ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ20 ರನ್ ಎಷ್ಟು? 30 ರನ್ ದಾಟಲಾಗದೇ ಪರದಾಟ!

ರೋಹಿತ್ ಶರ್ಮಾ ಸದ್ಯ ಟೀಮ್ ಇಂಡಿಯಾದ ಎಲ್ಲಾ ಸ್ವರೂಪದ ಕ್ರಿಕೆಟ್ ತಂಡಗಳ ನಾಯಕನಾಗಿ ಸಾಲು ಸಾಲು ಗೆಲುವುಗಳನ್ನು ಸಾಧಿಸಿ ಮಿಂಚು ಹರಿಸುತ್ತಿದ್ದಾರೆ. ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ನಾಯಕನಾಗಿ ಆಯ್ಕೆಯಾದ ನಂತರ ತಾನು ಮುನ್ನಡೆಸಿರುವ ಯಾವುದೇ ಸರಣಿಯನ್ನೂ ಸಹ ಸೋಲದೇ ಅಬ್ಬರಿಸುತ್ತಿದ್ದಾರೆ. ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವಿಫಲವಾದ ಬೆನ್ನಲ್ಲೇ ನಾಯಕತ್ವವನ್ನು ಬದಲಿಸಿದ ಬಿಸಿಸಿಐ ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ಮಾಡಿ ಮುಂಬರುವ ವಿಶ್ವಕಪ್ ಹಾಗೂ ಮಹತ್ವದ ಟ್ರೋಫಿಗಳನ್ನು ಗೆಲ್ಲಲೇಬೇಕೆಂಬ ಯೋಜನೆಯನ್ನು ನೀಡಿದೆ.

ಮಹಾರಾಜ ಟ್ರೋಫಿ: ನಾಯಕನಾಗಿ ಮಕಾಡೆ ಮಲಗಿದ ಕೃಷ್ಣಪ್ಪ ಗೌತಮ್; ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಸೋಲು!ಮಹಾರಾಜ ಟ್ರೋಫಿ: ನಾಯಕನಾಗಿ ಮಕಾಡೆ ಮಲಗಿದ ಕೃಷ್ಣಪ್ಪ ಗೌತಮ್; ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಸೋಲು!

ಇನ್ನು ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ನಡೆದಿರುವ ಟಿ 20 ವಿಶ್ವಕಪ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಇದಕ್ಕೂ ಮುನ್ನ ಯುಎಇ ನೆಲದಲ್ಲಿ ನಡೆಯಲಿರುವ ಮಿನಿ ಟಿ ಟ್ವೆಂಟಿ ವಿಶ್ವಕಪ್ ಎಂದೇ ಹೇಳಬಹುದಾದ ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯಲಿದೆ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಷ್ಟೇ ಈ ಏಷ್ಯಾಕಪ್ ಟೂರ್ನಿಯೂ ಸಹ ಬಹುಮುಖ್ಯದ್ದಾಗಿದ್ದು, ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸೋತಿದ್ದರ ಪ್ರತೀಕಾರವನ್ನು ಈ ಬಾರಿಯ ಏಷ್ಯಾಕಪ್‌ನಲ್ಲಿಯೇ ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಕಳೆದ ಬಾರಿ ಏಕದಿನ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್‌ ಈ ಬಾರಿ ಟಿ20 ಮಾದರಿಯಲ್ಲಿ ನಡೆಯಲು ಕಾರಣವೇನು?ಕಳೆದ ಬಾರಿ ಏಕದಿನ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್‌ ಈ ಬಾರಿ ಟಿ20 ಮಾದರಿಯಲ್ಲಿ ನಡೆಯಲು ಕಾರಣವೇನು?

ಈ ಬಾರಿಯ ಏಷ್ಯಾಕಪ್ ಟೂರ್ನಿ ಆಗಸ್ಟ್ 27ರಂದು ಆರಂಭವಾಗಲಿದ್ದು, ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಡೆಯಲಿದೆ. ಇನ್ನು ಈ ಬದ್ಧ ವೈರಿಗಳ ಕಾಳಗ ವೀಕ್ಷಿಸಲು ದಿನಗಣನೆ ಆರಂಭವಾಗಿದ್ದು, ಎರಡೂ ತಂಡಗಳಲ್ಲಿ ಯಾವ ತಂಡ ಪಂದ್ಯ ಗೆಲ್ಲಬಹುದು, ಯಾವುದು ಬಲಿಷ್ಠ ತಂಡ ಎಂಬ ಚರ್ಚೆಗಳು ಆರಂಭವಾಗಿವೆ. ಇನ್ನು ಎರಡು ತಂಡಗಳ ಈ ಹಿಂದಿನ ಟಿ ಟ್ವೆಂಟಿ ಮುಖಾಮುಖಿಯ ಕುರಿತೂ ಸಹ ಚರ್ಚೆಗಳು ಆರಂಭವಾಗಿದ್ದು, ಹಳೆಯ ಪಂದ್ಯಗಳಲ್ಲಿ ಯಾವ ಆಟಗಾರ ಎಷ್ಟು ರನ್ ಬಾರಿಸಿದ್ದಾರೆ ಎಂಬುದರ ಕುರಿತ ಮಾಹಿತಿಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹರಿದಾಡುತ್ತಿದೆ. ಅದರಲ್ಲಿಯೂ ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಆಟಗಾರರ ಪೈಕಿ ಕೆಲವರು ಪಾಕ್ ವಿರುದ್ಧ ಹಲವು ವರ್ಷಗಳಿಂದ ಟಿ ಟ್ವೆಂಟಿ ಹಣಾಹಣಿಯಲ್ಲಿ ಕಣಕ್ಕಿಳಿದಿದ್ದು, ವಿಶೇಷವಾಗಿ ರೋಹಿತ್ ಶರ್ಮಾ 2007ರ ಟಿ ಟ್ವೆಂಟಿ ವಿಶ್ವಕಪ್‌ನಿಂದಲೂ ಪಾಕ್ ವಿರುದ್ಧ ಟಿ ಟ್ವೆಂಟಿ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಹೀಗೆ ಸುದೀರ್ಘವಾಗಿ ಪಾಕ್ ವಿರುದ್ಧ ಟಿ ಟ್ವೆಂಟಿ ಪಂದ್ಯಗಳನ್ನಾಡುತ್ತಿರುವ ರೋಹಿತ್ ಶರ್ಮಾ ಒಟ್ಟು ಎಷ್ಟು ಪಂದ್ಯಗಳನ್ನಾಡಿದ್ದಾರೆ ಹಾಗೂ ಪ್ರತೀ ಇನ್ನಿಂಗ್ಸ್‌ನಲ್ಲೂ ಎಷ್ಟು ರನ್ ಕಲೆಹಾಕಿದ್ದಾರೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ ಟ್ವೆಂಟಿ ರನ್

ಪಾಕ್ ವಿರುದ್ಧ ರೋಹಿತ್ ಗಳಿಸಿರುವ ಟಿ ಟ್ವೆಂಟಿ ರನ್

ರೋಹಿತ್ ಶರ್ಮಾ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಒಟ್ಟು 7 ಪಂದ್ಯಗಳಲ್ಲಿ ಕಣಕ್ಕಿಳಿದು ಒಟ್ಟು 70 ರನ್ ಮಾತ್ರ ಕಲೆಹಾಕಿದ್ದಾರೆ. ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧದ ಈ ಏಳು ಇನ್ನಿಂಗ್ಸ್ ಪೈಕಿ ಯಾವುದೇ ಇನ್ನಿಂಗ್ಸ್‌ನಲ್ಲಿಯೂ ಸಹ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗದೇ ಮಂಕಾಗಿದ್ದಾರೆ.

ಪ್ರತೀ ಇನ್ನಿಂಗ್ಸ್‌ನ ರನ್ ವಿವರ

ಪ್ರತೀ ಇನ್ನಿಂಗ್ಸ್‌ನ ರನ್ ವಿವರ

ರೋಹಿತ್ ಶರ್ಮಾ ಪಾಕಸ್ತಾನದ ವಿರುದ್ಧದ ಆಡಿರುವ ಏಳು ಟಿ ಟ್ವೆಂಟಿ ಇನ್ನಿಂಗ್ಸ್‌ನ ಪ್ರತೀ ಇನ್ನಿಂಗ್ಸ್‌ನಲ್ಲೂ ಬಾರಿಸಿರುವ ರನ್ ವಿವರ

2007ರ ಟಿ ಟ್ವೆಂಟಿ ವಿಶ್ವಕಪ್ ಫೈನಲ್‌ನಲ್ಲಿ 16 ಎಸೆತಗಳಲ್ಲಿ ಅಜೇಯ 30 ರನ್ ( ಇದು ರೋಹಿತ್ ಪಾಕ್ ವಿರುದ್ಧ ರನ್ ಗಳಿಸಿರುವ ಅತ್ಯಧಿಕ ರನ್ ಆಗಿದ್ದು, ಇದಕ್ಕಿಂತ ಹೆಚ್ಚು ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿಲ್ಲ )

ಪಾಕ್ ವಿರುದ್ಧದ ತನ್ನ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ 2 ಎಸೆತಗಳಲ್ಲಿ 2 ರನ್

ಪಾಕ್ ವಿರುದ್ಧದ ತನ್ನ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ 2 ಎಸೆತಗಳಲ್ಲಿ ಅಜೇಯ 4 ರನ್

ಪಾಕ್ ವಿರುದ್ಧದ ತನ್ನ ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ 21 ಎಸೆತಗಳಲ್ಲಿ 24 ರನ್

ಪಾಕ್ ವಿರುದ್ಧದ ತನ್ನ ಐದನೇ ಟಿ ಟ್ವೆಂಟಿ ಪಂದ್ಯದಲ್ಲಿ 2 ಎಸೆತಗಳಲ್ಲಿ 0

ಪಾಕ್ ವಿರುದ್ಧದ ತನ್ನ ಆರನೇ ಟಿ ಟ್ವೆಂಟಿ ಪಂದ್ಯದಲ್ಲಿ 11 ಎಸೆತಳಲ್ಲಿ 10 ರನ್

ಪಾಕ್ ವಿರುದ್ಧದ ತನ್ನ ಏಳನೇ ಟಿ ಟ್ವೆಂಟಿ ಪಂದ್ಯಗಳಲ್ಲಿ 1 ಎಸೆತದಲ್ಲಿ 0

ಕಳೆದ ಮೂರು ಪಂದ್ಯಗಳಲ್ಲಿ ಎರಡು ಡಕ್ ಔಟ್

ಕಳೆದ ಮೂರು ಪಂದ್ಯಗಳಲ್ಲಿ ಎರಡು ಡಕ್ ಔಟ್

ಕಳೆದ ಮೂರು ಟಿ ಟ್ವೆಂಟಿಯಲ್ಲಿ ಎರಡು ಬಾರಿ ಡಕ್ ಔಟ್ ಔಟ್ ಆಗಿದ್ದು, ಇನ್ನೊಮ್ಮೆ ಹತ್ತು ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ರೋಹಿತ್ ಪಾಕ್ ವಿರುದ್ಧದ ಇತ್ತೀಚೆಗಿನ ಟಿ ಟ್ವೆಂ ಟಿ ಪಂದ್ಯಗಳಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನ ಪಾಕ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಗೋಲ್ಡನ್ ಡಕ್ ಔಟ್ ಆಗಿದ್ದರು.

For Quick Alerts
ALLOW NOTIFICATIONS
For Daily Alerts
Story first published: Tuesday, August 16, 2022, 12:58 [IST]
Other articles published on Aug 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X