ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯ ಕುಮಾರ್ ರನ್‌ ಔಟ್ ಬಗ್ಗೆ ಪ್ರತಿಕ್ರಿಯೆ: ರೋಹಿತ್ ಮಾತಿಗೆ ಮೆಚ್ಚುಗೆ

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಸೂರ್ಯ ಕುಮಾರ್ ಯಾದವ್ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ಅವರ ಆಟದ ಬಗ್ಗೆ ಕ್ರಿಕೆಟ್ ದಿಗ್ಗಜರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಡೆಲ್ಲಿ ವಿರುದ್ಧದ ಫೈನಲ್ ಪಂದ್ಯದಲ್ಲೂ 19 ರನ್ ಹೊಡೆದು ರೋಹಿತ್ ಜೊತೆ ಉತ್ತಮ ಜೊತೆಯಾಟ ನೀಡುತ್ತಿದ್ದರು. 10 ಓವರ್‌ಗೆ 90 ರನ್ ಬಾರಿಸಿದ ಮುಂಬೈ ಗೆಲುವಿನ ಹಾದಿಯಲ್ಲಿತ್. ಈ ಹಂತದಲ್ಲಿ ಬೇಡವಾದ ರನ್ ಕದಿಯುವ ಯತ್ನದಲ್ಲಿ ಸೂರ್ಯ ಕುಮಾರ್ ಯಾದವ್ ರನ್ ಔಟ್ ಆದರು.

ಐಪಿಎಲ್ 2020 ಫೈನಲ್: ನಾಯಕನನ್ನು ರಕ್ಷಿಸಲು ರನ್‌ಔಟ್ ಆದ ಸೂರ್ಯಕುಮಾರ್‌ಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆಐಪಿಎಲ್ 2020 ಫೈನಲ್: ನಾಯಕನನ್ನು ರಕ್ಷಿಸಲು ರನ್‌ಔಟ್ ಆದ ಸೂರ್ಯಕುಮಾರ್‌ಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆ

ಹಾಗ್ನೋಡಿದ್ರೆ, ನಾಯಕ ರೋಹಿತ್ ಶರ್ಮಾ ರನ್ ಔಟ್ ಆಗಬೇಕಿತ್ತು. ಆದ್ರೆ, ರೋಹಿತ್ ಅವರ ಉತ್ತಮ ಆಟದ ಬಗ್ಗೆ ತಿಳಿದ ಸೂರ್ಯ ತಮ್ಮ ವಿಕೆಟ್ ತ್ಯಾಗ ಮಾಡಿ ಹೊರನಡೆದರು. ಸೂರ್ಯ ಅವರ ನಿರ್ಧಾರದ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಗ್ಗೆ ರೋಹಿತ್ ಶರ್ಮಾ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ....

'ನಾನು ವಿಕೆಟ್ ತ್ಯಾಗ ಮಾಡಬೇಕಿತ್ತು'

'ನಾನು ವಿಕೆಟ್ ತ್ಯಾಗ ಮಾಡಬೇಕಿತ್ತು'

ರನ್‌ ಔಟ್‌ ವೇಳೆ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಬೇಕಿತ್ತು. ರೋಹಿತ್ ಉತ್ತಮ ಲಯದಲ್ಲಿದ್ದ ಕಾರಣ ನಾಯಕನಿಗಾಗಿ ತನ್ನ ವಿಕೆಟ್ ಒಪ್ಪಿಸಿದ್ದರು ಸೂರ್ಯ ಕುಮಾರ್. ಈ ಕುರಿತು ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಕ್ರಿಯೆ ನೀಡಿದ ರೋಹಿತ್ ಶರ್ಮಾ, ''ಸೂರ್ಯ ಕುಮಾರ್ ಟೂರ್ನಿಯಲ್ಲಿ ಇದ್ದ ಲಯ ಗಮನಿಸಿದರೆ ನಾನು ವಿಕೆಟ್ ತ್ಯಾಗ ಮಾಡಬೇಕಿತ್ತು. ಸೂರ್ಯ ಕುಮಾರ್ ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು'' ಎಂದಿದ್ದಾರೆ.

ಸೂರ್ಯ ವಿಕೆಟ್ ತ್ಯಾಗ ವ್ಯರ್ಥವಾಗಲಿಲ್ಲ

ಸೂರ್ಯ ವಿಕೆಟ್ ತ್ಯಾಗ ವ್ಯರ್ಥವಾಗಲಿಲ್ಲ

ಸೂರ್ಯ ಕುಮಾರ್ ಯಾದವ್ ತಂಡಕ್ಕಾಗಿ ಆಡುವ ಆಟಗಾರ ಎಂದು ಈ ರನ್‌ ಔಟ್‌ನಲ್ಲಿ ಸಾಬೀತು ಪಡಿಸಿದ್ದಾರೆ. ಟೂರ್ನಿಯಲ್ಲಿ ಸೂರ್ಯ ಒಳ್ಳೆಯ ಲಯದಲ್ಲಿದ್ದರು. ರೋಹಿತ್ ಶರ್ಮಾ ಫಾರ್ಮ್‌ನಲ್ಲಿ ಇರಲಿಲ್ಲ. ಅದೃಷ್ಟವಶಾತ್ ಫೈನಲ್ ಪಂದ್ಯದಲ್ಲಿ ರೋಹಿತ್ ಉತ್ತಮ ಆಟ ಆಡಿದರು. ತಂಡವನ್ನು ಗೆಲುವಿನ ದಡಕ್ಕೆ ತಂದು ಬಿಟ್ಟರು. ಸೂರ್ಯ ವಿಕೆಟ್ ತ್ಯಾಗ ಮಾಡಿದ್ದು ವ್ಯರ್ಥ ಆಗಲಿಲ್ಲ.

ನೆಟ್ಟಿಗರಿಂದ ಭಾರಿ ಮೆಚ್ಚುಗೆ

ನೆಟ್ಟಿಗರಿಂದ ಭಾರಿ ಮೆಚ್ಚುಗೆ

ರೋಹಿತ್ ಶರ್ಮಾಗಾಗಿ ಸೂರ್ಯ ಕುಮಾರ್ ಯಾದವ್ ವಿಕೆಟ್ ತ್ಯಾಗ ಮಾಡಿದ್ದಕ್ಕಾಗಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕ ಒಳ್ಳೆಯ ಲಯದಲ್ಲಿದ್ದರು. ಸ್ವಾರ್ಥಕ್ಕೆ ಬಲಿಯಾಗದೆ, ನಾಯಕನಿಗೆ ಅವಕಾಶ ಕೊಡುವ ಉದ್ದೇಶದಿಂದ ವಿಕೆಟ್ ಒಪ್ಪಿಸಿದ್ದು ನಿಜಕ್ಕೂ ಸ್ವಾಗತರ್ಹ ಎಂದಿದ್ದಾರೆ.

ದಾಖಲೆ ಮಿಸ್ ಆಯ್ತು

ದಾಖಲೆ ಮಿಸ್ ಆಯ್ತು

ಸೂರ್ಯ ಕುಮಾರ್ ಈ ಹೀಗೆ ವಿಕೆಟ್ ಒಪ್ಪಿಸುವ ಮೂಲಕ ಮಹತ್ವದ ಮೈಲಿಗಲ್ಲೊಂದನ್ನು ಕೂಡ ತಪ್ಪಿಸಿಕೊಂಡಿದ್ದಾರೆ. ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ 500+ ರನ್ ಗಳಿಸುವ ಅವಕಾಶ ಸೂರ್ಯಕುಮಾರ್ ಯಾದವ್ ಮುಂದಿತ್ತು. ಆದರೆ ಕೇವಲ 20 ರನ್‌ಗಳಿಂದ ಇದನ್ನು ತಪ್ಪಿಸಿಕೊಂಡರು. 2020ನೇ ಐಪಿಎಲ್‌ನಲ್ಲಿ 480 ರನ್ ಬಾರಿಸಿದ್ದರು.

Story first published: Wednesday, November 11, 2020, 13:41 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X