ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ದಿನಗಳ 'ಸಿಕ್ಸರ್ ಕಿಂಗ್' ರೋಹಿತ್ ಶರ್ಮಾ ಎನ್ನುತ್ತಿವೆ ಅಂಕಿ-ಅಂಶಗಳು!

Rohit Sharma holds Most SIXES record in T20Is in a calendar year

ರಾಜ್‌ಕೋಟ್‌, ನವೆಂಬರ್ 8: ನಾಯಕ ರೋಹಿತ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಮೆನ್‌ ಇನ್ ಬ್ಲೂ ತಂಡ, ಬಾಂಗ್ಲಾ ಟೈಗರ್ಸ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ 8 ವಿಕೆಟ್ ಜಯ ದಾಖಲಿಸಿ, 3 ಪಂದ್ಯಗಳ ಟಿ20 ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ 2000 ರನ್​ ದಾಖಲಿಸಿದ ಸ್ಮೃತಿಏಕದಿನ ಕ್ರಿಕೆಟ್ ನಲ್ಲಿ ತ್ವರಿತವಾಗಿ 2000 ರನ್​ ದಾಖಲಿಸಿದ ಸ್ಮೃತಿ

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 7) ನಡೆದ ಬಾಂಗ್ಲಾ vs ಭಾರತ ನಡುವಿನ 2ನೇ ಟಿ20ಯಲ್ಲಿ ರೋಹಿತ್ ಪಡೆ, ಸುಲಭ ಗೆಲುವನ್ನಾಚರಿಸಿ, ಸರಣಿ ಸೋಲಿನ ಮುಖಭಂಗ ತಪ್ಪಿಸಿತ್ತು. (ಸಂಕ್ಷಿಪ್ತ ಸ್ಕೋರ್: ಬಾಂಗ್ಲಾ 153 ರನ್, 6 ವಿ., 20 ಓ., ಭಾರತ 154 ರನ್, 2 ವಿ., 15.4 ಓ.)

ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!

ಗುರುವಾರ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದ ರೋಹಿತ್, ಸಿಕ್ಸ್‌ ಮೇಲೆ ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದರಲ್ಲದೆ, ಹಲವಾರು ದಾಖಲೆಗಳಿಗೂ ಕಾರಣರಾಗಿದ್ದರು.

ವೇಗದ ಅರ್ಧ ಶತಕ

ವೇಗದ ಅರ್ಧ ಶತಕ

ರಾಜ್‌ಕೋಟ್‌ ಪಂದ್ಯದಲ್ಲಿ ಹಿಟ್‌ಮ್ಯಾನ್ ರೋಹಿತ್ 43 ಎಸತಗಳಿಗೆ 85 ರನ್ ಸಿಡಿಸಿದರು. ಇದರಲ್ಲಿ 6 ಸಿಕ್ಸರ್, 6 ಬೌಂಡರಿಗಳು ಸೇರಿವೆ. ಅಲ್ಲದೇ ಇದೇ ಪಂದ್ಯದಲ್ಲಿ ರೋಹಿತ್ ಎರಡನೇ ವೇಗದ ಅರ್ಧ ಶತಕಕ್ಕಾಗಿಯೂ ಗುರುತಿಸಿಕೊಂಡಿದ್ದಾರೆ. 10ನೇ ಓವರ್‌ನಲ್ಲಿ ಆರಂಭದಲ್ಲಿ ಮೊಸದ್ದೆಕ್ ಹೊಸೇನ್ ಎಸೆತಕ್ಕೆ ಹ್ಯಾಟ್ರಿಕ್ ಸಿಕ್ಸ್‌ ಬಾರಿಸಿದ ರೋಹಿತ್ ಒಂದು ಕ್ಷಣ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರನ್ನು ನೆನಪಿಸಿದರು. ಈ ಪಂದ್ಯದಲ್ಲಿ ರೋಹಿತ್ ತೋರಿಸಿದ ಸ್ಟ್ರೈಕ್‌ ರೇಟ್ 197.67.

ಈ ದಿನಗಳ ಸಿಕ್ಸರ್ ಕಿಂಗ್

ಈ ದಿನಗಳ ಸಿಕ್ಸರ್ ಕಿಂಗ್

ಭಾರತದ ಸ್ಫೋಟಕ ದಾಂಡಿಗ ಯುವರಾಜ್‌ ಸಿಂಗ್ ಅವರ ಸ್ಥಾನಕ್ಕೆ ಇನ್ಯಾರನ್ನೂ ಊಹಿಸಲು ಸಾಧ್ಯವಿಲ್ಲ. ಭಾರತ ತಂಡದ ಪರ ಆ ಪರಿಯ ಬ್ಯಾಟಿಂಗ್ ರಸದೌತಣ ನೀಡಿದ್ದವರು ಯುವಿ. ರೋಹಿತ್ ಶರ್ಮಾ ಅವರನ್ನು ಯುವರಾಜ್‌ಗೆ ಹೋಲಿಸಲಾಗದು. ಆದರೆ ಶರ್ಮಾ ಕೂಡ ಈ ದಿನಗಳ ಸಿಕ್ಸರ್ ಕಿಂಗ್‌ ಆಗಿ ಕಾಣಿಸುತ್ತಿರುವುದು ಸುಳ್ಳಲ್ಲ. ಏಕದಿನ, ಟಿ20 ಅಷ್ಟೇಯಾಕೆ ಟೆಸ್ಟ್‌ನಲ್ಲೂ ಸಿಕ್ಸ್‌ ಮೇಲೆ ಸಿಕ್ಸ್ ಬಾರಿಸುತ್ತಿರುವ ರೋಹಿತ್, ಸಿಕ್ಸ್‌ಗಾಗಿಯೇ ದಾಖಲೆಗಳನ್ನು ಬರೆಯುತ್ತಿದ್ದಾರೆ.

ವರ್ಷದಲ್ಲಿ ದಾಖಲೆ ಸಿಕ್ಸ್‌ಗಳು

ವರ್ಷದಲ್ಲಿ ದಾಖಲೆ ಸಿಕ್ಸ್‌ಗಳು

ಕಳೆದ ಮೂರೂ ವರ್ಷಗಳ ದಾಖಲೆ ತೆಗೆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ವರ್ಷವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೊಂದಿದ್ದಾರೆ. 2017ರಲ್ಲಿ 65 ಸಿಕ್ಸ್‌ಗಳು, 2018ರಲ್ಲಿ 74 ಸಿಕ್ಸ್‌ಗಳು ಬಾರಿಸಿರುವ ರೋಹಿತ್, 2019ರಲ್ಲಿ 66 ಸಿಕ್ಸ್‌ ಬಾರಿಸಿದ್ದಾರೆ. ಇನ್ನು 2015ರಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ 63 ಸಿಕ್ಸ್‌ ಬಾರಿಸಿ ದಾಖಲೆ ನಿರ್ಮಿಸಿದ್ದರು.

ವಿಶ್ವದ ಅತ್ಯಧಿಕ ಸಿಕ್ಸ್ ಸರದಾರ

ವಿಶ್ವದ ಅತ್ಯಧಿಕ ಸಿಕ್ಸ್ ಸರದಾರ

ಅಂತಾರಾಷ್ಟ್ರೀಯ ಟಿ20 ಅತ್ಯಧಿಕ ರನ್‌ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ (ರೋಹಿತ್ 2537 ರನ್, ವಿರಾಟ್ ಕೊಹ್ಲಿ 2450 ರನ್) ರೋಹಿತ್ ಅತ್ಯಧಿಕ ಸಿಕ್ಸ್‌ಗಾಗಿಯೂ ವಿಶ್ವ ನಂ.1 ಸ್ಥಾನ ಅಲಂಕರಿಸಿದ್ದಾರೆ. ಒಟ್ಟು 92 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ರೋಹಿತ್ 115 ಸಿಕ್ಸ್‌ ಬಾರಿಸಿದ್ದಾರೆ. ಈ ಯಾದಿಯಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್‌ ಗೇಲ್ (105 ಸಿಕ್ಸ್‌), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (105 ಸಿಕ್ಸ್), ಕಾಲಿನ್ ಮುನ್ರೋ (96 ಸಿಕ್ಸ್), ಬ್ರೆಂಡನ್ ಮೆಕಲಮ್ (91 ಸಿಕ್ಸ್) ಅನಂತರದ ಸ್ಥಾನಗಳಲ್ಲಿ ಇದ್ದಾರೆ.

Story first published: Friday, November 8, 2019, 12:20 [IST]
Other articles published on Nov 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X