ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ರೋಹಿತ್ ವಿದೇಶಿ ನೆಲದಲ್ಲೂ ದ್ವಿಶತಕ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ: ವಾಸಿಮ್ ಜಾಫರ್

Rohit Sharma Has The Ability To Score Double Hundreds In Overseas Tests: Wasim Jaffer

ಮಾಜಿ ಟೀಮ್ ಇಂಡಿಯಾದ ಆಟಗಾರ ರಣಜಿ ಕ್ರಿಕೆಟ್‌ನ ದಿಗ್ಗಜ ವಾಸಿಮ್ ಜಾಫರ್ ರೋಹಿತ್ ಶರ್ಮಾ ಆಟದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಭಡ್ತಿ ಪಡೆದಿರುವ ಶರ್ಮಾ ವಿದೇಶದಲ್ಲಿ ಟೆಸ್ಟ್ ಪಂದ್ಯದಲ್ಲಿ ಭಾರತದ ಪರವಾಗಿ ದ್ವಿಶತಕ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ ತಮ್ಮ ಆಟದ ಸಾಮರ್ಥ್ಯವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೀಗಾಗಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ಮಿಂಚಲು ಉತ್ತಮ ಅವಕಾಶವಿದೆ ಎಂದು ವಾಸಿಮ್ ಜಾಫರ್ ಹೇಳಿದ್ದಾರೆ. ಆಕಾಶ್ ಚೋಪ್ರಾ ಜೋತೆಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಜಾಫರ್ ಈಗ ರೋಹಿತ್ ಶರ್ಮಾ ತಮ್ಮ ಆಟವನ್ನು ಬಹಳಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎನಿಸುತ್ತಿದೆ ಎಂದಿದ್ದಾರೆ.

ರೋಹಿತ್ ಟೀಮ್ ಇಂಡಿಯಾ ನಾಯಕನಾಗಲಿ: ಶರ್ಮಾ ಬೆಂಬಲಕ್ಕೆ ಐವರು ಹಿರಿಯ ಕ್ರಿಕೆಟಿಗರುರೋಹಿತ್ ಟೀಮ್ ಇಂಡಿಯಾ ನಾಯಕನಾಗಲಿ: ಶರ್ಮಾ ಬೆಂಬಲಕ್ಕೆ ಐವರು ಹಿರಿಯ ಕ್ರಿಕೆಟಿಗರು

2019ರಲ್ಲಿ ರೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟಾರೆ 2442 ರನ್ ಗಳಿಸಿದ್ದರು. ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ದಾಖಲೆಯ ಐದು ಶತಕ ಬಾರಿಸಿ ಮಿಂಚಿದ್ದರು. ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಕಳೆದ ವರ್ಷ ಏಳು ಶತಕವನ್ನು ದಾಖಲಿಸಿದ್ದರು.

ಪ್ರಸಕ್ತ ಕಾಲದ ಆಟಗಾರರ ಪೈಕಿ ರೋಹಿತ್ ಶರ್ಮಾ ಅತ್ಯುತ್ತಮ ವೈಟ್‌ಬಾಲ್ ಆರಂಭಿಕ ಆಟಗಾರ ಎನಿಸಿದ್ದಾರೆ. 2019ರಲ್ಲಿ ಟೆಸ್ಟ್ ಕ್ರಿಕೆಟರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿಗೆ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದು ಯಶಸ್ಸನ್ನು ಕಂಡಿದ್ದಾರೆ. ಆರಂಭಿಕನಾಗಿ ತಮ್ಮ ಮೊದಲ ಟೆಸ್ಟ್ ಸರಣಿಯಲ್ಲಿ ಶರ್ಮಾ 2 ಶತಕ ಹಾಗೂ ಒಂದು ದ್ವಿಶತಕದ ನೆರವಿನಿಂದ 529 ರನ್‌ಗಳನ್ನು ಗಳಿಸಿದ್ದರು.

ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಬದಲು ಈ ಆಟಗಾರ ಉತ್ತಮ: ಎಸ್ ಶ್ರೀಶಾಂತ್ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಬದಲು ಈ ಆಟಗಾರ ಉತ್ತಮ: ಎಸ್ ಶ್ರೀಶಾಂತ್

ಈಗ ನಾವು ನೋಡುತ್ತಿರುವುದು ಹಿಂದೆ ನೋಡಿದ ರೋಹಿತ್ ಶರ್ಮಾ ಅಲ್ಲ. ರೋಹಿತ್ ಶರ್ಮಾಗೆ ಈಗ ಎಲ್ಲಿ ತಾಳ್ಮೆಯಿಂದ ಆಡಬೇಕು ಎಂದು ತಿಳಿದಿದೆ. ಇದನ್ನು ಏಕದಿನ ಪಂದ್ಯಗಳಲ್ಲೂ ಅವರು ಕಂಡುಕೊಂಡಿದ್ದಾರೆ. ಕಳೆದ ವಿಶ್ವಕಪ್‌ನ ಪಂದ್ಯಗಳಲ್ಲಿ ರೋಹಿತ್ ಆಟವನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ ಎಂದು ವಾಸಿಮ್ ಜಾಫರ್ ಹೇಳಿದ್ದಾರೆ.

Story first published: Thursday, July 9, 2020, 17:04 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X