೇ ಅವರ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿಯಾಗಿತ್ತು.

 ಪಾಕ್ ವಿರುದ್ಧದ ಸರಣಿಗೆ ಬಾಂಗ್ಲಾದ ಪ್ರಮುಖ ಆಟಗಾರ ಹಿಂದೇಟು! ಪಾಕ್ ವಿರುದ್ಧದ ಸರಣಿಗೆ ಬಾಂಗ್ಲಾದ ಪ್ರಮುಖ ಆಟಗಾರ ಹಿಂದೇಟು!

ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 17) ನಡೆದ ಪ್ರವಾಸಿ ಆಸ್ಟ್ರೇಲಿಯಾ ಮತ್ತು ಆತಿಥೇಯ ಭಾರತ ನಡುವಿನ ಎರಡನೇ ಏಕದಿನದಲ್ಲಿ ರೋಹಿತ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ, 2ನೇ ಏಕದಿನ, Live ಸ್ಕೋರ್‌ಕಾರ್ಡ್

1
46131

ರಾಜ್‌ಕೋಟ್‌ ಪಂದ್ಯದಲ್ಲಿ ರೋಹಿತ್‌ಗೆ ಮತ್ತೊಂದು ದಾಖಲೆ ನಿರ್ಮಿಸಲೂ ಅವಕಾಶವಿತ್ತು. ಆದರೆ ಆ ಅವಕಾಶ ಕೇವಲ 4 ರನ್‌ಗಳಿಂದ ಕೈತಪ್ಪಿತು.

ಎಲ್‌ಬಿಡಬ್ಲ್ಯೂಗೆ ಬಲಿ

ಎಲ್‌ಬಿಡಬ್ಲ್ಯೂಗೆ ಬಲಿ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 10 ರನ್‌ ಬಾರಿಸಿ ವಿಕೆಟ್‌ ನೀಡಿದ್ದ ರೋಹಿತ್ ಶರ್ಮಾ, ರಾಜ್‌ಕೋಟ್‌ ಪಂದ್ಯದಲ್ಲಿ 13.3ನೇ ಓವರ್‌ನಲ್ಲಿ ಸ್ಪಿನ್ನರ್ ಆದಂ ಜಂಪಾ ಅವರ ಎಸೆತಕ್ಕೆ ಎಲ್‌ಬಿಡಬ್ಲ್ಯೂ ಆಗಿ ನಿರ್ಗಮಿಸಿದರು. ಆಗ ರೋಹಿತ್ 44 ಎಸೆತಗಳಿಗೆ 42 ರನ್ ಬಾರಿಸಿದ್ದರು. ಇದರಲ್ಲಿ 6 ಬೌಂಡರಿಗಳೂ ಸೇರಿದ್ದವು.

ಅತೀ ವೇಗದ 7000 ರನ್

ಅತೀ ವೇಗದ 7000 ರನ್

32ರ ಹರೆಯದ ರೋಹಿತ್, ಅರ್ಧ ಶತಕದ ಅಂಚಿನಲ್ಲಿ ಔಟಾಗಿ ನಿರಾಸೆ ಅನುಭವಿಸಿದರಾದರೂ ಅದಾಗಲೇ ಅವರ ಹೆಸರಿನಲ್ಲಿ ದಾಖಲೆಯೊಂದು ನಿರ್ಮಾಣವಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 7000 ರನ್ ಪೂರೈಸಿದ ವಿಶ್ವದ ಮುಂಚೂಣಿ ಆಟಗಾರನಾಗಿ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ. ಓಪನರ್ ಆಗಿ ಕೇವಲ 137 ಏಕದಿನ ಇನ್ನಿಂಗ್ಸ್‌ಗಳಲ್ಲಿ ರೋಹಿತ್ 7000 ರನ್ ಬಾರಿಸಿದ್ದಾರೆ.

ಸಚಿನ್, ಗಂಗೂಲಿ ದಾಖಲೆ ಬದಿಗೆ

ಸಚಿನ್, ಗಂಗೂಲಿ ದಾಖಲೆ ಬದಿಗೆ

ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅತೀ ವೇಗದಲ್ಲಿ 7000 ರನ್ ದಾಖಲೆಯಲ್ಲಿ ರೋಹಿತ್ ಈಗ ಮೊದಲ ಸ್ಥಾನದಲ್ಲಿದ್ದಾರೆ. ಇದೇ ಸಾಧನೆ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ (147 ಇನ್ನಿಂಗ್ಸ್), ಭಾರತ ಸಚಿನ್ ತೆಂಡೂಲ್ಕರ್ (160 ಇನ್ನಿಂಗ್ಸ್‌), ಶ್ರೀಲಂಕಾದ ತಿಲಕರತ್ನೆ ದಿಲ್ಶನ್ (165 ಇನ್ನಿಂಗ್ಸ್‌), ಭಾರತದ ಸೌರವ್ ಗಂಗೂಲಿ (168 ಇನ್ನಿಂಗ್ಸ್‌) ಅನಂತರದ ಸ್ಥಾನಗಳಲ್ಲಿದ್ದಾರೆ.

ಮತ್ತೊಂದು ದಾಖಲೆ ಮಿಸ್

ಮತ್ತೊಂದು ದಾಖಲೆ ಮಿಸ್

ಆಸ್ಟ್ರೇಲಿಯಾ ವಿರುದ್ಧದ ಈ ಏಕದಿನ ಸರಣಿಯ ಆರಂಭದಲ್ಲೇ ರೋಹಿತ್‌ಗೆ ವಿಶ್ವದಾಖಲೆ ನಿರ್ಮಿಸಲು ಅವಕಾಶವಿತ್ತು. ಆರಂಭಿಕ ಪಂದ್ಯದಲ್ಲಿ ರೋಹಿತ್ 56 ರನ್ ಗಳಿಸಿದ್ದರೆ, ಏಕದಿನದಲ್ಲಿ ವೇಗದಲ್ಲಿ 9000 ರನ್ ಬಾರಿಸಿದ ದಾಖಲೆಗೆ ಶರ್ಮಾ ಕಾರಣರಾಗುತ್ತಿದ್ದರು. ಆದರೆ ಮೊದಲ ಪಂದ್ಯದಲ್ಲಿ 10, ದ್ವಿತೀಯ ಪಂದ್ಯದಲ್ಲಿ 42 ರನ್‌ ಗಳಿಸಿರುವ ರೋಹಿತ್‌ಗೆ ಇದೇ ದಾಖಲೆ ನಿರ್ಮಿಸಲು ಇನ್ನೂ 4 ರನ್‌ಗಳು ಬೇಕಿವೆ. ಬಹುಶಃ ಮೂರನೇ ಪಂದ್ಯದಲ್ಲಿ ಹಿಟ್‌ಮ್ಯಾನ್‌ ಈ ದಾಖಲೆ ಪೂರೈಸಿಕೊಳ್ಳಬಹುದು.

Story first published: Friday, January 17, 2020, 16:43 [IST]
Other articles published on Jan 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X