ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯರ ವಿಶಿಷ್ಟ ಸಾಧನೆಗೆ ರೋಹಿತ್‌ಗೆ ಬೇಕು ಇನ್ನೆರಡು ಶತಕ!

ಇನ್ನೆರಡು ಶತಕ ಸಿಡಿಸಿದ್ರೆ ರೋಹಿತ್ ಹೆಸರಲ್ಲಿ ನಿರ್ಮಾಣವಾಗಲಿದೆ ಇತಿಹಾಸ | Rohit Sharma | Oneindia Kannada
Rohit Sharma Hit The 29th ODI Hundred Of His Career

ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಈ ವರ್ಷದ ಮೊದಲ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಕಳೆದ ವರ್ಷದ ಅದ್ಭುತ ಫಾರ್ಮನ್ನು ಮುಂದುವರಿಸಿದ್ದಾರೆ. ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ ಉತ್ತಮ ಪ್ರದರ್ಶನ ಬಂದಿರಲಿಲ್ಲ. ನಿರ್ಣಾಯಕ ಪಂದ್ಯದಲ್ಲು ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ. ಮಾತ್ರವಲ್ಲ ಆಸ್ಟ್ರೇಲಿಯಾ ವಿರುದ್ಧ 8 ಶತಕ ಸಿಡಿಸಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಸಾಧನೆಗೆ ಸಮನಾಗಿದ್ದಾರೆ.

ಆಸ್ಟ್ರೇಲಿಯಾ vs ಭಾರತ: ನಾಯಕನಾಗಿ ಕೊಹ್ಲಿ ಮತ್ತೊಂದು ದಾಖಲೆಆಸ್ಟ್ರೇಲಿಯಾ vs ಭಾರತ: ನಾಯಕನಾಗಿ ಕೊಹ್ಲಿ ಮತ್ತೊಂದು ದಾಖಲೆ

ರೋಹಿತ್ ಶರ್ಮಾ ಈ ಶತಕದ ಮೂಲಕ 29ನೇ ಶತಕವನ್ನು ದಾಖಲಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅತಿಹೆಚ್ಚು ಶತಕಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ ಅವರನ್ನು ಕೆಳಕ್ಕೆ ತಳ್ಳಲು ರೋಹಿತ್‌ಗೆ ಬೇಕಿರುವುದು ಇನ್ನು ಕೇವಲ ಎರಡು ಶತಕ ಮಾತ್ರ.

ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ ರಾಹುಲ್: ವಿರಾಟ್ ಕೊಹ್ಲಿವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ ರಾಹುಲ್: ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ ಇನ್ನು ಎರಡು ಶತಕಗಳನ್ನು ದಾಖಲಿಸಿದರೆ ಶತಕಗಳ ಪಟ್ಟಿಯಲ್ಲಿ ವಿಶಿಷ್ಟ ದಾಖಲೆಯೊಂದು ನಿರ್ಮಾಣವಾಗಲಿದೆ. ಅತಿ ಹೆಚ್ಚು ಏಕದಿನ ಶತಕಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳು ಭಾರತೀಯರ ಹೆಸರಿನಲ್ಲೇ ಇರಲಿದೆ. 49 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 43 ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಜಯಸೂರ್ಯ ಅವರ ಶತಕದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಜಯಸೂರ್ಯ ಅವರೊಂದಿಗೆ ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದ್ದರು. ನಿನ್ನೆಯ ಪಂದ್ಯದ ಮೂಲಕ ಜಯಸೂರ್ಯ ಅವರನ್ನು ಐದನೇ ಸ್ಥಾನಕ್ಕೆ ತಳ್ಳಿದ್ದಾರೆ.

ಇದಕ್ಕೂ ಮುನ್ನ ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ 9000ರನ್ಗಳ ಗಡಿ ದಾಟಿದ ಸಾಧನೆಯನ್ನು ಮಾಡಿದರು. ಜೊತೆಗೆ ವೇಗವಾಗಿ ಈ ಮೈಲಿಗಲ್ಲು ದಾಟಿದ ಎರಡನೇ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.

Story first published: Monday, January 20, 2020, 13:54 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X