ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌: ನಿಯಮ ಉಲ್ಲಂಘಿಸಿದ ರೋಹಿತ್‌ ಶರ್ಮಾಗೆ ದಂಡ

IPL ನಿಯಮ ಉಲ್ಲಂಘನೆ ಮಾಡಿದ ರೋಹಿತ್‌ ಶರ್ಮಾ..!? | Oneindia Kannada
Rohit Sharma fined for breach of conduct

ಕೋಲ್ಕೊತಾ, ಏಪ್ರಿಲ್‌ 29: ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದ ವೇಳೆ ನಿಯಮ ಉಲ್ಲಂಘನೆ ಮಾಡಿದ ಮುಂಬಯಿ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾಗೆ ಅವರ ಪಂದ್ಯದ ಸಂಭಾವನೆಯಲ್ಲಿ ಶೇ.15ರಷ್ಟನ್ನು ದಂಡವಾಗಿ ವಿಧಿಲಸಲಾಗಿದೆ.

ಗುರುಗ್ರಾಮದಲ್ಲಿ ವೋಟ್‌ ಮಾಡಲಿರುವ ವಿರಾಟ್‌ ಕೊಹ್ಲಿಗುರುಗ್ರಾಮದಲ್ಲಿ ವೋಟ್‌ ಮಾಡಲಿರುವ ವಿರಾಟ್‌ ಕೊಹ್ಲಿ

ಈಡನ್‌ ಗಾರ್ಡನ್ಸ್‌ನಲ್ಲಿ ಭಾನುವಾರ ಅಕ್ಷರಶಃ ರನ್‌ ಹೊಳೆಯೇ ಹರಿದು ಫೋರ್‌-ಸಿಕ್ಸರ್‌ಗಳ ಸುರಿಮಳೆಯಾಯಿತು. ಗೆಲ್ಲಲು 233 ರನ್‌ಗಳ ಅಸಾಧ್ಯದ ಮೊತ್ತವನ್ನುಬೆನ್ನತ್ತಿದ ಮುಂಬಯಿ ಇಂಡಿಯನ್ಸ್‌ ತಂಡವನ್ನು ಜಯದ ದಡ ಮುಟ್ಟಿಸುವ ಪ್ರಯತ್ನ ನಡೆಸಿದ ರೋಹಿತ್‌ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ನಿರಾಸೆ ಅನುಭವಿಸಿದರು. ಈ ಸಂದರ್ಭದಲ್ಲಿ ಹತಾಶೆಯಿಂದ ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಬಾರಿಸಿದ್ದರು. ಅವರ ಈ ನಡೆಯಿಂದಾಗಿ ಇದೀಗ ದಂಡ ತೆರುವಂತಾಗಿದೆ.

 ವಿಶ್ವಕಪ್ ನಲ್ಲಿ ಸಿಕ್ಸರ್ ಸುರಿಮಳೆಗೈಯುವ ಪಣ ತೊಟ್ಟ ರಸೆಲ್ ವಿಶ್ವಕಪ್ ನಲ್ಲಿ ಸಿಕ್ಸರ್ ಸುರಿಮಳೆಗೈಯುವ ಪಣ ತೊಟ್ಟ ರಸೆಲ್

ಪಂದ್ಯದ ಎರಡನೇ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಆ ಹೊತ್ತಿಗಾಗಲೇ 3 ಬೌಂಡರಿಗಳೊಂದಿಗೆ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದ ರೋಹಿತ್‌, ರೈಡರ್ಸ್‌ನ ವೇಗಿ ಹ್ಯಾರಿ ಗರ್ನಿ ಅವರ ಬೌಲಿಂಗ್‌ನಲ್ಲಿ ಹುಕ್‌ ಶಾಟ್‌ ಹೊಡೆಯುವ ಪ್ರಯತ್ನದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಡಿಆರ್‌ಎಸ್‌ ಮೊರೆ ಹೋದ ಬಳಿಕ ಟೆಲಿವಿಷನ್‌ ರೀಪ್ಲೇನಲ್ಲಿ ಚೆಂಡು ಲೆಗ್‌ ಸ್ಟಂಪ್‌ಗೆ ತಾಗುವುದು ಸ್ಪಷ್ಟವಾಯಿತು. ಆದರೂ ಅಂಪೈರ್‌ಗಳ ಬಳಿ ಕೆಲಹೊತ್ತು ಚರ್ಚೆ ನಡೆಸಿದ ರೋಹಿತ್‌, ಅಂತಿಮವಾಗಿ ತಮ್ಮ ಬ್ಯಾಟ್‌ನಿಂದ ಸ್ಟಂಪ್ಸ್‌ಗೆ ಬಾರಿಸಿ ಪೆವಿಲಿಯನ್‌ ಕಡೆಗೆ ಹೆಜ್ಜಹಾಕಿದರು. ಪಂದ್ಯದ ಬಳಿಕ ಮ್ಯಾಚ್‌ ರೆಫ್ರಿ ರೋಹಿತ್‌ ಅವರ ನಡೆಗೆ ದಂಡ ವಿಧಿಸಿದರು.

 ಐಪಿಎಲ್‌ನಲ್ಲಿ ಆ್ಯಟಮ್ ಬಾಂಬ್‌ನಂತೆ ಕಾಣಿಸಿ ಠುಸ್ ಪಟಾಕಿ ಆದೋರು! ಐಪಿಎಲ್‌ನಲ್ಲಿ ಆ್ಯಟಮ್ ಬಾಂಬ್‌ನಂತೆ ಕಾಣಿಸಿ ಠುಸ್ ಪಟಾಕಿ ಆದೋರು!

ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಅವರ 34 ಎಸೆತಗಳಲ್ಲಿನ 91 ರನ್‌ಗಳ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 7 ವಿಕೆಟ್‌ಗೆ 198 ರನ್‌ಗಳನ್ನು ಗಳಿಸಿದ ಮುಂಬೈ ಇಂಡಿಯನ್ಸ್‌ ಅಂತಿಮವಾಗಿ 34 ರನ್‌ಗಳ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಪ್ರಸಕ್ತ ಐಪಿಎಲ್‌ನಲ್ಲಿ ಸತತ 6 ಸೋಲುಗಳ ಕೊಂಡಿಯನ್ನು ಕಳಚುವಲ್ಲಿ ಯಶಸ್ವಿಯಾದ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡ, ಮುಂಬಯಿ ಎದುರು 2015ರಿಂದೀಚೆಗೆ ಅನುಭವಿಸಿದ್ದ ಸತತ 8 ಸೋಳುಗಳಿಂದಲೂ ಹೊರಬಂದಿತು.

Story first published: Monday, April 29, 2019, 12:34 [IST]
Other articles published on Apr 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X